ಕೊಯಮತ್ತೂರು (ತಮಿಳುನಾಡು): ಡಿಸೆಂಬರ್ 8, 2021.. ದೇಶಕ್ಕೆ ದೇಶವೇ ಮೌನಕ್ಕೆ ಜಾರಿದ ದಿನ. ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಜನರು ಕೊಯಮತ್ತೂರಿನ ಸೂಲೂರ್ ಏರ್ ಫೋರ್ಸ್ ಬೇಸ್‌ನಿಂದ ನೀಲಗಿರಿ ಜಿಲ್ಲಾ ವೆಲ್ಲಿಂಗ್ಟನ್ ಸೇನಾ ತರಬೇತಿ ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಉಂಟಾದ ಹವಾಮಾನ ವೈಪರೀತ್ಯ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ನೀಲಗಿರಿ ಜಿಲ್ಲೆಯ ಕುನ್ನೂರು ಸಮೀಪದ ನಂಜಪ್ಪ ಛತ್ರಂ ಗ್ರಾಮದ ಬಳಿ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ಮಹಾ ದುರಂತವೊಂದು ಸಂಭವಿಸಿತ್ತು. ಪರಿಣಾಮ ಇಡೀ ದೇಶವೇ ದುಃಖಕ್ಕೆ ಜಾರುವಂತೆ ಮಾಡಿತ್ತು.
ಈ ಘಟನೆಯಲ್ಲಿ ಸಿಡಿಎಸ್(ಚೀಫ್ ಆಫ್ ಡಿಫೆನ್ಸ್ ಸ್ಟಾಪ್) ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಇದಾದ ಬಳಿಕ ಜನರಲ್ ಬಿಪಿನ್ ರಾವತ್ ಹಾಗೂ ಮೃತ ಯೋಧರ ಪಾರ್ಥಿವ ಶರೀರಗಳಿಗೆ ವೆಲ್ಲಿಂಗ್ಟನ್ ಸೇನಾ ತರಬೇತಿ ಕೇಂದ್ರದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಬಳಿಕ ಮೃತರ ಪಾರ್ಥಿವ ಶರೀರಗಳನ್ನು ಅವರವರ ಊರಿಗೆ ಸಾಗಿಸಲಾಗಿತ್ತು. ಈ ಅವಘಡದ ವೇಳೆ ನಂಜಪ್ಪ ಛತ್ರಂ ಗ್ರಾಮಸ್ಥರು ಹೆಲಿಕಾಪ್ಟರ್ ನಲ್ಲಿದ್ದವರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ ಆ ಕೆಲಸ ಅವರಿಂದ ಸಾಧ್ಯವಾಗಲೇ ಇಲ್ಲ.
ಕೊಳವೆ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ, ಸೇನಾ ಹೆಲಿಕಾಪ್ಟರ್ನಲ್ಲಿದ್ದವರು ಬದುಕಿ ಬರಲಿಲ್ಲ. ಮೃತರ ದೇಹಗಳನ್ನು ಸಾಗಿಸಲು ಕಂಬಳಿಗಳನ್ನು ನೀಡುವ ಮೂಲಕ, ವೀರ ಯೋಧರಿಗೆ ಸಹಾಯ ಮಾಡಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದರು. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ನಂಜಪ್ಪ ಛತ್ರಂ ಗ್ರಾಮಕ್ಕೆ ಆಗಮಿಸಿದ ಉನ್ನತ ಸೇನಾಧಿಕಾರಿಗಳು ಗ್ರಾಮಸ್ಥರ ಸೇವೆಯನ್ನು ಶ್ಲಾಘಿಸಿ ಒಂದು ವರ್ಷ ಉಚಿತ ವೈದ್ಯಕೀಯ ಶಿಬಿರ ನೀಡುವುದಾಗಿ ಘೋಷಿಸಿದ್ದರು.
ಕೊಟ್ಟ ಭರವಸೆ ಈಡೇರಿಸಿದ ಸೇನೆ: ಅಷ್ಟೇ ಅಲ್ಲ ಅಲ್ಲಿನ ಜನರ ಕುಂದು ಕೊರತೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಅಂದ ಹಾಗೆ ಕೊಟ್ಟ ಮಾತಿನಂತೆ ಎರಡು ವರ್ಷದಲ್ಲಿ ಎಲ್ಲ ಭರವಸೆಗಳು ಪೂರ್ಣಗೊಂಡಿವೆ. ಈ ಮಾತನ್ನು ಅಲ್ಲಿನ ಗ್ರಾಮಸ್ಥರೇ ಅಭಿಮಾನದಿಂದ ಹೇಳಿಕೊಂಡಿದ್ದಾರೆ. ಅಪಘಾತವನ್ನು ಮೊದಲು ನೋಡಿದ ಕೃಷ್ಣಸ್ವಾಮಿ ಅಂದಿನ ಘಟನೆಯನ್ನು ಕರಾಳ ನೆನಪನ್ನು ಮರೆತಿಲ್ಲ.
ಇದೀಗ ಹೆಲಿಕಾಪ್ಟರ್ ಬಿದ್ದ ಜಾಗದಲ್ಲಿ ‘ಸ್ಮಾರಕ’ ನಿರ್ಮಿಸಲಾಗಿದೆ. 3 ತಿಂಗಳಿಂದ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ, ಈಗ ಎಲ್ಲ ಕಾಮಗಾರಿ ಪೂರ್ಣಗೊಂಡಿದೆ. ಬಿಪಿನ್ ರಾವತ್ ಮತ್ತು ಪ್ರಾಣ ಕಳೆದುಕೊಂಡ ಇತರ ಸೈನಿಕರ ಸ್ಮಾರಕಗಳ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ಡಿಸೆಂಬರ್ 8, 2023 ರಂದು ಈ ಸ್ಮಾರಕ ನಾಡಿಗೆ ಅರ್ಪಿಸಲು ಸೇನೆ ನಿರ್ಧರಿಸಿದೆ ಎಂದು ಕೃಷ್ಣಸ್ವಾಮಿ ಮಾಹಿತಿ ನೀಡಿದ್ದಾರೆ.
ಈ ಸ್ಮಾರಕದಲ್ಲಿ ಮೃತ ಜನರಲ್ ಬಿಪಿನ್ ರಾವತ್ ಸೇರಿದಂತೆ 14 ಜನರ ಹೆಸರುಗಳನ್ನು ಕೆತ್ತಲಾಗಿದೆ. ಜತೆಗೆ ತಮಿಳು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಭಗವದ್ಗೀತೆಯ ಪಠ್ಯವನ್ನು ಸಹ ಕೆತ್ತಲಾಗಿದೆ.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರು:- ಸಿಡಿಎಸ್ ಜನರಲ್ ಬಿಪಿನ್ ರಾವತ್ ಮಧುಲಿಕಾ ರಾಜೇ ಸಿಂಗ್ ರಾವತ್, ಬಿಪಿನ್ ರಾವತ್ ಅವರ ಪತ್ನಿ ರಾವತ್ ಅವರ ರಕ್ಷಣಾ ಸಹಾಯಕ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ (ಎಲ್ಎಸ್) ನಾಯಕ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ವಾಯುಪಡೆಯ ಹೆಲಿಕಾಪ್ಟರ್ ಸಿಬ್ಬಂದಿ ಸೇರಿದಂತೆ 9 ರಕ್ಷಣಾ ಸಿಬ್ಬಂದಿ: ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ಕಿರಿಯ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್ ಕಿರಿಯ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್ ಹವಾಲ್ದಾರ್ ಸತ್ಪಾಲ್ ರಾಯ್ ನಾಯಕ್ ಗುರುಸೇವಕ್ ಸಿಂಗ್ ನಾಯಕ್ ಜಿತೇಂದ್ರ ಕುಮಾರ್ ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಹೆಲಿಕಾಪ್ಟರ್ ಅನ್ನು ಪೈಲಟ್ ಆಗಿದ್ದರು. |
ಇದನ್ನು ಓದಿ: ರಕ್ಷಣಾ ಸಚಿವರ ಕೈ ಸೇರಲಿದೆ ಹೆಲಿಕಾಪ್ಟರ್ ದುರಂತದ ತನಿಖಾ ವರದಿ: ಗೊತ್ತಾಗಲಿದೆಯಾ ನಿಖರ ಕಾರಣ?
ಸಿಬ್ಬಂದಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಎಂ ಎಂ ನರವಾಣೆ ಅಧಿಕಾರ ಸ್ವೀಕಾರ
ಹೆಲಿಕಾಪ್ಟರ್ ದುರಂತ: ಕೊನೆ ಕ್ಷಣದ ವಿಡಿಯೋ ಮಾಡಿದ್ದ ವ್ಯಕ್ತಿಯ ವಿಚಾರಣೆ, ಮೊಬೈಲ್ ಪೊಲೀಸ್ ವಶಕ್ಕೆ