ETV Bharat / bharat

ವಕೀಲನಾಗಿದ್ದಾಗ ಮೊದಲ ಬಾರಿಗೆ ಶುಲ್ಕ ರೂಪದಲ್ಲಿ ನನ್ನ ತಾಯಿಗೆ ಸೀರೆಯನ್ನು ಪಡೆದಿದ್ದೆ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್

ರಾಜಕಾರಣಿಯೊಬ್ಬರಿಗೆ ವಕೀಲಿಕೆ ವಹಿಸಿದ್ದ ಸಂದರ್ಭದಲ್ಲಿ ಅವರು ನಾನು ವಾಸಿಸುತ್ತಿದ್ದ ಸಣ್ಣ ಫ್ಲಾಟ್​ಗೆ ಅಗಮಿಸಿ ಶುಲ್ಕ ರೂಪದಲ್ಲಿ ನನ್ನ ತಾಯಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.

when-chief-justice-of-india-received-saree-for-mother-as-lawyer-fee
ವಕೀಲನಾಗಿದ್ದಾಗ ಮೊದಲ ಬಾರಿಗೆ ಶುಲ್ಕ ರೂಪದಲ್ಲಿ ನನ್ನ ತಾಯಿಗೆ ಸೀರೆಯನ್ನು ಪಡೆದಿದ್ದೆ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್
author img

By ETV Bharat Karnataka Team

Published : Sep 27, 2023, 5:13 PM IST

ನವದೆಹಲಿ: ವಕೀಲನಾಗಿದ್ದಾಗ ಮೊದಲ ಬಾರಿಗೆ ಶುಲ್ಕ ರೂಪದಲ್ಲಿ ನನ್ನ ತಾಯಿಗೆ ಸೀರೆಯನ್ನು ಪಡೆದಿದ್ದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೆನಪಿಸಿಕೊಂಡರು. ಹೊಸದಾಗಿ ನೋಂದಾಯಿತ ಅಡ್ವೊಕೇಟ್ ಆನ್ ರೆಕಾರ್ಡ್ (ಎಒಆರ್) ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು, ನಾನು ಪ್ರಮುಖ ರಾಜಕಾರಣಿಯೊಬ್ಬರ ವಕಾಲತ್ತು ವಹಿಸಿದ್ದೆ, ನನ್ನಂತಹ ಕಿರಿಯ ವಕೀಲ ಹೇಗೆ ಪ್ರಕರಣವನ್ನು ನಿಭಾಯಿಸುತ್ತಾನೆ ಎಂದು ಅವರು ಆಶ್ಚರ್ಯಪಟ್ಟಿದ್ದರು ಎಂದರು.

ಈ ಪ್ರಸಂಗವನ್ನು ವಕೀಲರೊಂದಿಗೆ ಹಂಚಿಕೊಂಡ ಮುಖ್ಯ ನ್ಯಾಯಮೂರ್ತಿ, ನಾನು ಸೋಮ್ ವಿಹಾರ್‌ನ ಸಣ್ಣ ಫ್ಲಾಟ್​ನಲ್ಲಿ ವಾಸಿಸುತ್ತಿದ್ದೆ. ಈ ವೇಳೆ ರಾಜಕಾರಣಿ ನನ್ನ ಫ್ಲಾಟ್​ಗೆ ಬಂದು ನನ್ನ ತಾಯಿಗೆ ಒಳ್ಳೆಯ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಮರುದಿನ ಬೆಳಗ್ಗೆ ಕಚೇರಿಗೆ ಹೋದಾಗ, ಇದು ನಿಮಗೆ ಶುಲ್ಕ ರೂಪದಲ್ಲಿ ನೀಡಿದ ಸೀರೆ ಎಂದು ಹಿರಿಯರು ಹೇಳಿದರು. ಮೊದಲು ನಾನು ಕಿರಿಯ ವಕೀಲನಾಗಿದ್ದರಿಂದ ನನಗೆ ಪ್ರಶಂಸೆ ಸಿಗುವುದಿಲ್ಲ ಎಂದು ತುಂಬಾ ನಿರಾಶೆಗೊಂಡಿದ್ದೆ. ನಂತರ ಶುಲ್ಕ ನೀಡಿದಾಗ ನನಗೆ ಏನೆಂಬುದು ತಿಳಿಯಿತು ಎಂದು ಹೇಳಿದರು.

ಎಒಆರ್​ನ ಪಾತ್ರವು ಅತ್ಯಂತ ಜವಾಬ್ದಾರಿಯುತವಾಗಿದೆ ಮತ್ತು ಕಿರಿಯ ವಕೀಲರು ಕಕ್ಷಿದಾರರೊಂದಿಗಿನ ಮೊದಲ ಇಂಟರ್​ಫೇಸ್ ಆಗಿದ್ದಾರೆ ಮತ್ತು ಈ ನ್ಯಾಯಾಲಯದ ಉಳಿವಿಗಾಗಿ ಎಒಆರ್ ನಂತಹ ಸಂಸ್ಥೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ನಂತರ ಕಕ್ಷಿದಾರರು ಹಣದ ಬದಲು ಇನ್ನೂ ಹೆಚ್ಚಿನ ಪ್ರಕರಣಗಳನ್ನು ನೀಡಿದ ಎರಡನೇ ಪ್ರಸಂಗವನ್ನು ಮುಖ್ಯ ನ್ಯಾಯಮೂರ್ತಿ ಕಿರಿಯ ವಕೀಲರೊಂದಿಗೆ ಹಂಚಿಕೊಂಡರು.

ನಾನು ಮೊದಲ ಬಾರಿಗೆ ವಕೀಲರಾಗಿ ಈ ನ್ಯಾಯಾಲಯಕ್ಕೆ ಬಂದಾಗ. ನನಗೆ ಎಒಆರ್​ನ ಶ್ರೀ ಗನ್ಪುಲೆ ಸಹಾಯ ಮಾಡುತ್ತಿದ್ದರು. ಕಕ್ಷಿದಾರರು ನನಗೆ ಸೂಚನೆ ನೀಡಲು ದೆಹಲಿಗೆ ಹಲವಾರು ಬಾರಿ ಪ್ರಯಾಣಿಸಿದರು. ಶ್ರೀ ಗನ್ಪುಲೆ ಅವರು ಪ್ರಕರಣಗಳನ್ನು ನ್ಯಾಯಾಲದಲ್ಲಿ ಫೈಲ್ ಮಾಡುತ್ತಿದ್ದರು. ಕಕ್ಷಿದಾರರು ನಿನಗೆ ಇನ್ನೂ ಹಲವು ಪ್ರಕರಣಗಳನ್ನು ನೀಡಬಹುದು. ಅಂದರೆ ಕಕ್ಷಿದಾರರು ಈಗಲೇ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಅವರು ಹೇಳುತ್ತಿದ್ದರು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್​ ನೆನಪಿಸಿಕೊಂಡರು.

ಶ್ರವಣ ಮತ್ತು ವಾಕ್​ ದೋಷವುಳ್ಳ ವಕೀಲೆಯಿಂದ ವಾದ ಮಂಡನೆ: ಇತ್ತೀಚಿಗೆ, ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಕರಣವೊಂದರ ವಿಚಾರಣೆಯ ವೇಳೆ ಮೂಕ ವಕೀಲೆಯೊಬ್ಬರು ತಮ್ಮ ವ್ಯಾಖ್ಯಾನಕಾರನ ಸಹಾಯದಿಂದ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದರು. ವಿಶೇಷಚೇತನರ ಹಕ್ಕುಗಳ ಪ್ರಕರಣದ ಅರ್ಜಿಯೊಂದನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರು ಸೋಮವಾರ ವರ್ಚುವಲ್​ ವಿಚಾರಣೆಗೆ ತೆಗೆದುಕೊಂಡಿದ್ದರು. ಸಾರಾ ಸನ್ನಿ ಎಂಬ ಶ್ರವಣ ಮತ್ತು ವಾಕ್​ ದೋಷವುಳ್ಳ ವಕೀಲೆ ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ವಾದ ಮಂಡಿಸಿದ್ದರು.

ಇದನ್ನೂ ಓದಿ: ಮಣಿಪುರದಲ್ಲಿ ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ಇಂಫಾಲ್​ಗೆ ತೆರಳಿದ ಸಿಬಿಐ ವಿಶೇಷ ನಿರ್ದೇಶಕರ ನೇತೃತ್ವದ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.