ETV Bharat / bharat

ಗೌಪ್ಯತಾ ನೀತಿಗೆ ಒಪ್ಪಿಗೆ ಪಡೆಯಲು ವಾಟ್ಸ್​ಆ್ಯಪ್ ಟ್ರಿಕ್ಸ್​​ ಬಳಸ್ತಿದೆ: ಕೇಂದ್ರದ ಆರೋಪ

ಅಸ್ತಿತ್ವದಲ್ಲಿರುವ ಬಳಕೆದಾರರ ನವೀಕರಿಸಲಾದ ವೈಯಕ್ತಿಕ ನೀತಿಗೆ ಸಂಬಂಧಿಸಿದ ನೋಟಿಫಿಕೇಷನ್ ಅನ್ನು ತಳ್ಳಿ ಹಾಕುವಂತಹ ಯಾವುದೇ ಕ್ರಮ ಕೈಗೊಳ್ಳದಂತೆ ವಾಟ್ಸ್​ಆ್ಯಪ್​​ ಗೆ ಮಧ್ಯಂತರ ಆದೇಶ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನ್ಯಾಯಾಲಯ ಮುಂದೂಡಿದೆ.

author img

By

Published : Jun 3, 2021, 3:36 PM IST

ವಾಟ್ಸ್​ಆ್ಯಪ್
ವಾಟ್ಸ್​ಆ್ಯಪ್

ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಾಟ್ಸ್​ಆ್ಯಪ್ ನಡುವಿನ ಜಟಾಪಟಿ ಮುಂದುವರಿದಿದೆ. ವಾಟ್ಸ್​ಆ್ಯಪ್​​ ಬಳಕೆದಾರರಿಂದ ತನ್ನ ಗೌಪ್ಯತಾ ನೀತಿಗೆ ಒಪ್ಪಿಗೆ ಪಡೆಯುತ್ತಿದೆ ಎಂದು ಆರೋಪಿಸಿ ಕೇಂದ್ರ, ದೆಹಲಿ ಹೈಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದೆ. ಹೊಸ ಖಾಸಗಿತನ ನೀತಿಗೆ ಬಳಕೆದಾರರ ಒಪ್ಪಿಗೆ ಪಡೆದುಕೊಳ್ಳಲು ವಾಟ್ಸ್​ಆ್ಯಪ್​ ಟ್ರಿಕ್ಸ್ ಬಳಸುತ್ತಿದೆ ಎಂದು ದೂರಿದೆ.

2021ರ ಗೌಪ್ಯತಾ ನೀತಿಯನ್ನು ಅಳವಡಿಸಿಕೊಳ್ಳುವಂತೆ ಬಳಕೆದಾರರಿಗೆ ವಾಟ್ಸ್​ಆ್ಯಪ್ ಒತ್ತಾಯಿಸಲು ಬಯಸಿದೆ ಎಂದು ದೆಹಲಿ ಹೈಕೋರ್ಟ್​ಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿದೆ.

ಬಳಕೆದಾರರ ನೆಲೆಯನ್ನು ವರ್ಗಾಯಿಸಲು ವಾಟ್ಸ್​ಆ್ಯಪ್ ಉದ್ದೇಶಿಸಿದ್ದು, ಇದೊಂದು ಗೇಮ್​ಪ್ಲ್ಯಾನ್ ಎಂದು ಆರೋಪಿಸಿದೆ. ವೈಯಕ್ತಿಕ ಡೇಟಾ ಸಂರಕ್ಷಣೆ (ಪಿಡಿಪಿ) ಮಸೂದೆ ಕಾನೂನಾಗುವ ಮೊದಲೇ ನವೀಕರಿಸಿದ ಗೌಪ್ಯತೆ ನೀತಿಗೆ ಬದ್ಧವಾಗಿದೆ ಎಂದು ತಿಳಿಸಿದೆ.

ಪ್ರಸ್ತುತ ನೋಟಿಫಿಕೇಷನ್ ಅನ್ನು ಕೂಡಾ ಕೇಂದ್ರ ಸರ್ಕಾರ ಸಲ್ಲಿಸಿದ್ದು, ಈಗಿರುವ ಅಥವಾ ಹೊಸದಾದ ಅಧಿಸೂಚನೆಯನ್ನು ಬಳಕೆದಾರರು ತಳ್ಳಿಹಾಕುವಂತೆ ವಾಟ್ಸ್​ಆ್ಯಪ್​​ ಮಾಡಿದೆ. ಇದು ಮಾರ್ಚ್ 21 ರಂದು ಭಾರತದ ಸ್ಪರ್ಧಾ ಆಯೋಗ ನೀಡಿದ್ದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಸ್ತಿತ್ವದಲ್ಲಿರುವ ಬಳಕೆದಾರರ ನವೀಕರಿಸಲಾದ ವೈಯಕ್ತಿಕ ನೀತಿಗೆ ಸಂಬಂಧಿಸಿದ ನೋಟಿಫಿಕೇಷನ್ ಅನ್ನು ತಳ್ಳಿ ಹಾಕುವಂತಹ ಯಾವುದೇ ಕ್ರಮ ಕೈಗೊಳ್ಳದಂತೆ ವಾಟ್ಸ್​ಆ್ಯಪ್​​ ಗೆ ಮಧ್ಯಂತರ ಆದೇಶ ನೀಡಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನ್ಯಾಯಾಲಯ ಮುಂದೂಡಿದೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ವಿರೋಧಿಸಿ ವಾಟ್ಸ್​ಆ್ಯಪ್ ಕೂಡ ದೆಹಲಿ ಹೈಕೋರ್ಟ್ ಮೊರೆ ಹೊಗಿತ್ತು. ಈ ಹೊಸ ನಿಯಮದ ಪ್ರಕಾರ ಆ್ಯಪ್​ನಲ್ಲಿ ಮೆಸೇಜ್​ ಕಳಿಸಿದ ಮೂಲಗಳ ಜಾಡು ಹಿಡಿಯಬೇಕಾಗುತ್ತದೆ. ಇದು ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ ಎಂದು ಫೇಸ್‌ಬುಕ್ ಮಾಲೀಕತ್ವದ ವಾಟ್ಸ್​ಆ್ಯಪ್ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಚಾಟ್‌ಗಳ ಜಾಡು ಪತ್ತೆ ಮಾಡಿ ಎಂದು ಸೂಚಿಸುವುದು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸುವ ಪ್ರತಿ ಸಂದೇಶದ ಬೆರಳಚ್ಚಿನ ಗುರುತು ಸಂಗ್ರಹಿಸಿ ಇರಿಸಿ ಎಂದು ಹೇಳುವಂತಾಗಿದೆ. ಇದು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ನಿಯಮವನ್ನು ಉಲ್ಲಂಘಿಸಲಿದೆ ಹಾಗೂ ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಕಡೆಗಣಿಸಿದಂತಾಗಲಿದೆ ವಾಟ್ಸ್​ಆ್ಯಪ್ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.