ETV Bharat / bharat

ಛತ್ತೀಸ್​ಗಡ ನಕ್ಸಲ್​ ದಾಳಿ: ಕೃತ್ಯದ ರೂವಾರಿ ಹಿಡ್ಮಾ ಹಿನ್ನೆಲೆ ಗೊತ್ತಾ? - ಬಿಜಾಪುರದಲ್ಲಿ ನಕ್ಸಲರ ದಾಳಿ

ಟರ್ರೆಮ್​ನಲ್ಲಿ ಹಿಡ್ಮಾ ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ, ಶನಿವಾರದಂದು ಕಾರ್ಯಾಚರಣೆ ನಡೆಸಿದರು. ಆದರೆ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ 22 ಮಂದಿ ಸಾವನ್ನಪ್ಪಿದರು. ಈ ದಾಳಿಯ ಮಾಸ್ಟರ್ ಮೈಂಡ್ ಮೋಸ್ಟ್ ವಾಂಟೆಡ್ ನಕ್ಸಲೈಟ್ ಹಿಡ್ಮಾ. ಪೊಲೀಸ್ ಗುಪ್ತಚರ ಇಲಾಖೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಗಳ ಪ್ರಕಾರ, ಈತ ನಕ್ಸಲ್​ ರಾಮಣ್ಣನಿಗಿಂತ ಹೆಚ್ಚು ಅಪಾಯಕಾರಿ.

Hidma
ಮಾಸ್ಟರ್ ಮೈಂಡ್ ನಕ್ಸಲೈಟ್ ಹಿಡ್ಮಾ
author img

By

Published : Apr 6, 2021, 12:07 PM IST

ಬಿಜಾಪುರ (ಛತ್ತೀಸ್​ಗಡ): ಬಿಜಾಪುರದಲ್ಲಿ ನಕ್ಸಲರ ದಾಳಿಗೆ 22 ಭದ್ರತಾ ಸಿಬ್ಬಂದಿ ಹುತಾತ್ಮರಾದರು. ಇನ್ನು ಈ ದಾಳಿಯ ಮಾಸ್ಟರ್ ಮೈಂಡ್ ಮೋಸ್ಟ್ ವಾಂಟೆಡ್ ನಕ್ಸಲೈಟ್ ಹಿಡ್ಮಾ. ಪೊಲೀಸ್ ಗುಪ್ತಚರ ಇಲಾಖೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಗಳ ಪ್ರಕಾರ, ನಕ್ಸಲ್​ ರಾಮಣ್ಣನಿಗಿಂತ ಹಿಡ್ಮಾ ಹೆಚ್ಚು ಅಪಾಯಕಾರಿ.

ಹಿಡ್ಮಾನನ್ನು ಸೆರೆಹಿಡಿಯಲು ಮತ್ತು ಅಂತ್ಯಗಾಣಿಸಲು ಭದ್ರತಾ ಸಿಬ್ಬಂದಿ ನಡೆಸುತ್ತಿರುವ ನಿರಂತರ ಪ್ರಯತ್ನಗಳ ಹೊರತಾಗಿಯೂ, ಅವನನ್ನು ಇನ್ನೂ ಸೆರೆಹಿಡಿಯಲು ಸಾಧ್ಯವಾಗಿಲ್ಲ.

ಹಿಡ್ಮಾ ಮೇಲೆ ದಾಳಿ ನಡೆಸಲು ಯೋಜನೆ:

ಟರ್ರೆಮ್​ನಲ್ಲಿ ಹಿಡ್ಮಾ ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ, ಶನಿವಾರದಂದು ಕಾರ್ಯಾಚರಣೆ ನಡೆಸಿದರು. ಆದರೆ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ 22 ಮಂದಿ ಸಾವನ್ನಪ್ಪಿದರು. ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯು ಹಿಡ್ಮಾನನ್ನು ವಿಶೇಷ ವಲಯ ಸಮಿತಿಯ (ಡಿಕೆಎಸ್ಜೆಸಿ) ಮುಖ್ಯಸ್ಥರನ್ನಾಗಿ ನೇಮಿಸಿದೆ. ಛತ್ತೀಸ್​ಗಡದ ಸಂಪೂರ್ಣ ಮಾವೋವಾದಿ ಪಟ್ಟಿಯಲ್ಲಿ ಭದ್ರತಾ ಪಡೆಗಳ ವಿರುದ್ಧ ದಾಳಿ ನಡೆಸಲು ಹಿಡ್ಮಾ ಅವರನ್ನು ನಿಯೋಜಿಸಲಾಗಿದೆ.

ನಕ್ಸಲೈಟ್ ಹಿಡ್ಮಾ ಯಾರು?

ಹಿಡ್ಮಾ ಸುಕ್ಮಾ ಜಿಲ್ಲೆಯ ಪೂವರ್ತಿ ಗ್ರಾಮದ ನಿವಾಸಿ. ಈತ ತನ್ನ ಬಳಿ 50 ಲಕ್ಷ ರೂ.ಯಷ್ಟು ಹಣ ಹೊಂದಿದ್ದಾನೆ. ಇನ್ನು ಈತ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ -1 ಬೆಟಾಲಿಯನ್ ಮುಖ್ಯಸ್ಥನೂ ಹೌದು. ನಕ್ಸಲ್​ ರಾಮಣ್ಣನ ಮರಣದ ನಂತರ ಈತ ಅಧಿಕಾರ ವಹಿಸಿಕೊಂಡಿದ್ದು, ಜಿರಾಮ್ ನಕ್ಸಲೈಟ್ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಟ್ಯಾಡ್ಮೆಟ್ಲಾ ನಕ್ಸಲೈಟ್ ದಾಳಿಯನ್ನೂ ಹಿಡ್ಮಾ ಮುನ್ನಡೆಸಿದ್ದ. ಬಿಜಾಪುರದ ನಕ್ಸಲೈಟ್‌ ದಾಳಿಯ ರೂವಾರಿಯೂ ಹೌದು. ಸುಕ್ಮಾ, ಬಿಜಾಪುರ ಮತ್ತು ದಂತೇವಾಡ ಪ್ರದೇಶಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾನೆ.

ಹಿಡ್ಮಾ ಸುಳಿವು ನೀಡಿದರೆ 50 ಲಕ್ಷ ಬಹುಮಾನ:

ಬಿಜಾಪುರದಲ್ಲಿ ನಡೆದ ನಕ್ಸಲ್​ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಹಿಡ್ಮಾನ ಸುಳಿವು ನೀಡಿದರೆ 50 ಲಕ್ಷ ರೂ. ನೀಡುವುದಾಗಿ ಛತ್ತೀಸ್​ಗಡ ಪೊಲೀಸರು ಘೋಷಣೆ ಮಾಡಿದೆ.

ಹಿಡ್ಮಾ ನಕ್ಸಲೈಟ್ ದಾಳಿ:

ಹಿಡ್ಮಾ ಬಸ್ತಾರ್ ನಿವಾಸಿ. ಆತನ ವಯಸ್ಸು ಸುಮಾರು 45 ವರ್ಷಗಳು ಎಂದು ಹೇಳಲಾಗುತ್ತದೆ. ಮೂಲಗಳ ಪ್ರಕಾರ, ಬಸ್ತಾರ್ ವಿಭಾಗದ ಉನ್ನತ ನಕ್ಸಲೈಟ್ ನಾಯಕರಲ್ಲಿ ಈತ ಒಬ್ಬ. ಇದಕ್ಕೂ ಮುನ್ನ, ಹಿಡ್ಮಾ ನೇತೃತ್ವದಲ್ಲಿ, ನಕ್ಸಲರು ಕಸಲ್ಪಾಲ್, ಮೀನ್ಪಾ ಮತ್ತು ಇತರ ಪ್ರದೇಶಗಳಲ್ಲಿ ಹೊಂಚುದಾಳಿ ನಡೆಸಿದ್ದಾರೆ.

ಹಿಡ್ಮಾ ಸೆರೆಹಿಡಿಯಲು ಮೂರು ರಾಜ್ಯಗಳು ಬಹುಮಾನ ಘೋಷಣೆ:

ತೆಲಂಗಾಣ, ಒಡಿಶಾ ಮತ್ತು ಛತ್ತೀಸ್​ಗಡದಲ್ಲಿ ಹಿಡ್ಮಾ ಸೆರೆಹಿಡಿಯಲು ಬಹುಮಾನ ಘೋಷಿಸಿದೆ. ಆದರೆ ಎಷ್ಟೇ ಕಾರ್ಯಾಚರಣೆ ಮಾಡಿದರೂ ಸಹ ಹಿಡ್ಮಾ ಪರಾರಿಯಾಗುತ್ತಿದ್ದಾನೆ.

ಸಿಪಿಐ (ಮಾವೋವಾದಿ)ಯ ವಿಶೇಷ ವಲಯ ಸಮಿತಿಯ ಮುಖ್ಯಸ್ಥ ಹಿಡ್ಮಾ:

ಛತ್ತೀಸ್​ಗಡದಲ್ಲಿ ನಕ್ಸಲರನ್ನು ನಿರ್ಮೂಲನೆ ಮಾಡಲು ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದಾಗ್ಯೂ, ಸಮಸ್ಯೆಗೆ ಪರಿಹಾರ ಕಂಡುಬರುತ್ತಿಲ್ಲ. ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ನಕ್ಸಲೈಟ್‌ಗಳು ಟಿಸಿಒಸಿ ಅಥವಾ ಗೆರಿಲ್ಲಾ ಯುದ್ಧ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೈನಿಕರನ್ನು ಹೊಂಚು ಹಾಕಿ ಬಲೆಗೆ ಬೀಳಿಸುತ್ತಿದ್ದಾರೆ. ಇನ್ನು ಸಿಪಿಐನ ವಿಶೇಷ ವಲಯ ಸಮಿತಿಯ ಮುಖ್ಯಸ್ಥನನ್ನಾಗಿ ಹಿಡ್ಮ ಕಾರ್ಯ ನಿರ್ವಹಿಸುತ್ತಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.