ನವದೆಹಲಿ: ಮೆಟಾ ಮಾಲೀಕತ್ವದ ವಾಟ್ಸಾಪ್ ಪ್ರಸ್ತುತ ಭಾರತ ಸೇರಿದಂತೆ ಜಾಗತಿಕವಾಗಿ ಸಮಸ್ಯೆ ಎದುರಿಸುತ್ತಿದೆ. ಹಲವಾರು ಬಳಕೆದಾರರು ಸಂದೇಶಗಳನ್ನು ಇತರರಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ವರದಿಗಳ ಪ್ರಕಾರ ಶೇಕಡಾ 85 ಕ್ಕಿಂತ ಹೆಚ್ಚು ಜನರು ಸಂದೇಶ ಕಳುಹಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈಗ ವಾಟ್ಸ್ಆ್ಯಪ್ ಸಮಸ್ಯೆ ಬಗೆ ಹರಿದಿದ್ದು, ನಿಮ್ಮ ವಾಟ್ಸ್ಆ್ಯಪ್ ಸುರಕ್ಷಿತವಾಗಿದೆ ಎಂದು ವಾಟ್ಸ್ಆ್ಯಪ್ ಟ್ವೀಟ್ ಮಾಡಿದೆ.
-
People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022 " class="align-text-top noRightClick twitterSection" data="
">People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022People Coming to Twitter to see if WhatsApp is down#WhatsappDown pic.twitter.com/eGi25KiQhU
— Bella Ciao (Chai) (@punjabiii_munda) October 25, 2022
ಇದಕ್ಕೂ ಮೊದಲು ಭಾರತದಲ್ಲಿ ಕರ್ನಾಟಕ, ತೆಲಂಗಾಣ, ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಲಖನೌ ಸೇರಿದಂತೆ ಅನೇಕ ನಗರಗಳಲ್ಲಿ ವಾಟ್ಸ್ಆ್ಯಪ್ ಸಮಸ್ಯೆ ತಲೆದೂರಿದೆ. ಜಾಗತಿಕವಾಗಿ ನೋಡುವುದಾದರೆ ಅಮೆರಿಕ, ಜರ್ಮನಿ, ದಕ್ಷಿಣ ಆಫ್ರಿಕಾ, ಬಹ್ರೇನ್, ಬಾಂಗ್ಲಾದೇಶ ಮತ್ತು ಹಲವಾರು ಇತರ ದೇಶಗಳಲ್ಲಿನ ಬಳಕೆದಾರರು ತೊಂದರೆಗೀಡಾಗಿದ್ದಾರೆ. ಈ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಾಟ್ಸ್ಆ್ಯಪ್ ಬಳಕೆದಾರರು ಹರಿಹಾಯುತ್ತಿದ್ದರು.
-
It can be ‘Let’s take it to Instagram’ and not ‘Let’s take it to Whatsapp’ today.#WhatsappDown
— TrulyMadly (@thetrulymadly) October 25, 2022 " class="align-text-top noRightClick twitterSection" data="
">It can be ‘Let’s take it to Instagram’ and not ‘Let’s take it to Whatsapp’ today.#WhatsappDown
— TrulyMadly (@thetrulymadly) October 25, 2022It can be ‘Let’s take it to Instagram’ and not ‘Let’s take it to Whatsapp’ today.#WhatsappDown
— TrulyMadly (@thetrulymadly) October 25, 2022
ನಮ್ಮ ದೇಶದಲ್ಲಿಯೂ ಸಹ ಬಳಕೆದಾರರು ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೀಮ್‌ಗಳು ಮತ್ತು GIF ಗಳನ್ನು ಪೋಸ್ಟ್ ಮಾಡುವುದು ಸೇರಿದಂತೆ Facebook ಫ್ಯಾಮಿಲಿ ಅಪ್ಲಿಕೇಶನ್‌ನೊಂದಿಗೆ ತಮ್ಮ ಸಮಸ್ಯೆಗಳನ್ನು ವರದಿ ಮಾಡಲು ಜನರು ಟ್ವಿಟರ್ ಕಡೆ ಮುಖ ಮಾಡಿದ್ದರು. ತಾಂತ್ರಿಕ ದೋಷವನ್ನು ಎದುರಿಸುತ್ತಿದ್ದ ವಾಟ್ಸ್ಆ್ಯಪ್ ಸಮಸ್ಯೆ ಮೆಟಾ ಫ್ಯಾಮಿಲಿ ಕ್ಲೀಯರ್ ಮಾಡಿದ್ದು, ಈಗ ವಾಟ್ಸ್ಆ್ಯಪ್ ಎಂದಿನಂತೆ ಉಪಯೋಗಿಸಬಹುದಾಗಿದೆ.