ETV Bharat / bharat

ಸಾಮಾಜಿಕ ಪಿಂಚಣಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಇದು ಸಕಾಲ - pension special artical

2011 ರಲ್ಲಿ ನಡೆಸಿದ ಜನಗಣತಿಯಲ್ಲಿ ವೃದ್ಧರ ಜನಸಂಖ್ಯೆ ನಮ್ಮ ದೇಶದಲ್ಲಿ 10.3 ಕೋಟಿ ಇದೆ. ಪ್ರತಿ ವರ್ಷ ಶೇಕಡಾ 3 ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಲ್ಯಾಣ ಯೋಜನೆಗಳ ಕುರಿತು ಇದ್ದ ಉತ್ಸಾಹ ಕುಂದಿದೆ ಎಂದು ಗ್ರಾಮೀಣ ಅಭಿವೃದ್ಧಿ ಕುರಿತ ಸಂಸದೀಯ ಸ್ಥಾಯೀ ಸಮಿತಿ ವರದಿಯಲ್ಲಿ ಸಾಬೀತುಪಡಿಸಿದೆ.

pensions
pensions
author img

By

Published : Mar 12, 2021, 1:04 PM IST

ಸುಪ್ರೀಂಕೋರ್ಟ್‌ ಇತ್ತೀಚಿನ ತೀರ್ಪಿನಲ್ಲಿ ಬಡವರು, ಹಿಂದುಳಿದವರು ಮತ್ತು ಅವಕಾಶ ವಂಚಿತರ ಹಿತಾಸಕ್ತಿ ರಕ್ಷಿಸುವುದನ್ನು ಹೊರತುಪಡಿಸಿ ಕೇಂದ್ರ ಸರ್ಕಾರಕ್ಕೆ ಬೇರೆ ಯಾವುದೇ ಆದ್ಯತೆ ಇಲ್ಲ ಎಂದು ಹೇಳಿದ್ದು, ಸಮಾಜದ ವಿವಿಧ ವಲಯಗಳ ಬೆಂಬಲಕ್ಕಾಗಿ ನಿಗದಿ ಪಡಿಸಿರುವ ಪಿಂಚಣಿಯನ್ನು ನಿಕೃಷ್ಟ ಎಂದು ಟೀಕಿಸಿದೆ.

ಕಲ್ಯಾಣ ಯೋಜನೆಗಳ ಕುರಿತು ಇದ್ದ ಉತ್ಸಾಹ ಕುಂದಿದೆ ಎಂಬುದನ್ನು ಗ್ರಾಮೀಣ ಅಭಿವೃದ್ಧಿ ಕುರಿತ ಸಂಸದೀಯ ಸ್ಥಾಯೀ ಸಮಿತಿ ವರದಿ ಸಾಬೀತುಪಡಿಸಿದ್ದು, ಈ ವಲಯದ ಬೆಂಬಲಕ್ಕಾಗಿ ನಿಗದಿಸಿರುವ ಪಿಂಚಣಿಯನ್ನು ನಿಕೃಷ್ಟ ಎಂದು ಟೀಕಿಸಿದೆ.

ತಮ್ಮ ಕಾಲ ಮೇಲೆ ನಿಲ್ಲಲು ಸಾಮರ್ಥ್ಯವಿಲ್ಲದ, ಹಸಿವಿನಿಂದ ಬಳಲುತ್ತಿರುವ ಪಿಂಚಣಿದಾರರು, ಅಸಹಾಯಕ ವಿಧವೆಯರು ಮತ್ತು ಅಂಗವೈಕಲ್ಯತೆಯಿಂದ ಬಳಲುತ್ತಿರುವವರನ್ನು ಅಗೌರವದಿಂದ ನಡೆಸಿಕೊಳ್ಳುವುದು ಸರಿಯಲ್ಲ. ಇಂತಹ ವರ್ತನೆಯು ಕಲ್ಯಾಣ ಯೋಜನೆಗಳ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.

ವೃದ್ಧಾಪ್ಯದಲ್ಲಿ ಒಂಟಿತನ ಅನಿವಾರ್ಯ. ಇದರ ಜೊತೆಗೆ ಬಡತನವೂ ಸೇರಿಕೊಂಡರೆ ಅವರ ಪರಿಸ್ಥಿತಿ ಇನ್ನೂ ಸಂಕಷ್ಟಕ್ಕೊಳಗಾಗುತ್ತದೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಜನಸಂಖ್ಯಾ ವಿಜ್ಞಾನ ಅಂತಾರಾಷ್ಟ್ರೀಯ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಹಲವು ಕಟುವಾಸ್ತವ ಅನಾವರಣಗೊಂಡಿವೆ. 60 ಕ್ಕಿಂತ ಹೆಚ್ಚು ವರ್ಷದ ಅಂದರೆ ಶೇ 40 ಕ್ಕೂ ಹೆಚ್ಚು ಜನರು ತಮ್ಮ ಜೀವನ ನಿರ್ವಹಣೆಗಾಗಿ ದುಡಿಯುತ್ತಿದ್ದಾರೆ ಎಂದು ತಿಳಿದುಬಂದಿದೆ. 2011 ರಲ್ಲಿ ನಡೆಸಿದ ಜನಗಣತಿಯಲ್ಲಿ ವೃದ್ಧರ ಜನಸಂಖ್ಯೆ ನಮ್ಮ ದೇಶದಲ್ಲಿ 10.3 ಕೋಟಿ ಆಗಿದೆ. ಪ್ರತಿ ವರ್ಷ ಶೇಕಡಾ 3 ಹೆಚ್ಚಳವಾಗುತ್ತದೆ.

ಸಮೀಕ್ಷೆಯ ವರದಿ ಪ್ರಕಾರ, ಅರ್ಧದಷ್ಟು ಜನರು ದೀರ್ಘಕಾಲೀನ ರೋಗಗಳಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ 20 ಕ್ಕಿಂತ ಹೆಚ್ಚು ಜನರು ನರೇಗಾದ ಅಡಿಯಲ್ಲಿ ಕೆಲಸ ಪಡೆಯುತ್ತಿದ್ದಾರೆ. ಶೇ 3 ಕ್ಕಿಂತ ಕಡಿಮೆ ಜನರಿಗೆ ವೃದ್ಧಾಪ್ಯ ವೇತನ ಲಭ್ಯವಾಗುತ್ತಿದೆ ಎಂದು ತಿಳಿದು ಬಂದಿದೆ.

ನರೇಗಾ ಅಡಿಯಲ್ಲಿ ಕೋವಿಡ್ 19 ಸಮಯದಲ್ಲೂ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದ್ದು, ಇದರ ಮೊತ್ತ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದೆ ಎಂದು ಸ್ಥಾಯಿ ಸಮಿತಿ ಕಂಡುಕೊಂಡಿದೆ. ನರೇಗಾ ಅಡಿಯಲ್ಲಿ ಛತ್ತೀಸ್‌ಗಢದಲ್ಲಿ 190, ಎರಡು ತೆಲುಗು ರಾಜ್ಯಗಳಲ್ಲಿ 237 ರೂ. ಹರಿಯಾಣದಲ್ಲಿ 309 ರೂ. ನಿಗದಿ ಮಾಡಲಾಗಿದೆ. ಕೂಲಿ ವೇತನದಲ್ಲಿ ವ್ಯತ್ಯಾಸವನ್ನು ಹೊರತುಪಡಿಸಿ, ಕೂಲಿ ಪಾವತಿಯಲ್ಲಿ ವಿಳಂಬವೂ ಇದೆ ಎಂಬುದನ್ನು ಸಮಿತಿ ಗಮನಿಸಿದೆ. ಯೋಜನೆಯ ಮೂಲ ಉದ್ದೇಶವನ್ನೇ ಸೋಲಿಸುವ ಈ ಕೊರತೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ತಕ್ಷಣ ಗಮನ ಹರಿಸಬೇಕಿದೆ.

ಕಳೆದ ಎರಡು ವರ್ಷಗಳಿಂದ ವೃದ್ಧರ ಪಿಂಚಣಿ, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿ ಹೆಚ್ಚಳ ಮಾಡುವ ಉದ್ದೇಶದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕಳೆದ ಎರಡು ವರ್ಷಗಳಿಂದಲೂ ಹಲವು ಬಾರಿ ಹೇಳಿದೆ. ಆದರೆ ಇನ್ನೂ ಈ ಪ್ರಸ್ತಾಪಗಳು ವಾಸ್ತವ ರೂಪಕ್ಕೆ ಬರಬೇಕಿದೆ. ಬಡವರಿಗೆ ಅಭಿವೃದ್ಧಿಯ ಫಲ ಸಿಗುವವರೆಗೂ ಅಭಿವೃದ್ಧಿ ಮರೀಚಿಕೆಯೇ ಆಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.