ETV Bharat / bharat

ಭಾರತೀಯ ಕುಸ್ತಿ ಒಕ್ಕೂಟದ ಅಮಾನತು ಪ್ರಶ್ನಿಸಿ ಮುಂದಿನ ವಾರ ಕೋರ್ಟ್​ಗೆ: ಸಂಜಯ್ ಸಿಂಗ್ - ಸಂಜಯ್ ಸಿಂಗ್

ನಮಗೆ ಸರಿಯಾಗಿ ಕಾರ್ಯನಿರ್ವಹಿಸುವ ಕುಸ್ತಿ ಒಕ್ಕೂಟ ಅಗತ್ಯವಿದೆ. ನಾವು ಮುಂದಿನ ವಾರ ಒಕ್ಕೂಟದ ಅಮಾನತು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇವೆ ಎಂದು ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.

WFI to challenge its suspension next week, calls EC meeting on January 16
ಭಾರತೀಯ ಕುಸ್ತಿ ಒಕ್ಕೂಟದ ಅಮಾನತು ಪ್ರಶ್ನಿಸಿ ಮುಂದಿನ ವಾರ ಕೋರ್ಟ್​ಗೆ: ಸಂಜಯ್ ಸಿಂಗ್
author img

By PTI

Published : Jan 4, 2024, 8:14 PM IST

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟವನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮದ ವಿರುದ್ಧ ಹೋರಾಟಕ್ಕೆ ಒಕ್ಕೂಟ ಮುಂದಾಗಿದೆ. ಡಬ್ಲ್ಯೂಎಫ್ಐ​ ತನ್ನ ಅಮಾನತು ಪ್ರಶ್ನಿಸಿ ಮುಂದಿನ ವಾರ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ. ಇದೇ ವೇಳೆ, ತನ್ನ ಮುಂದಿನ ನಡೆ ಕುರಿತು ಚರ್ಚಿಸಲು ಮತ್ತು ಜನವರಿ 16ರಂದು ಕಾರ್ಯಕಾರಿ ಸಮಿತಿ ಸಭೆಯನ್ನೂ ಕರೆದಿದೆ.

ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಸಂಬಂಧ ಹಿರಿಯ ಕುಸ್ತಿಪಟುಗಳ ಹೋರಾಟದಿಂದ ಭಾರತೀಯ ಕುಸ್ತಿ ಒಕ್ಕೂಟ ವಿವಾದ ಗೂಡಾಗಿದೆ. ಇದರ ನಡುವೆ ಡಿ. 21ರಂದು ನಡೆದ ಚುನಾವಣೆಯಲ್ಲಿ ಈ ಹಿಂದಿನ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಣ ಆಯ್ಕೆಯಾಗಿತ್ತು. ಅಲ್ಲದೇ, ಬ್ರಿಜ್ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಇದಾದ ಮೂರೇ ದಿನದಲ್ಲಿ ಒಕ್ಕೂಟದ ಹೊಸ ಆಡಳಿತ ಮಂಡಳಿಯನ್ನು ಕೇಂದ್ರ ಕ್ರೀಡಾ ಇಲಾಖೆ​ ಅಮಾನತುಗೊಳಿಸಿತ್ತು.

ಇದನ್ನೂ ಓದಿ: ರಾಷ್ಟ್ರೀಯ ಕುಸ್ತಿ ಚಾಂಪಿಯನ್​ಶಿಪ್ ಆಯೋಜನೆ ಮಾಡುತ್ತೇವೆ : ಸಂಜಯ್​ ಸಿಂಗ್​

ರಾಷ್ಟ್ರೀಯ ಕ್ರೀಡಾ ಸಂಹಿತೆ ಮತ್ತು ಡಬ್ಲ್ಯೂಎಫ್ಐ​ ಸಂವಿಧಾನದ ಉಲ್ಲಂಘನೆಯನ್ನು ಉಲ್ಲೇಖಿಸಿ, ಹೊಸದಾಗಿ ಚುನಾಯಿತ ಮಂಡಳಿಯನ್ನು ಅಮಾನತುಗೊಳಿಸಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ''ನಮಗೆ ಸರಿಯಾಗಿ ಕಾರ್ಯನಿರ್ವಹಿಸುವ ಒಕ್ಕೂಟದ ಅಗತ್ಯವಿದೆ. ನಾವು ಮುಂದಿನ ವಾರ ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇವೆ. ನಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವುದರಿಂದ ಈ ಅಮಾನತು ನಮಗೆ ಸ್ವೀಕಾರಾರ್ಹವಲ್ಲ. ನಾವು ಜನವರಿ 16ರಂದು ಕಾರ್ಯಕಾರಿ ಸಮಿತಿ ಸಭೆಯನ್ನು ಸಹ ಕರೆದಿದ್ದೇವೆ'' ಎಂದು ಒಕ್ಕೂಟದ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ.

ಈ ಇಕ್ಕಟ್ಟಿನ ಸಮಯದಲ್ಲಿ ಡಬ್ಲ್ಯೂಎಫ್​ಐ ದೈನಂದಿನ ವ್ಯವಹಾರಗಳನ್ನು ನೋಡಲು ಭಾರತದ ಒಲಿಂಪಿಕ್ ಸಂಸ್ಥೆ (ಐಒಎ)ಯು ರಚಿಸಿದ ಸಮಿತಿ ಕಾರ್ಯ ನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಅವರು, ''ಝಾಗ್ರೆಬ್ ಓಪನ್‌ಗಾಗಿ ತಂಡವನ್ನು ಹೇಗೆ ಪ್ರಕಟಿಸಲಾಯಿತು ಎಂಬುದನ್ನು ನೀವು ನೋಡಿದ್ದೀರಿ. ಐದು ವಿಭಾಗಗಳು ಇದರಲ್ಲಿ ಪ್ರತಿನಿಧಿಸುತ್ತಿಲ್ಲ. ಸರಿಯಾದ ಒಕ್ಕೂಟದ ಅನುಪಸ್ಥಿತಿಯಲ್ಲಿ ಇಂತಹದ್ದು ಸಂಭವಿಸುತ್ತದೆ. ಕೆಲವು ಕುಸ್ತಿಪಟುಗಳು ತಮ್ಮ ವಿಭಾಗಗಳಲ್ಲಿ ಲಭ್ಯವಿಲ್ಲದಿದ್ದರೆ, ಅವರ ಬದಲಿಗೆ ಬೇರೆಯವರನ್ನು ಏಕೆ ಆಯ್ಕೆ ಮಾಡಲಿಲ್ಲ'' ಎಂದು ಪ್ರಶ್ನಿಸಿದರು.

''ಒಕ್ಕೂಟ ಅಸ್ತಿತ್ವದಲ್ಲಿದ್ದಾಗ ಒಂದು ಒಂದೂ ಟೂರ್ನಿಯಲ್ಲಿ ಎಂದಿಗೂ ಯಾವುದೇ ತೂಕ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸದೆ ಬಿಟ್ಟಿಲ್ಲ. ಅಲ್ಲದೇ, ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ಅದೇ ತಂಡವನ್ನು ಆಯ್ಕೆ ಮಾಡುವ ತರ್ಕವೇನು?. ಇತರ ಸ್ಪರ್ಧಿಗಳೂ ಇದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರು ಎಂದು ಭಾವಿಸಿದ ಕುಸ್ತಿಪಟುಗಳಿಂದ ನನಗೆ ಕರೆಗಳು ಬರುತ್ತಿವೆ. ತಮ್ಮನ್ನು ತಾವು ಸಾಬೀತುಪಡಿಸಲು ನ್ಯಾಯಯುತ ಅವಕಾಶವನ್ನು ನೀಡಿದರೆ ಕುಸ್ತಿಪಟುಗಳ ತಂಡವನ್ನು ಮಾಡಬಹುದಿತ್ತು. ಅದಕ್ಕಾಗಿಯೇ ನಿಮಗೆ ಸರಿಯಾದ ಒಕ್ಕೂಟದ ಅಗತ್ಯವಿದೆ'' ಎಂದು ಅವರು ಹೇಳಿದರು.

ಇದನ್ನೂ ಓದಿ: ಕುಸ್ತಿ ಒಕ್ಕೂಟದ ವಿವಾದಕ್ಕೆ ಹೊಸ ತಿರುವು: ಹಿರಿಯರ ವಿರುದ್ಧ ಕಿರಿಯರು ಅಖಾಡಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.