ನವದೆಹಲಿ: ಮೂರು ದಿನಗಳ ದೆಹಲಿ ಪ್ರವಾಸ ಕೈಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ವೇಳೆ ಕೊವಿಡ್ ವ್ಯಾಕ್ಸಿನ್ ಸೇರಿದಂತೆ ಅನೇಕ ವಿಷಯ ಬಗ್ಗೆ ಚರ್ಚೆ ಮಾಡಿರುವುದಾಗಿ ತಿಳಿದು ಬಂದಿದೆ.
ರಾಜ್ಯದ ಹೆಸರು ಬದಲಾವಣೆಗೆ ದೀದಿ ಮನವಿ
ನವದೆಹಲಿಯ 7 ಲೋಕಕಲ್ಯಾಣ ಮಾರ್ಗ ನಿವಾಸದಲ್ಲಿ ಪ್ರಧಾನಿ ಭೇಟಿ ಮಾಡಿರುವ ಮಮತಾ, ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಕೊರೊನಾ ವ್ಯಾಕ್ಸಿನ್ ಡೋಸ್ ನೀಡಬೇಕು. ರಾಜ್ಯದಲ್ಲಿನ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಬೇಕು. ಇದರ ಜೊತೆಗೆ ರಾಜ್ಯದ ಹೆಸರು ಬದಲಾವಣೆ ಮಾಡುವ ವಿಷಯವಾಗಿಯೂ ಪ್ರಸ್ತಾವನೆ ಸಲ್ಲಿಸಿದ್ದಾರೆ.
-
It was a courtesy meeting with PM today. During the meeting, I raised the issue of COVID & need for more vaccines & medicines in the state. I also raised the pending issue of the change of name of the state. On this issue, he said, "He will see.": West Bengal CM Mamata Banerjee pic.twitter.com/XRXc3mmzJa
— ANI (@ANI) July 27, 2021 " class="align-text-top noRightClick twitterSection" data="
">It was a courtesy meeting with PM today. During the meeting, I raised the issue of COVID & need for more vaccines & medicines in the state. I also raised the pending issue of the change of name of the state. On this issue, he said, "He will see.": West Bengal CM Mamata Banerjee pic.twitter.com/XRXc3mmzJa
— ANI (@ANI) July 27, 2021It was a courtesy meeting with PM today. During the meeting, I raised the issue of COVID & need for more vaccines & medicines in the state. I also raised the pending issue of the change of name of the state. On this issue, he said, "He will see.": West Bengal CM Mamata Banerjee pic.twitter.com/XRXc3mmzJa
— ANI (@ANI) July 27, 2021
ಈಗಾಗಲೇ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಭೇಟಿ ಮಾಡಿರುವ ಮಮತಾ ಬ್ಯಾನರ್ಜಿ, ನಾಳೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಟಿಎಂಸಿ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ಇದರ ಜೊತೆಗೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ.
-
Congress leader Anand Sharma meets West Bengal Chief Minister and TMC leader Mamata Banerjee in Delhi. pic.twitter.com/jYbBD7qwkk
— ANI (@ANI) July 27, 2021 " class="align-text-top noRightClick twitterSection" data="
">Congress leader Anand Sharma meets West Bengal Chief Minister and TMC leader Mamata Banerjee in Delhi. pic.twitter.com/jYbBD7qwkk
— ANI (@ANI) July 27, 2021Congress leader Anand Sharma meets West Bengal Chief Minister and TMC leader Mamata Banerjee in Delhi. pic.twitter.com/jYbBD7qwkk
— ANI (@ANI) July 27, 2021
ವಿಧಾನಸಭೆ ಚುನಾವಣೆ ಬಳಿಕ ಇದು ಮೊದಲ ಭೇಟಿ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ಮಮತಾ ಇದೇ ಮೊದಲ ಬಾರಿಗೆ ಮೋದಿ ಭೇಟಿ ಮಾಡಿದ್ದಾರೆ. ಚುನಾವಣೆ ವೇಳೆ ಅವರ ವಿರುದ್ಧ ದೀದಿ ತೀವ್ರ ವಾಗ್ದಾಳಿ ನಡೆಸಿದ್ದರು. ಜತೆಗೆ ಕೋವಿಡ್ ವಿಚಾರವಾಗಿ ಮೋದಿ ನಡೆಸಿದ್ದ ವಿಡಿಯೋ ಕಾನ್ಪರೆನ್ಸ್‌ಗಳಿಂದಲೂ ಹೊರಗುಳಿದಿದ್ದರು.
ಪೆಗಾಸಸ್ ಗೂಢಚರ್ಯೆ ಬಗ್ಗೆ ಚರ್ಚೆ
ದೇಶದ ವಿವಿಧ ಮುಖಂಡರು ಹಾಗೂ ಪತ್ರಕರ್ತರ ಮೊಬೈಲ್ ಹ್ಯಾಕಿಂಗ್ ವಿಚಾರವಾಗಿ ಕೂಡ ಈ ವೇಳೆ ಚರ್ಚೆ ನಡೆಸಿರುವ ದೀದಿ, ನ್ಯಾಯಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಪ್ರಧಾನಿ ಮೋದಿ ಸರ್ವಪಕ್ಷ ಸಭೆ ಕರೆಯಬೇಕು. ಜತೆಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಮಮತಾ ಒತ್ತಾಯಿಸಿದ್ದಾರೆ.