ನವದೆಹಲಿ: ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ ಲಸಿಕೆ ಪ್ರಮಾಣಗಳು ಇಂದಿಗೆ 100 ಕೋಟಿ ಗಡಿ ದಾಟಿದೆ. 100 ಕೋಟಿ ಕೋವಿಡ್ ಲಸಿಕೆ ಡೋಸ್ ನೀಡಲು ಭಾರತ 279 ದಿನಗಳನ್ನು ತೆಗೆದುಕೊಂಡಿದೆ. ಈ ಸಂಬಂಧ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೋಮ್ ಘೆಬ್ರೆಯೆಸಸ್ ಅವರು ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೊನಾದಿಂದ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಿಸಲು ಕೋವಿಡ್ ಇಕ್ವಿಟಿ ಗುರಿಗಳನ್ನು ಸಾಧಿಸಿದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಮೋದಿ, ವೈದ್ಯರು, ವಿಜ್ಞಾನಿಗಳು ಹಾಗೂ ನಾಗರಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
-
Congratulations, Prime Minister @narendramodi, the scientists, #healthworkers and people of #India, on your efforts to protect the vulnerable populations from #COVID19 and achieve #VaccinEquity targets.https://t.co/ngVFOszcmE
— Tedros Adhanom Ghebreyesus (@DrTedros) October 21, 2021 " class="align-text-top noRightClick twitterSection" data="
">Congratulations, Prime Minister @narendramodi, the scientists, #healthworkers and people of #India, on your efforts to protect the vulnerable populations from #COVID19 and achieve #VaccinEquity targets.https://t.co/ngVFOszcmE
— Tedros Adhanom Ghebreyesus (@DrTedros) October 21, 2021Congratulations, Prime Minister @narendramodi, the scientists, #healthworkers and people of #India, on your efforts to protect the vulnerable populations from #COVID19 and achieve #VaccinEquity targets.https://t.co/ngVFOszcmE
— Tedros Adhanom Ghebreyesus (@DrTedros) October 21, 2021
ಇನ್ನು ಲಸಿಕೆ ಸಂಬಂಧ ಬಗ್ಗೆ ದೇಶವನ್ನು ಅಭಿನಂದಿಸಿದ WHOನ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್, ಬಲವಾದ ರಾಜಕೀಯ ನಾಯಕತ್ವವಿಲ್ಲದೇ ಇದು ಸಾಧ್ಯವಿಲ್ಲ ಎಂದು ಮೋದಿಯನ್ನು ಪರೋಕ್ಷವಾಗಿ ಕೊಂಡಾಡಿದ್ದಾರೆ.
100 ಕೋಟಿ ಡೋಸ್‌ಗಳನ್ನು ಈವರೆಗೆ ನೀಡಲಾಗಿದೆ. ಬಲವಾದ ನಾಯಕತ್ವ, ಅಂತರ್ ವಲಯದ ಒಗ್ಗೂಡಿಸುವಿಕೆ, ಸಂಪೂರ್ಣ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಪಡೆ ಹಾಗೆ ಸಮರ್ಪಿತ ಪ್ರಯತ್ನಗಳಿಲ್ಲದೆ ಅಲ್ಪಾವಧಿಯಲ್ಲಿ ಈ ಅಸಾಮಾನ್ಯ ಸಾಧನೆ ಸಾಧ್ಯವಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಭಾರತದ ಎಲ್ಲ ವಯಸ್ಕ ಜನಸಂಖ್ಯೆಯ ಶೇಕಡಾ 75 ಕ್ಕಿಂತಲೂ ಹೆಚ್ಚಿನವರಿಗೆ ಮೊದಲ ಡೋಸ್ ಅನ್ನು ನೀಡಲಾಗಿದೆ ಮತ್ತು ಸುಮಾರು 31 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.