ETV Bharat / bharat

ಪಂಚಾಯತ್​ ಚುನಾವಣೆ ಹಿಂಸಾಚಾರ: ಗೃಹ ಸಚಿವ ಅಮಿತ್​ ಶಾ ಭೇಟಿಯಾದ ಪಶ್ಚಿಮಬಂಗಾಳ ಗವರ್ನರ್​ - ಪಂಚಾಯತ್​ ಚುನಾವಣೆ

ಪಶ್ಚಿಮಬಂಗಾಳ ರಾಜ್ಯಪಾಲ ಸಿ ವಿ ಆನಂದ್​ ಬೋಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಿದರು.

ಗೃಹ ಸಚಿವ ಅಮಿತ್​ ಶಾ ಭೇಟಿಯಾದ ಪಶ್ಚಿಮಬಂಗಾಳ ರಾಜ್ಯಪಾಲ

author img

By

Published : Jul 10, 2023, 7:41 PM IST

ನವದೆಹಲಿ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ 20 ಜನರು ಸಾವಿಗೀಡಾಗಿದ್ದು, ರಾಜ್ಯಪಾಲ ಸಿ ವಿ ಆನಂದ್​​ ಬೋಸ್ ಅವರು ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ಈ ಕುರಿತು ಮಾಹಿತಿ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇಂದು ಭೇಟಿ ಕೂಡ ಮಾಡಿದ್ದಾರೆ. ಚುನಾವಣೆಯ ವೇಳೆ ಹಲವು ಸ್ಥಳಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿದ್ದು, ಅದನ್ನು ಗೃಹ ಸಚಿವರಿಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ನಡೆದ ಪಂಚಾಯತ್​ ಚುನಾವಣೆಯ ಮತದಾನದ ದಿನದಂದು (ಜುಲೈ 8) ರಾಜ್ಯದ ಹಲವೆಡೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಟಿಎಂಸಿ, ಬಿಜೆಪಿ, ಕಾಂಗ್ರೆಸ್​ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿತ್ತು. ಇದರಲ್ಲಿ 20 ಮಂದಿ ಸಾವಿಗೀಡಾಗಿದ್ದಾರೆ. ಇದು ರಾಜ್ಯದಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೂ ನಡೆದ ಹೊಡೆದಾಟದಲ್ಲಿ 14 ಮಂದಿ ಮೃತಪಟ್ಟಿದ್ದರು.

  • Delhi | West Bengal Governor CV Ananda Bose arrives at the Ministry of Home Affairs to meet Union Home Minister Amit Shah pic.twitter.com/SnfaGJjTHD

    — ANI (@ANI) July 10, 2023 " class="align-text-top noRightClick twitterSection" data=" ">

ಮತದಾನದ ದಿನದಂದು ನಡೆದ ಮಾರಾಮಾರಿಯ ಬಗ್ಗೆ ಮಾಹಿತಿ ತಿಳಿದ ರಾಜ್ಯಪಾಲ ಆನಂದ್​​ ಬೋಸ್ ಅವರು ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸ್ವತಃ ಅವರೇ ಉತ್ತರ, ದಕ್ಷಿಣದ 24 ಪರಗಣ ಜಿಲ್ಲೆಗಳ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ರಾಜಕೀಯ ಬಣಗಳ ನಡುವೆ ಮಾರಣಾಂತಿಕ ಘರ್ಷಣೆ ನಡೆದ ಸ್ಥಳಗಳಿಗೂ ತೆರಳಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ್ದರು.

ಈ ಸಂಘರ್ಷದ ಬಗ್ಗೆ ತೀವ್ರ ಕಿಡಿಕಾರಿದ್ದ ರಾಜ್ಯಪಾಲರು, ಶಾಂತಿಯುತ ಮತದಾನಕ್ಕೆ ಮನವಿ ಮಾಡಿದ್ದರು. ಅಲ್ಲದೇ, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಹೊಡೆದಾಟ ತಾರಕಕ್ಕೇರಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು.

ಮಾರಣಾಂತಿಕ ಸಂಘರ್ಷಕ್ಕೆ 20 ಬಲಿ: ಶನಿವಾರ ನಡೆದ ಮತದಾನದ ವೇಳೆ ದಕ್ಷಿಣ 24 ಪರಗಣ ಜಿಲ್ಲೆಗಳಾದ ಭಂಗಾರ್ ಮತ್ತು ಪುರ್ಬಾ ಮೇದಿನಿಪುರದ ನಂದಿಗ್ರಾಮ್‌, ಮುರ್ಷಿದಾಬಾದ್, ನಾಡಿಯಾ ಮತ್ತು ಕೂಚ್ ಬೆಹಾರ್​ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಮತದಾನ ಕೇಂದ್ರಗಳ ವಶ, ಮತಪೆಟ್ಟಿಗೆಗಳಿಗೆ ಬೆಂಕಿ, ಲೂಟಿ, ಮತಕೇಂದ್ರಗಳ ಧ್ವಂಸ, ಚುನಾವಣಾಧಿಕಾರಿಗಳ ಮೇಲೆ ಹಲ್ಲೆಯಂತಹ ಘಟನೆಗಳು ನಡೆದಿದ್ದವು. ಅಲ್ಲದೇ, ಕಾರ್ಯಕರ್ತರ ನಡುವಿನ ಸಂಘರ್ಷದಲ್ಲಿ 20 ಮಂದಿ ಸಾವಿಗೀಡಾಗಿದ್ದರು. ಇದರಲ್ಲಿ 13 ಜನರು ಆಡಳಿತಾರೂಢ ಟಿಎಂಸಿಗೆ ಸೇರಿದವರಾಗಿದ್ದರೆ, ತಲಾ ಇಬ್ಬರು ಬಿಜೆಪಿ ಮತ್ತು ಸಿಪಿಐ-ಎಂ, ಕಾಂಗ್ರೆಸ್‌ನ ಒಬ್ಬರು ಮತ್ತು ಇಬ್ಬರು ಮತದಾರರಾಗಿದ್ದಾರೆ.

ಮರು ಮತದಾನ: ಹಲವು ಜಿಲ್ಲೆಗಳ ಮತಕೇಂದ್ರಗಳಲ್ಲಿ ಹಿಂಸಾಚಾರ, ಮತದಾನ ನಿಲುಗಡೆ ಸೇರಿದಂತೆ ಹಲವು ಕಾರಣಗಳಿಗಾಗಿ 696 ಬೂತ್‌ಗಳಲ್ಲಿ ಇಂದು ಮರು ಮತದಾನ ನಡೆದಿದೆ.

ಇನ್ನು, ನ್ಯಾಯಸಮ್ಮತ ಮತದಾನಕ್ಕಾಗಿ ಕೋಲ್ಕತ್ತಾ ಹೈಕೋರ್ಟ್‌ನ ಸೂಚನೆಯ ಮೇರೆಗೆ ನಿಯೋಜಿಸಲಾದ ಬಿಎಸ್‌ಎಫ್​, ಸಿಆರ್​ಪಿಎಫ್​ ಸಿಬ್ಬಂದಿಗೆ ಸೂಕ್ಷ್ಮ ಮತಕೇಂದ್ರಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಿಎಸ್‌ಎಫ್‌ನ ಡಿಐಜಿ ಎಸ್‌ಎಸ್‌ ಗುಲೇರಿಯಾ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ಸೂಕ್ಷ್ಮ ಬೂತ್‌ಗಳ ಸಂಖ್ಯೆಗಳನ್ನು ನೀಡಲಾಗಿದೆ. ಯಾವ ಪ್ರದೇಶ ಎಂಬುದರ ಬಗ್ಗೆ ಆಯೋಗ ವಿವರ ನೀಡಿಲ್ಲ ಎಂದು ದೂರಿದ್ದರು.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಪೊಲೀಸ್ ಸಿಬ್ಬಂದಿ ಹತ್ಯೆ, 10 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.