ETV Bharat / bharat

Anand Marriage Act: ಈ ವಿವಾಹ ಕಾಯ್ದೆ ಯಾವುದು? ಇದು ಹಿಂದೂ ವಿವಾಹ ಕಾಯ್ದೆಗಿಂತ ಹೇಗೆ ಭಿನ್ನ? - ಆನಂದ್ ಮ್ಯಾರೇಜ್ ಆಕ್ಟ್

ಆನಂದ್ ಮ್ಯಾರೇಜ್ ಆ್ಯಕ್ಟ್: ಚಂಡೀಗಢ ಸರ್ಕಾರ 'ಆನಂದ್ ವಿವಾಹ ಕಾಯಿದೆ 1909' ಅನ್ನು ಜಾರಿಗೆ ತಂದಿದೆ. ಆದರೆ ಅದಕ್ಕೂ ಮೊದಲು ಆನಂದ್ ವಿವಾಹ ಕಾಯಿದೆ ಯಾವುದು? ಮತ್ತು ಅದು ಹಿಂದೂ ವಿವಾಹ ಕಾಯಿದೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಸಂಪೂರ್ಣ ಸುದ್ದಿಯನ್ನು ಓದಿ.

Representative image
ಪ್ರಾತಿನಿಧಿಕ ಚಿತ್ರ
author img

By

Published : Jun 10, 2023, 7:42 AM IST

ಚಂಡೀಗಢ: ಸುಪ್ರೀಂಕೋರ್ಟ್‌ ಸೂಚನೆಯಂತೆ ಚಂಡೀಗಢದಲ್ಲಿ 'ಆನಂದ್ ವಿವಾಹ ಕಾಯ್ದೆ 1909' ಜಾರಿಗೆ ಬಂದಿದೆ. ಇದರ ಪ್ರಕಾರ ಇನ್ನು ಮುಂದೆ ವಿವಾಹ ನೋಂದಣಿ ಮಾಡಿಸಿಕೊಳ್ಳಬಹುದು. ಮತ್ತೊಂದೆಡೆ ಈ ನೋಂದಣಿ ಸೌಲಭ್ಯವನ್ನು ಈಗ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಿಂದಲೂ ಪ್ರಾರಂಭಿಸಲಾಗಿದೆ. ಇದು ಸಿಖ್ ಸಮುದಾಯಕ್ಕೆ ಸಿಹಿ ಸುದ್ದಿಯಾಗಿದೆ. 2018ರಲ್ಲಿ ಚಂಡೀಗಢ ಆಡಳಿತವು 'ಚಂಡೀಗಢ ಆನಂದ್ ವಿವಾಹ ನೋಂದಣಿ ನಿಯಮಗಳು 2018'ರ ಅನುಷ್ಠಾನಕ್ಕೆ ಸೂಚನೆ ನೀಡಿತ್ತು. ಆದರೆ ಈಗ ವಿವಾಹಗಳನ್ನು 'ಆನಂದ್ ವಿವಾಹ ಕಾಯ್ದೆ-1909'ರ ಅಡಿ ನೋಂದಾಯಿಸಲಾಗುತ್ತದೆ.

ಕಾಯಿದೆ ರಚನೆಯಾಗಿದ್ದು ಯಾವಾಗ?: ವಾಸ್ತವವಾಗಿ 'ಆನಂದ್ ವಿವಾಹ ಕಾಯಿದೆ' ಅಥವಾ 'ಆನಂದ್ ಕರಾಜ್'ನ್ನು 1909ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಇದಾದ ಬಳಿಕ ಹಲವೆಡೆ ಈ ಕಾಯ್ದೆ ಜಾರಿಯಾಗಲಿಲ್ಲ. ಆದರೆ ಸಿಖ್ ಸಮುದಾಯ ಈ ಕಾಯ್ದೆಯನ್ನು ಎಲ್ಲಾ ಧರ್ಮಗಳಲ್ಲಿ ಜಾರಿಗೆ ತರಲು ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಪ್ರಸ್ತುತ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪಂಜಾಬ್‌ನಲ್ಲಿ ಇದು ಇನ್ನೂ ಜಾರಿಯಾಗಬೇಕಿದೆ.

ಪಂಜಾಬ್ ಹೊರತುಪಡಿಸಿ, ಹರಿಯಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ದೇಶದ 22 ರಾಜ್ಯಗಳಲ್ಲಿ ಆನಂದ್ ವಿವಾಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. 'ಆನಂದ್ ಕರಾಜ್' ಕಾಯ್ದೆಯನ್ನು 2016ರಲ್ಲಿ ಅಂದಿನ ಅಕಾಲಿ-ಬಿಜೆಪಿ ಸರ್ಕಾರವು ಪಂಜಾಬ್‌ನಲ್ಲಿ ಪರಿಚಯಿಸಿತು. ಆದರೆ, ಕೆಲವು ಕಾರಣಗಳಿಂದ ಇದು ಇನ್ನೂ ಜಾರಿಗೆ ಬಂದಿಲ್ಲ. ಇದರ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರ ಮತ್ತು ನಂತರ ಚರಣ್ಜಿತ್ ಸಿಂಗ್ ಚನ್ನಿ ಕೂಡ ಅದನ್ನು ಕಾರ್ಯಗತಗೊಳಿಸಲು ವಿಫಲರಾದರು. ಆದಾಗ್ಯೂ, ಭಗವಂತ್ ಮಾನ್ ಅವರು ನವೆಂಬರ್ 2022 ರಲ್ಲಿ 'ಆನಂದ್ ಕರಾಜ್' ಕಾಯ್ದೆಯ ಅನುಷ್ಠಾನವನ್ನು ಘೋಷಿಸಿದರು.

ವಿವಾಹ ನೋಂದಣಿ ನಿಯಮಾಳಿಗಳೇನು? ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಅವರು ಚಂಡೀಗಢದಲ್ಲಿ ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಮಾತನಾಡಿದ್ದರು. ವಿವಾಹ ಕಾಯ್ದೆಗೆ ಸಂಬಂಧಿಸಿದಂತೆ ಚಂಡೀಗಢದ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರದಲ್ಲಿಯೇ ಜಾರಿಗೊಳಿಸುವಂತೆ ಕೋರಿದ್ದರು. ಆದ್ದರಿಂದ ವಿವಾಹ ನೋಂದಣಿಗಾಗಿ ವಧು ಮತ್ತು ವರನ ಗುರುತಿನ ಪುರಾವೆ ಮತ್ತು ಇಬ್ಬರ ವಯಸ್ಸಿನ ಪುರಾವೆಗಳು ಅಗತ್ಯವೆಂದು ಕೆಲವು ವಿಶೇಷ ಸೂಚನೆಗಳಿವೆ. ಇದಲ್ಲದೇ ಗುರುದ್ವಾರ ಸಾಹಿಬ್‌ನಿಂದ ಮದುವೆ ಪ್ರಮಾಣಪತ್ರದೊಂದಿಗೆ, ಇಬ್ಬರು ಸಾಕ್ಷಿಗಳು, ಮದುವೆಯ ಸಮಯದಲ್ಲಿ ಫೋಟೋಗಳು ಸಹ ಅಗತ್ಯವಿದೆ.

ಸುಪ್ರೀಂಕೋರ್ಟ್ ಅನುಮೋದನೆ: ಆನಂದ್ ವಿವಾಹ ಕಾಯಿದೆ-1909 ರ ಅಡಿಯಲ್ಲಿ ಸಿಖ್ಖರ ವಿವಾಹಗಳ ನೋಂದಣಿಗೆ ನಿಯಮಗಳನ್ನು ರೂಪಿಸುವ ನಿರ್ದೇಶನಗಳನ್ನು ನೀಡುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ಪಟ್ಟಿ ಮಾಡಲು ಸಹ ಅನುಮೋದನೆ ನೀಡಿದೆ.

ಹಿಂದೂ ವಿವಾಹ ಕಾಯಿದೆ ಎಂದರೇನು? ಆನಂದ್ ವಿವಾಹ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆ 1955 ಕೂಡ ಮದುವೆಗೆ ಸಂಬಂಧಿಸಿದಂತೆ ವಿಶೇಷ ರಕ್ಷಣೆಯನ್ನು ಹೊಂದಿದೆ. ಹಿಂದೂ ಕಾನೂನು ಕಾಯ್ದೆ, 1955 ರ ಸೆಕ್ಷನ್ 5 ರ ಪ್ರಕಾರ, ಮದುವೆಗೆ ಕಾನೂನು ಪಾವಿತ್ರ್ಯವನ್ನು ಒದಗಿಸುವುದು. 'ಮದುವೆಯ ಸಮಯದಲ್ಲಿ ಯಾವುದೇ ವ್ಯಕ್ತಿ ಸಂಗಾತಿಯನ್ನು ಹೊಂದಿರುವುದಿಲ್ಲ. ಮೊದಲ ಮದುವೆ ಇನ್ನೂ ಇರುವಾಗ ಗಂಡ ತನ್ನ ಎರಡನೇ ಹೆಂಡತಿಯನ್ನು ಮದುವೆಯಾದರೆ, ಎರಡನೇ ಮದುವೆಯ ಸಮಯದಲ್ಲಿ ಮೊದಲ ವಿವಾಹವನ್ನು 'ಜೀವನಾಧಾರ' ಎಂದು ಹಿಂದೂ ಕಾನೂನು ಹೇಳುತ್ತದೆ.

ಹಿಂದೂ ವಿವಾಹ ಕಾಯಿದೆಯ ಪ್ರಕಾರ "ಮದುವೆಯಾಗಲಿರುವ ಯಾವುದೇ ಹುಡುಗ ಅಥವಾ ಹುಡುಗಿ ಈಗಾಗಲೇ ಮದುವೆಯಾಗಿರಬಾರದು. ಹಾಗಿದ್ದರೆ ವಿಚ್ಛೇದನ ಆಗಲೇಬೇಕು. ಈ ಕಾಯಿದೆಯ ಸೆಕ್ಷನ್ 11 ರ ಅಡಿ ಎರಡೂ ಕಡೆಯವರು ನ್ಯಾಯಾಲಯಕ್ಕೆ ಹೋಗಬಹುದು. ಇಬ್ಬರಲ್ಲಿ ಒಬ್ಬರು ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದರೆ ಅಥವಾ ಮದುವೆಯ ನಂತರ ಮಕ್ಕಳನ್ನು ಹೊಂದಲು ಸಾಧ್ಯವಾಗದಿದ್ದರೆ ಒಂದು ವರ್ಷದೊಳಗೆ ನ್ಯಾಯಾಲಯಕ್ಕೆ ಹೋಗಬಹುದು.

ಅದೇ ರೀತಿ ಈ ಕಾಯಿದೆಯ ಪ್ರಕಾರ ಮದುವೆಯ ಸಮಯದಲ್ಲಿ ಯುವತಿ ಗರ್ಭಿಣಿಯಾಗಿದ್ದರೆ ಆ ಹುಡುಗ ಒಂದು ವರ್ಷದೊಳಗೆ ನ್ಯಾಯಾಲಯದ ಮೊರೆ ಹೋಗಬಹುದು. ಮದುವೆಯಾದ ಮರುದಿನವೇ ಇಬ್ಬರಲ್ಲಿ ಒಬ್ಬರು ಮೋಸ ಹೋದರೆ ನ್ಯಾಯಾಲಯದ ಮೊರೆ ಹೋಗಬಹುದು. ಇದಲ್ಲದೆ, ದಂಪತಿಗಳು ಮದುವೆಯನ್ನು ನೋಂದಾಯಿಸದಿದ್ದರೆ, ಈ ಮದುವೆಯನ್ನು ರದ್ದುಗೊಳಿಸಬಹುದು. ಈ ಕಾಯಿದೆಯಲ್ಲಿ ಮದುವೆಯ ವಯಸ್ಸನ್ನು ನಿಗದಿಪಡಿಸಲಾಗಿದೆ. ಹುಡುಗನಿಗೆ 21 ವರ್ಷ ಮತ್ತು ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು.

ಏನಿದು ಆನಂದ್ ಮ್ಯಾರೇಜ್ ಆಕ್ಟ್: ಸಿಖ್ ವಿವಾಹ ಸಮಾರಂಭಗಳನ್ನು 'ಆನಂದ್ ಕರಾಜ್' ಎಂದು ಕರೆಯಲಾಗುತ್ತದೆ. ಅಂದರೆ ಆನಂದದಾಯಕ ಘಟನೆ. ಆನಂದ್ ಎಂದು ಕರೆಯಲ್ಪಡುವ ಸಿಖ್ ವಿವಾಹ ಸಮಾರಂಭದ ಪ್ರಕಾರ ವಿಧಿವತ್ತಾಗಿ ನಡೆದ ಎಲ್ಲಾ ವಿವಾಹಗಳು ಕ್ರಮವಾಗಿ ಪ್ರತಿಯೊಂದೂ ವಿಧಿವತ್ತಾದ ದಿನಾಂಕದಿಂದ ಜಾರಿಗೆ ಬಂದಿವೆ ಎಂದು ಪರಿಗಣಿಸಲಾಗುತ್ತದೆ. ಅದು ಒಳ್ಳೆಯದು ಮತ್ತು ಕಾನೂನಿನಲ್ಲಿ ಮಾನ್ಯವಾಗಿದೆ.

ನಮ್ಮ ಜನಸಂಖ್ಯೆಯ ವೈವಿಧ್ಯತೆಯ ದೃಷ್ಟಿಯಿಂದ, ಮದುವೆಯ ವಿಧಿಗಳು ಮತ್ತು ಸಂಪ್ರದಾಯಗಳು ಸಮುದಾಯದಿಂದ ಸಮುದಾಯಕ್ಕೆ ಬದಲಾಗುತ್ತವೆ. ಕೆಲವೊಮ್ಮೆ ಕೆಲವು ಮದುವೆಗಳ ಸಿಂಧುತ್ವದ ಬಗ್ಗೆ ಅನುಮಾನಗಳು ಉಂಟಾಗಬಹುದು. ಆದರೆ 'ಆನಂದ ವಿವಾಹ ಕಾಯಿದೆ' ಸಿಖ್ಖರ ವಿವಾಹ ವಿಧಿಗೆ ಶಾಸನಬದ್ಧ ಮಾನ್ಯತೆಯನ್ನು ನೀಡುತ್ತದೆ.

ಇದನ್ನೂ ಓದಿ: ವಧುವಿನ ತಂದೆಯ ವಿಲಕ್ಷಣ ಷರತ್ತು.. ಮುರಿದು ಬಿದ್ದ ಮದುವೆ: ಆ ಷರತ್ತುಗಳ ಗಮ್ಮತ್ತೇನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.