ETV Bharat / bharat

ಈ ಪ್ರದೇಶಗಳಲ್ಲಿ ನಾಳೆ ನಡೆಯಲ್ಲ ದೀಪಾವಳಿ!: ಯಾಕೆ ಗೊತ್ತಾ?

ಹಿಮಾಚಲ ಪ್ರದೇಶ ಕೆಲವು ಜಿಲ್ಲೆಗಳಲ್ಲಿ ಬುಧಿ ದೀಪಾವಳಿ ಎಂಬ ಹಬ್ಬವನ್ನು ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ. ಈ ಹಬ್ಬದ ಹಿನ್ನೆಲೆ ಇಲ್ಲಿದೆ.

what-is-budhi-diwali-celebrates-after-one-month-of-diwali-in-himachal-pradesh
ಈ ಪ್ರದೇಶಗಳಲ್ಲಿ ನಾಳೆ ನಡೆಯಲ್ಲ ದೀಪಾವಳಿ!: ಯಾಕೆ ಗೊತ್ತಾ?
author img

By ETV Bharat Karnataka Team

Published : Nov 11, 2023, 10:21 PM IST

ಸಿರ್ಮೌರ್/ಶಿಮ್ಲಾ(ಹಿಮಾಚಲ ಪ್ರದೇಶ): ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಕಾರ್ತಿಕ ಮಾಸದಲ್ಲಿ ದೀಪಾವಳಿ ಆಚರಿಸುವುದಿಲ್ಲ. ಹೌದು, ಈ ಬಾರಿ ದೀಪಾವಳಿಯನ್ನು ದೇಶಾದ್ಯಂತ ನವೆಂಬರ್ 12 ರಂದು ಆಚರಿಸಲಾಗುತ್ತಿದೆ. ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ದೀಪಾವಳಿಯನ್ನು ಒಂದು ತಿಂಗಳ ನಂತರ ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ. ಇದನ್ನು 'ಬುಧಿ ದೀಪಾವಳಿ'(ಹಳೆಯ ದೀಪಾವಳಿ) ಎಂದು ಕರೆಯಲಾಗುತ್ತದೆ.

WHAT IS BUDHI DIWALI CELEBRATES AFTER ONE MONTH OF DIWALI IN HIMACHAL PRADESH
ಬುಧಿ ದೀಪಾವಳಿ ಹಬ್ಬದಲ್ಲಿ ನೃತ್ಯ

ಈ ಹಳೆಯ ದೀಪಾವಳಿಯನ್ನು ಹಿಮಾಚಲ ಪ್ರದೇಶ, ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸುಮಾರು 140 ಪಂಚಾಯಿತಿಗಳು ಮತ್ತು ಕುಲ್ಲು, ಶಿಮ್ಲಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ. ಉತ್ತರಾಖಂಡದ ಜೌನ್ಸರ್, ಬಾವರ್ ಪ್ರದೇಶಗಳಲ್ಲಿ ಬುಧಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ಬುಧಿ ದೀಪಾವಳಿಯ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ರಾವಣನನ್ನು ಸಂಹಾರ ಮಾಡಿ ಲಂಕೆಯಿಂದ ರಾಮನು ಅಯೋಧ್ಯೆಗೆ ಮರಳಿದ ಸಂಬಂಧ ದೇಶಾದ್ಯಂತ ದೀಪಾವಳಿ ಆಚರಿಸಲಾಗುತ್ತದೆ. ಆದರೆ, ಈ ಪ್ರದೇಶಗಳಲ್ಲಿ ದೀಪಾವಳಿ ಆಚರಣೆ ವಿಷ್ಣುವಿನ ರಾಮ ಅವತಾರಕ್ಕಿಂತಲೂ ಹಳೆಯದು.

ಬುಧಿ ದೀಪಾವಳಿಯ ಪಂಜುಗಳೊಂದಿಗೆ ಜನರು

ಬುಧಿ ದೀಪಾವಳಿ ಹಿನ್ನೆಲೆ ಏನು?: ಈ ಕುರಿತು ಲೇಖಕ ದೀಪಕ್ ಶರ್ಮಾ ವಿವರಿಸಿದ್ದು ಹೀಗೆ, "ಈ ಹಬ್ಬದ ಹೆಸರು 'ಬುಧಿ ದಯಾವಾದಿ', ಇಲ್ಲಿ ದಯಾವಾದಿ ಎಂದರೆ ಹೋರಾಟ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ದೀಪಾವಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಆದರೆ ಬುಧಿ ದೀಪಾವಳಿಯನ್ನು ಒಂದು ತಿಂಗಳ ನಂತರ ಮಾರ್ಗಶಿರ್ಷ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿಯನ್ನು ಡಿಸೆಂಬರ್ 12 ರಂದು ಆಚರಿಸಲಾಗುತ್ತದೆ. ವಾಸ್ತವವಾಗಿ, ಈ ಹಬ್ಬಕ್ಕೆ ಸಂಬಂಧಿಸಿದ ಕಥೆ ತ್ರೇತಾಯುಗಕ್ಕೂ ಹಳೆಯದು. ಅದಕ್ಕಾಗಿಯೇ ಇದನ್ನು ಹಳೆಯ ದೀಪಾವಳಿ ಎಂದು ಕರೆಯಲಾಗುತ್ತದೆ" ಎಂದು ತಿಳಿಸಿದರು.

"ಬುಧಿ ದೀಪಾವಳಿಯ ಕಥೆಯು ರಾಕ್ಷಸ ವೃತ್ರಾಸುರ ಮತ್ತು ಇಂದ್ರ ನಡುವಿನ ಯುದ್ಧಕ್ಕೆ ಸಂಬಂಧಿಸಿದೆ. ದಧೀಚಿ ಎಂಬ ಮುನಿ ರಾಕ್ಷಸನನ್ನು ಕೊಲ್ಲಲು ತನ್ನ ದೇಹದ ಮೂಳೆಗಳನ್ನು (ಅಸ್ಥಿ) ಇಂದ್ರನಿಗೆ ದಾನ ಮಾಡಿದ್ದರು. ನಂತರ ಇಂದ್ರ ವಜ್ರಾಯುಧವನ್ನು ಈ ಮೂಳೆಗಳಿಂದ ತಯಾರಿ, ಅದರಿಂದ ವೃತ್ರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ. ಈ ಹಿನ್ನೆಲೆಯಲ್ಲಿ ಬುಧಿ ದೀಪಾವಳಿಯನ್ನು ಈ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ" ಎಂದರು.

ದೀಪಾವಳಿಯನ್ನು ಒಂದು ತಿಂಗಳು ತಡವಾಗಿ ಆಚರಿಸುವ ಬಗ್ಗೆ ಈ ಪ್ರದೇಶಗಳಲ್ಲಿ ಮತ್ತೊಂದು ಕಥೆ ಚಾಲ್ತಿಯಲ್ಲಿದೆ. ಸಿರ್ಮೌರ್ ಜಿಲ್ಲೆಯು ಹತಿ ಸಮುದಾಯದ ಗಣನೀಯ ಜನಸಂಖ್ಯೆಯಲ್ಲಿದೆ. ಕೇಂದ್ರ ಹತಿ ಸಮಿತಿಯ ಉಪಾಧ್ಯಕ್ಷ ಸುರೇಂದ್ರ ಹಿಂದೂಸ್ತಾನಿ ಅವರ ಪ್ರಕಾರ, "ಲಂಕೆಯಿಂದ ರಾಮ ಅಯೋಧ್ಯೆಗೆ ಮರಳಿದ ಸುದ್ದಿ ಒಂದು ತಿಂಗಳ ನಂತರ ಈ ಪ್ರದೇಶಗಳಲ್ಲಿನ ಜನರಿಗೆ ತಿಳಿಯಿತು. ಈ ಕಾರಣದಿಂದಾಗಿ ಈ ಪ್ರದೇಶಗಳಲ್ಲಿ ಒಂದು ತಿಂಗಳ ನಂತರ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು. ಸಿರ್ಮೌರ್ ಜಿಲ್ಲೆಯ ಗಿರಿಪಾರ್ ಪ್ರದೇಶವೊಂದರಲ್ಲೇ 140 ಪಂಚಾಯಿತಿಗಳ 435 ಹಳ್ಳಿಗಳಲ್ಲಿ ಬುಧಿ ದೀಪಾವಳಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ" ಎಂದು ಹೇಳಿದರು. ಕೆಲವು ಸ್ಥಳಗಳಲ್ಲಿ ಈ ಹಬ್ಬಗಳನ್ನು 3 ದಿನಗಳವರೆಗೆ ಆಚರಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ 5 ಮತ್ತು 7 ದಿನಗಳವರೆಗೆ ಆಚರಿಸಲಾಗುತ್ತದೆ.

ಬುಧಿ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ?: ಈ ಪ್ರದೇಶಗಳಲ್ಲಿ, ಬುಧಿ ದೀಪಾವಳಿಯಂದು ರಾತ್ರಿಯಿಡೀ ಪಂಜುಗಳನ್ನು ಬೆಳಗಿಸಲಾಗುತ್ತದೆ. ನೃತ್ಯ, ಹಾಡು ಹಾಡಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಈ ವೇಳೆ, ಜನರು ರಾಕ್ಷಸ ವೃತ್ತಾಸುರ ಮತ್ತು ಇಂದ್ರನ ಸೇನೆ ಎಂಬ ಎರಡು ಸೈನ್ಯವನ್ನು ಮಾಡುತ್ತಾರೆ. ಇವರ ನಡುವೆ ಜ್ಯೋತಿಯನ್ನು ಕಸಿದುಕೊಳ್ಳಲು ಪೈಪೋಟಿ ನಡೆಯುತ್ತದೆ. ಇದು ಪೌರಾಣಿಕ ಕಥೆಗಳಲ್ಲಿ ದಾಖಲಾಗಿರುವ ವೃತ್ತಾಸುರ ಮತ್ತು ಇಂದ್ರನ ನಡುವಿನ ಯುದ್ಧವನ್ನು ಪ್ರತಿಬಿಂಬಿಸುತ್ತದೆ.

3 ರಿಂದ 7 ದಿನಗಳವರೆಗೆ ನಡೆಯುವ ಈ ಉತ್ಸವದಲ್ಲಿ ವಿಶೇಷ ಜಾತ್ರೆಯನ್ನು ಸಹ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ, ರಾಮಾಯಣ, ಮಹಾಭಾರತ, ರಾಜ ಬಲಿಗೆ ಇಂದ್ರನಿಗೆ ಸಂಬಂಧಿಸಿದ ಕಥೆಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ರಾತ್ರಿಯಿಡೀ ಉಪನ್ಯಾಸ ನೀಡಲಾಗುತ್ತದೆ. ಈ ಪೌರಾಣಿಕ ಘಟನೆಗಳು ಮತ್ತು ಪಾತ್ರಗಳಿಗೆ ಸಂಬಂಧಿಸಿದ ಹಾಡುಗಳನ್ನು ಸ್ಥಳೀಯ ಆಡುಭಾಷೆಯಲ್ಲಿ ಹಾಡಲಾಗುತ್ತದೆ. ಜಾನಪದ ನೃತ್ಯಗಳನ್ನು ಮಾಡಲಾಗುತ್ತದೆ ಮತ್ತು ಬಗೆಬಗೆಯ ಸ್ಥಳೀಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ನರಕ ಚತುರ್ದಶಿ ವಿಶೇಷತೆಯೇನು? ಪೂಜೆಯ ವಿಧಾನ ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.