ETV Bharat / bharat

ಇ- ವಾಹನಗಳಿಗೆ ಪ್ರತ್ಯೇಕ ಗ್ರೀನ್ ಕಾರಿಡಾರ್ ನಿರ್ಮಿಸಲು ಮುಂದಾದ ಪ.ಬಂಗಾಳ ಸರ್ಕಾರ - ಇ ವಾಹನಗಳಿಗೆ ಪ್ರತ್ಯೇಕ ಕಾರಿಡಾರ್

ರಾಜ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಹಿ ಇ-ವಾಹನಗಳಿಗೆ ಪ್ರತ್ಯೇಕ ಕಾರಿಡಾರ್ ನಿರ್ಮಿಸಲು ಪಶ್ಚಿಮ ಬಂಗಾಳ ಸರ್ಕಾರ ಯೋಜನೆ ರೂಪಿಸಿದೆ.

West Bengal proposes green lanes for e-vehicles
ಪಶ್ಚಿಮ ಬಂಗಾಳ ಗ್ರೀನ್ ಲೇನ್
author img

By

Published : Jun 6, 2021, 2:28 PM IST

ಕೊಲ್ಕತ್ತಾ: ಸಾಂಪ್ರದಾಯಿಕ ಇಂಧನ ಚಾಲಿತ ವಾಹನಗಳನ್ನು ಕಡಿಮೆ ಮಾಡಿ ಇ-ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರವು ಎಲೆಕ್ಟ್ರಿಕ್ ವಾಹನಗಳು ಮಾತ್ರ ಬಳಸಬಹುದಾದ, ಪ್ರತಿ 25 ಕಿ.ಮೀಗೆ ಚಾರ್ಜಿಂಗ್ ಸ್ಟೇಶನ್ ಇರುವ ವಿಶೇಷ ಇಂಟರ್​-ಸಿಟಿ ಕಾರಿಡಾರ್‌ಗಳನ್ನು ನಿರ್ಮಿಸಲು ಮುಂದಾಗಿದೆ.

ಈಗಾಗಲೇ ರಾಜ್ಯದಲ್ಲಿ ವಿವಿಧ ಸಾರಿಗೆ ಸೌಲಭ್ಯಗಳಲ್ಲಿ ಅತ್ಯಾಧುನಿಕ ಇ-ವಾಹನಗಳನ್ನು ಪರಿಚಯಿಸಲಾಗಿದೆ ಮತ್ತು 2030 ರ ವೇಳೆಗೆ 10 ಲಕ್ಷ ಬ್ಯಾಟರಿ ಚಾಲಿತ ವಾಹನಗಳ ಗುರಿಯನ್ನು ಹೊಂದಲಾಗಿದೆ.

"ಸರ್ಕಾರ ಯಾವಾಗಲೂ ಮಾಲಿನ್ಯ ಮುಕ್ತ ರಾಜ್ಯವನ್ನು ಬಯಸುತ್ತದೆ. ಹೊಸ ಯೋಜನೆಯು ಶೂನ್ಯ ಹೊರಸೂಸುವಿಕೆ ಸಾರಿಗೆ ವ್ಯವಸ್ಥೆಯ ನಮ್ಮ ಕನಸನ್ನು ನನಸಾಗಿಸುತ್ತದೆ. ಇ-ವಾಹನಗಳು ಪರಿಸರವನ್ನು ಮಾಲಿನ್ಯ ಮುಕ್ತ ಮಾಡುವುದಲ್ಲದೆ, ನಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ. ನಿರಂತರವಾಗಿ ಹೆಚ್ಚುತ್ತಿರುವ ಇಂಧನ ಬೆಲೆ ಸಮಸ್ಯೆಯನ್ನು ಇದರಿಂದ ಪರಿಹರಿಸಬಹುದು. ಇದು ಭವಿಷ್ಯದ ಸಾರಿಗೆ ಸಾರಿಗೆ ವ್ಯವಸ್ಥೆಯಾಗಿದ್ದು, ಈ ಗುರಿಯನ್ನು ಶೀಘ್ರವಾಗಿ ತಲುಪಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಾರಿಗೆ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ಎಲ್ಲಿಂದೆಲ್ಲಿಗೆ ಗ್ರೀನ್ ಕಾರಿಡಾರ್​?

ಆರಂಭದಲ್ಲಿ ಎರಡು ಪ್ರಮುಖ ಮಾರ್ಗಗಳಲ್ಲಿ ಪರಿಸರ ಸ್ನೇಹಿ ಪಥಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಒಂದು ಕೊಲ್ಕತ್ತಾದಿಂದ ಅಸನ್ಸೋಲ್ ವರೆಗೆ - 215 ಕಿ.ಮೀ ದೂರ ಮತ್ತು ಇನ್ನೊಂದು ಕೊಲ್ಕತ್ತಾದಿಂದ ದಿಘಾವರೆಗೆ - 185 ಕಿ.ಮೀ. ದೂರ. ಈ ಮಾರ್ಗಗಳಲ್ಲಿ, ಎಲೆಕ್ಟ್ರಿಕ್ ವಾಹನಗಳು ಆದ್ಯತೆಯ ಚಲನೆಯ ಮಾರ್ಗಗಳನ್ನು ಹೊಂದಲು ಯೋಜಿಸಲಾಗಿದೆ ಮತ್ತು ಪ್ರತಿ 25 ಕಿ.ಮೀ.ಗೆ ಕ್ಷಿಪ್ರ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಈ ಮಾರ್ಗಗಳಲ್ಲಿ ಹಸಿರು ವಲಯಗಳು ಕುಡ ಇರುತ್ತವೆ. ಅದನ್ನು ಪಾರ್ಕಿಂಗ್ ಪ್ರದೇಶಗಳಾಗಿ ಅಥವಾ ಬ್ಯಾಟರಿ ಚಾಲಿತ ವಾಹನಗಳನ್ನು ಮಾತ್ರ ಅನುಮತಿಸುವ ಇತರ ಸೌಲಭ್ಯಗಳಾಗಿ ಅಭಿವೃದ್ಧಿಪಡಿಸಬಹುದು.

ಇ-ಮೊಬಿಲಿಟಿ ನಗರಗಳು :

ಹೊಸ ಯೋಜನೆಯು ಕೊಲ್ಕತ್ತಾ, ಹೌರಾ, ಅಸನ್ಸೋಲ್ ಮತ್ತು ಡಾರ್ಜಿಲಿಂಗ್‌ ನಗರಗಳನ್ನು ಮಾದರಿ ಇ-ಮೊಬಿಲಿಟಿ ನಗರಗಳೆಂದು ಗುರುತಿಸಲಿದೆ. ಈ ನಗರಗಳು ಎಲ್ಲಾ ಉಪಕ್ರಮಗಳಿಗೆ ಪ್ರಾಯೋಗಿಕ ನಗರವಾಗಿದೆ ಎಂದು ಯೋಜನೆಯನ್ನು ರೂಪಿಸಿದ ನೋಡಲ್ ಸಂಸ್ಥೆಯಾದ ಬಂಗಾಳದ ವಿದ್ಯುತ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.