ETV Bharat / bharat

ಕ್ರಿಕೆಟರ್​ ಮನೋಜ್ ತಿವಾರಿ ಟಿಎಂಸಿ ಸೇರಿದ ಬೆನ್ನಲ್ಲೇ ಕಮಲ ಮುಡಿದ ಅಶೋಕ್ ದಿಂಡಾ! - ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ

ದೀದಿ ನಾಡು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಜೋರಾಗಿದ್ದು, ಇದೀಗ ಅನೇಕರು ವಿವಿಧ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಟೀಂ ಇಂಡಿಯಾ ಕ್ರಿಕೆಟರ್ಸ್​ ಕೂಡ ಸೇರಿದ್ದಾರೆ.

Ashok Dinda joins BJP
Ashok Dinda joins BJP
author img

By

Published : Feb 24, 2021, 8:18 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಆಟ ಜೋರಾಗಿದ್ದು, ಅನೇಕರು ವಿವಿಧ ಪಕ್ಷಗಳಿಗೆ ಸೇರಿಕೊಂಡು ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಲು ಮುಂದಾಗ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಮನೋಜ್ ತಿವಾರಿ ಇಂದು ಮಧ್ಯಾಹ್ನ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಸೇರಿಕೊಂಡು ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಲು ಮುಂದಾಗಿದ್ದು, ಇದರ ಬೆನ್ನಲ್ಲೇ ಮತ್ತೋರ್ವ ಮಾಜಿ ಕ್ರಿಕೆಟಿಗ ಬಿಜೆಪಿ ಸೇರಿಕೊಂಡಿದ್ದಾರೆ.

  • West Bengal: Former cricketer Ashok Dinda joins BJP in presence of Union Minister Babul Supriyo and state BJP vice-president Arjun Singh at a public meeting in Kolkata. pic.twitter.com/sAthwrsNDI

    — ANI (@ANI) February 24, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ: ಟಿಎಂಸಿ ಪಕ್ಷ ಸೇರಿದ ಕ್ರಿಕೆಟರ್​ ಮನೋಜ್ ತಿವಾರಿ!

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅಶೋಕ್​ ದಿಂಡಾ ಇದೀಗ ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದು, ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಅರ್ಜುನ್​ ಸಿಂಗ್​ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಅಶೋಕ್ ದಿಂಡಾ ಈಗಾಗಲೇ ಎಲ್ಲ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದು, ಟೀಂ ಇಂಡಿಯಾ ಪರ 13 ಏಕದಿನ ಪಂದ್ಯಗಳಿಂದ 12 ವಿಕೆಟ್ ಹಾಗೂ 9 ಟಿ-20 ಪಂದ್ಯಗಳಿಂದ 17 ವಿಕೆಟ್​ ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲೂ ಮಿಂಚು ಹರಿಸಿರುವ ದಿಂಡಾ 2008-2017ರ ಮಧ್ಯೆ 78 ಪಂದ್ಯಗಳಿಂದ 69 ವಿಕೆಟ್ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.