ಪ್ರಯಾಗರಾಜ್(ಉತ್ತರಪ್ರದೇಶ): ಸಾವಿನ ನಂತರ ದೇಹದಾನ ಮಾಡುವುದು ಭಾರತದಲ್ಲಿ ಸಾಂಪ್ರದಾಯಿಕ ಆಚರಣೆಯಲ್ಲ. ಎಲ್ಲ ಧರ್ಮಗಳು ಮೃತ ದೇಹಗಳನ್ನು ಸುಡುವ ತಮ್ಮದೇ ಆದ ವಿಧಾನಗಳನ್ನು ಹೊಂದಿವೆ. ಆದರೆ ಜಾಗೃತಿಯ ನಂತರ ನೇತ್ರದಾನ, ಮರಣಾನಂತರ ದೇಹದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಪಡೆದ ದಾನದ ಶವವನ್ನು ವೈದ್ಯಕೀಯ ವಿದ್ಯಾರ್ಥಿಗಳು ಬಳಸಿಕೊಂಡು ಅಧ್ಯಯನ ಮಾಡುತ್ತಾರೆ.
ಶವಕ್ಕೆ ಕತ್ತರಿ ಹಾಕುವ ಮೊದಲು ಸಂಪ್ರದಾಯದಂತೆ ಅದಕ್ಕೆ ಗೌರವ ಸಲ್ಲಿಸಿ, ಸತ್ತವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಗುತ್ತದೆ ಎಂಬುದು ವಿಶೇಷ.
ಪ್ರಯಾಗರಾಜ್ನ ಮೋತಿಲಾಲ್ ನೆಹರು ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಸ್.ಪಿ.ಸಿಂಗ್ ಈ ಬಗ್ಗ್ಗೆ ಮಾಹಿತಿ ನೀಡಿದ್ದು, ದೇಹದಾನವಾಗಿ 77 ಮೃತದೇಹಗಳನ್ನು ಎಂಎಲ್ಎನ್ ವೈದ್ಯಕೀಯ ಕಾಲೇಜು ಸ್ವೀಕರಿಸಿದೆ. ಒಟ್ಟು 650 ಕ್ಕೂ ಹೆಚ್ಚು ಮಂದಿ ದೇಹದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೊದಲು ದೇಹದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಈಗ ಸಮಾಜದ ಪ್ರಜ್ಞಾವಂತರು ತಮ್ಮ ದೇಹವನ್ನು ಜೀವಂತ ದಾನ ಮಾಡುತ್ತಿದ್ದಾರೆ ಎಂದರು.
ಮೃತದೇಹಕ್ಕೆ ಗೌರವ ಏಕೆ: ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು, ಪ್ರಾಂಶುಪಾಲರು ಗೌರವ ನೀಡುತ್ತಾರೆ. ಏಕೆಂದರೆ ಮೃತದೇಹದ ಮೂಲಕವೇ ವೈದ್ಯಕೀಯ ವಿದ್ಯಾರ್ಥಿ ದೇಹ ರಚನೆಯ ನೈಜ ಮಾಹಿತಿ ಪಡೆಯುತ್ತಾನೆ. ತಲೆಯಿಂದ ಪಾದದವರೆಗಿನ ರಚನೆಯ ಬಗ್ಗೆ ನಿಜವಾದ ಮಾಹಿತಿಯು ಮಾನವ ದೇಹದೊಳಗೆ ಕಂಡುಬರುತ್ತದೆ. ಈ ಮೃತ ದೇಹಗಳ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ದೇಹದೊಳಗೆ ಅಂಗಾಂಗಗಳು ಎಲ್ಲಿವೆ ಎಂಬುದನ್ನು ತಿಳಿದುಕೊಳ್ಳಬಹುದು.
ಶವದಿಂದಲೇ ವಿದ್ಯಾರ್ಥಿಗಳು ದೇಹ ರಚನೆಯ ಬಗ್ಗೆ ತಿಳಿದುಕೊಳ್ಳುವುದರಿಂದ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ದಾನ ಮಾಡಿದ ದೇಹವು ವೈದ್ಯಕೀಯ ಕಾಲೇಜು ಆವರಣವನ್ನು ತಲುಪಿದಾಗ, ವೈದ್ಯಕೀಯ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಬಳಿಕ ಸ್ಟ್ರೆಚರ್ ಸಹಾಯದಿಂದ ಮೃತದೇಹವನ್ನು ವೈದ್ಯಕೀಯ ಕಾಲೇಜಿನೊಳಗೆ ತರಲಾಗುತ್ತದೆ.
ಪಾರ್ಥಿವ ಶರೀರವನ್ನು ಸಭಾಂಗಣದಲ್ಲಿ ಇರಿಸಿದಾಗ, ಪ್ರತಿಯೊಬ್ಬರೂ ಗೌರವ ಸಲ್ಲಿಸುತ್ತಾರೆ. ವೈದ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪುಷ್ಪ ನಮನ ಕೂಡ ಸಲ್ಲಿಸುತ್ತಾರೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಾಚರಣೆ ಮಾಡುತ್ತಾರೆ. ಅದರ ನಂತರವೇ ಅಧ್ಯಯನಕ್ಕೆ ಬಳಸಿಕೊಳ್ಳುತ್ತಾರೆ.
ದೇಶದಲ್ಲಿ ಒಟ್ಟು 595 ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ 302 ಸರ್ಕಾರಿ ವೈದ್ಯಕೀಯ ಕಾಲೇಜುಗಳು, 3 ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು 19 ಏಮ್ಸ್ ವೈದ್ಯಕೀಯ ಸಂಸ್ಥೆಗಳಿವೆ. ಇಲ್ಲಿ ಓದುತ್ತಿರುವ ಎಂಬಿಬಿಎಸ್ ವಿದ್ಯಾರ್ಥಿಗಳು ದಾನ ಮಾಡಿದ ಮೃತ ದೇಹಗಳ ಮೂಲಕ ಮಾನವ ದೇಹ ಮತ್ತು ಅಂಗಾಂಗಗಳ ಬಗ್ಗೆ ಅಧ್ಯಯನ ಮಾಡಿ ವೈದ್ಯರಾಗುತ್ತಾರೆ.
ಓದಿ: ಮೈಸೂರು ರಸ್ತೆಯಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಹೈಕೋರ್ಟ್ ಸಮ್ಮತಿ