ETV Bharat / bharat

ಶಿವಸೇನೆಯ ನಿಜವಾದ ಶಾಸಕ ಯಾರು: ಎಲ್ಲರಿಗೂ ನೋಟಿಸ್​ ನೀಡಿದ ಶಾಸಕಾಂಗ ಕಾರ್ಯದರ್ಶಿ - Supreme Court is scheduled to hear the suspension notice of 16 MLAs in the Assembly on July 11

ಶಾಸಕಾಂಗ ಕಾರ್ಯದರ್ಶಿ ಈಗಾಗಲೇ ಶಿಂದೆ ಬಣ ಸೇರಿದಂತೆ 53 ಶಿವಸೇನೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್​ನಲ್ಲಿ ಶಿವಸೇನೆಯ ನಿಜವಾದ ಶಾಸಕ ಯಾರು? ಎಂದು ಪ್ರಶ್ನೆ ಮಾಡಲಾಗಿದೆ.

ಶಿವಸೇನೆಯ ನಿಜವಾದ ಶಾಸಕ ಯಾರು ಎಂದು ಪ್ರಶ್ನೆ
ಶಿವಸೇನೆಯ ನಿಜವಾದ ಶಾಸಕ ಯಾರು ಎಂದು ಪ್ರಶ್ನೆ
author img

By

Published : Jul 10, 2022, 4:47 PM IST

ಮುಂಬೈ (ಮಹಾರಾಷ್ಟ್ರ) : ಜುಲೈ 11 ರಂದು ಸುಪ್ರೀಂ ಕೋರ್ಟ್ 16 ಶಾಸಕರ ಅಮಾನತು ನೋಟಿಸ್ ಅನ್ನು ಆಲಿಸಲು ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಶಾಸಕಾಂಗ ಕಾರ್ಯದರ್ಶಿ ಈಗಾಗಲೇ ಸಿಎಂ ಶಿಂದೆ ಬಣ ಸೇರಿದಂತೆ 53 ಶಿವಸೇನೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್​ನಲ್ಲಿ ಶಿವಸೇನೆಯ ನಿಜವಾದ ಶಾಸಕ ಯಾರು? ಎಂದು ಪ್ರಶ್ನಿಸಿದ್ದಾರೆ.

ಶಿಂದೆ ಬಳಗದೊಂದಿಗೆ ತೆರಳಿದ ಶಾಸಕರೇ ಅಥವಾ ಉದ್ಧವ್ ಠಾಕ್ರೆ ಅವರೊಂದಿಗೆ ಉಳಿದುಕೊಂಡಿರುವ ಶಾಸಕರೇ? ಎಂದು ಪ್ರಶ್ನಿಸಲಾಗಿದೆ. ವಿಧಾನಸಭಾಧ್ಯಕ್ಷರ ಆಯ್ಕೆ ಹಾಗೂ ಬಹುಮತದ ಪರೀಕ್ಷೆ ವೇಳೆ ಎರಡೂ ಕಡೆಯವರು ಶಿಳ್ಳೆ ಹೊಡೆದಿರುವ ದೂರುಗಳು ಬಂದಿವೆ. ಅದರಂತೆ ಈ ನೋಟಿಸ್​ ನೀಡಿದ ಬಳಿಕ ಉತ್ತರ ನೀಡಲು 7 ದಿನಗಳ ಕಾಲಾವಕಾಶ ನೀಡಲಾಗಿದೆ.

ಶಿವಸೇನೆಯ 15 ಶಾಸಕರ ಪೈಕಿ 14 ಶಾಸಕರ ವಿರುದ್ಧ ಶಿಂದೆ ಗುಂಪು ಕ್ರಮಕ್ಕೆ ಆಗ್ರಹಿಸಿದೆ. ವಿಶೇಷವೆಂದರೆ ಅದರಲ್ಲಿ ಆದಿತ್ಯ ಠಾಕ್ರೆ ಅವರ ಹೆಸರನ್ನು ಕೈಬಿಡಲಾಗಿದೆ. ಶಿಂದೆ ಬಣದ ವಕ್ತಾರ ಭರತ್ ಗೋಗವಾಲೆ ಅಧ್ಯಕ್ಷರ ಚುನಾವಣೆ ಹಾಗೂ ಬಹುಮತ ಪರೀಕ್ಷೆಗೆ ವಿಪ್ ಜಾರಿ ಮಾಡಿದ್ದರು. ಬಹುಮತದ ಪರೀಕ್ಷೆಯಲ್ಲಿ ರಾಹುಲ್ ನಾರ್ವೇಕರ್ ಅವರಿಗೆ ಮತ ಹಾಕುವಂತೆ ಮತ್ತು ಸರ್ಕಾರಕ್ಕೆ ಮತ ಹಾಕುವಂತೆ ಶಿವಸೇನೆಯ ಎಲ್ಲಾ ಶಾಸಕರು ಕೇಳಿಕೊಂಡಿದ್ದರು.

ಆದಿತ್ಯ ಅವರು ಬಾಳಾಸಾಹೇಬ್ ಠಾಕ್ರೆಯವರ ಮೊಮ್ಮಗ ಆಗಿರುವುದರಿಂದ ಅವರ ಮೇಲಿನ ಗೌರವದಿಂದ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಶಿಂದೆ ಗುಂಪಿನ ವಕ್ತಾರ ಭರತ್ ಗೋಗವಾಲೆ ಈ ವೇಳೆ ಹೇಳಿದ್ದಾರೆ.

7 ದಿನ ಸಮಯ: : ಶಾಸಕಾಂಗದಲ್ಲಿ ನಿಜವಾದ ಶಿವಸೇನೆ ಯಾವುದು? ನಾಯಕ ಯಾರು? ಎಂಬ ವಿವಾದ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಶಿಂದೆ ಬಣ ಮತ್ತು ಠಾಕ್ರೆ ಬಣ ಪರಸ್ಪರ ಈ ಬಗ್ಗೆ ಚಾಟಿ ಬೀಸಿವೆ. ಇದೀಗ ಎರಡೂ ಬಣಗಳ ಶಾಸಕರನ್ನು ಅಮಾನತು ಮಾಡುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಈ ಎರಡೂ ದೂರುಗಳನ್ನು ಶಾಸಕಾಂಗ ಕಾರ್ಯದರ್ಶಿ ಕೈಗೆತ್ತಿಕೊಂಡಿದ್ದು, ಅದರಂತೆ ಮುಂದಿನ 7 ದಿನಗಳಲ್ಲಿ ತಮ್ಮ ವಾದವನ್ನು ಮಂಡಿಸುವಂತೆ ಸೂಚಿಸಲಾಗಿದೆ.

ಮೊದಲ ವಿಪ್ ಅನ್ನು ಠಾಕ್ರೆ ಬಣದ ಶಿವಸೇನೆಯಿಂದ ಸುನೀಲ್ ಪ್ರಭು ಮತ್ತು ಶಿಂದೆ ಬಣದ ಭರತ್ ಗೊಗವಾಲೆ ಜಾರಿಗೊಳಿಸಿದರು. ಆದರೆ ಇದೀಗ ಎರಡೂ ಕಡೆಯಿಂದ ವಿಪ್ ಉಲ್ಲಂಘನೆಯಾಗಿದ್ದು, ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 'ನಾನು ಜಯಲಲಿತಾ ಸಹೋದರ.. ಆಸ್ತಿಯಲ್ಲಿ ನಂಗೂ 50% ಕೊಡಿ': ಮೈಸೂರಿನ ವ್ಯಕ್ತಿಯಿಂದ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.