ETV Bharat / bharat

ಮಹಾಮೈತ್ರಿಯಲ್ಲಿ ಬಿರುಕು? ಕಾಂಗ್ರೆಸ್​, ಸಿಪಿಎಂ ವಿರುದ್ಧ ಬಂಗಾಳ ಸಿಎಂ ಮಮತಾ ಗುಡುಗು - ಬಿಜೆಪಿ ವಿರುದ್ಧ ಮಹಾಮೈತ್ರಿ

ಬಿಜೆಪಿ ವಿರುದ್ಧ ಮಹಾಮೈತ್ರಿ ಏರ್ಪಡುತ್ತಿರುವ ನಡುವೆಯೇ ಟಿಎಂಸಿ ನಾಯಕಿ, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾಂಗ್ರೆಸ್​ ಮತ್ತು ಸಿಪಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದು ಮಹಾಘಟಬಂಧನಕ್ಕೆ ಅಡ್ಡಿ ಉಂಟಾಗಲಿದೆಯಾ? ಎಂಬ ಅನುಮಾನ ಮೂಡಿಸಿದೆ.

ಸಿಎಂ ಮಮತಾ ದೀದಿ ಗುಡುಗು
ಸಿಎಂ ಮಮತಾ ದೀದಿ ಗುಡುಗು
author img

By

Published : Jun 26, 2023, 8:04 PM IST

ಕೋಲ್ಕತ್ತಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕೆಡವಲು ಕಾಂಗ್ರೆಸ್​, ಟಿಎಂಸಿ, ಸಿಪಿಎಂ ಸೇರಿದಂತೆ 17 ಕ್ಕೂ ಹೆಚ್ಚು ಪಕ್ಷಗಳು ಬಿಹಾರದ ಪಾಟ್ನಾದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಮೂರೇ ದಿನಗಳಲ್ಲಿ ಅಪಸ್ವರ ಎದ್ದಿದೆ. ಪಶ್ಚಿಮ ಬಂಗಾಳ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಸಿಪಿಎಂ ವಿರೋಧಿ ಪಕ್ಷವಾದ ಬಿಜೆಪಿ ಜೊತೆಗೆ ಕೈಜೋಡಿಸಿದೆ. ಅದನ್ನು ನಾನು ಮುರಿಯುತ್ತೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

"ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ಕಟ್ಟುವ ಪ್ರಯತ್ನಗಳು ಸಾಗಿವೆ. ಇತ್ತ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಬಿಜೆಪಿಯ ಜೊತೆ ಸಂಘ ಬೆಳೆಸಿವೆ. ರಹಸ್ಯ ಒಪ್ಪಂದ ಮಾಡಿಕೊಂಡಿರುವುದು ಅಪವಿತ್ರವಾಗಿದೆ. ಈ ಮೈತ್ರಿಯನ್ನು ನಾನು ವಿರೋಧಿಸುವೆ" ಎಂದು ಮಮತಾ ಅವರು ಹೇಳಿದ್ದಾರೆ.

ಆರೋಪ ನಿರಾಕರಿಸಿದ ಕಾಂಗ್ರೆಸ್​: ಸಿಎಂ ಮಮತಾ ಬ್ಯಾನರ್ಜಿ ಅವರ ಈ ಆರೋಪವನ್ನು ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ನಿರಾಕರಿಸಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಮಮತಾ ಅವರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಬಿಜೆಪಿ ವಿರುದ್ಧ ಮಮತಾ ಹೋರಾಟ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತು ಎಂದಿದ್ದಾರೆ.

ಬಿಜೆಪಿ ವಿರುದ್ಧ ಹೋರಾಡುವ ಮಾರ್ಗಗಳ ಕುರಿತು ಕಮ್ಯುನಿಸ್ಟರು ಮತ್ತು ಕಾಂಗ್ರೆಸ್‌ಗೆ ಉಪನ್ಯಾಸ ನೀಡಿದ ಕೊನೆಯ ವ್ಯಕ್ತಿ ಮಮತಾ ಎಂದು ಸಿಪಿಎಂ ವ್ಯಂಗ್ಯವಾಡಿದೆ. ಇದಲ್ಲದೇ, ಬಿಜೆಪಿ ನಾಯಕ ರಾಹುಲ್ ಸಿನ್ಹಾ ಕೂಡ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ರಾಜ್ಯ ಸರ್ಕಾರದ ಜನವಿರೋಧಿ ನಿರ್ಧಾರಗಳ ವಿರುದ್ಧ ಬಿಜೆಪಿ ಪಕ್ಷ ಮಾತ್ರ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.

ವಿಪಕ್ಷಗಳ ಸಭೆ ಕೇವಲ ಫೋಟೋಶೂಟ್​: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷದ ಸಭೆ ಕೇವಲ ಫೋಟೋ ಸೆಷನ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವ್ಯಂಗ್ಯವಾಡಿದ್ದರು. ಕುಟುಂಬ, ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣ ಅಲ್ಲಿ ಕಂಡುಬಂತು. ಇದನ್ನು ವಿರೋಧಿಸುವ, ಅಭಿವೃದ್ಧಿ ಬಯಸುವ ಜನರು ಖಂಡಿತಾ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಇಂಗ್ಲೆಂಡ್​ ಪ್ರವಾಸದ ವೇಳೆ ದೇಶದ ಬಗ್ಗೆ ನೀಡಿದ ಹೇಳಿಕೆಗಳನ್ನು ಪ್ರಸ್ತಾಪಿಸಿ ಟೀಕಿಸಿದ್ದರು.

200 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ ದೇಶಕ್ಕೆ ಹೋಗಿ ಪ್ರಜಾಪ್ರಭುತ್ವ ಉಳಿಸಿ ಎಂದು ಕೇಳುವುದು ಅಸಂಬದ್ಧ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತವನ್ನು ನೀವು ಮರೆತಿದ್ದೀರಾ ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದರು. ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರುವ ಮೂಲಕ ಸುಮಾರು 1.88 ಲಕ್ಷ ಜನರನ್ನು ಜೈಲಿಗೆ ತಳ್ಳಿದ್ದರು. ಆಗ ಪ್ರಜಾಪ್ರಭುತ್ವ ಮೌಲ್ಯಗಳ ಉಳಿದಿದ್ದವೇ ಎಂದು ತಪರಾಕಿ ಹಾಕಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ. ಅದು ಅಸುರಕ್ಷಿತ ಎಂಬ ಭಾವನೆ ಇದ್ದರೆ, ವಿಪಕ್ಷಗಳಿಗೆ ಮಾತ್ರ. ನಿಮ್ಮನ್ನು ನೀವು ಮೊದಲು ರಕ್ಷಿಸಿಕೊಳ್ಳಿ ಎಂದು ನಡ್ಡಾ ವಿಪಕ್ಷ ನಾಯಕರನ್ನು ತಿವಿದಿದ್ದರು.

ಇದನ್ನೂ ಓದಿ: MP Elections: ಮಧ್ಯಪ್ರದೇಶದಲ್ಲೂ ಪೇಸಿಎಂ ಪೋಸ್ಟರ್ ವಾರ್; ರಂಗೇರಿದ ರಾಜಕೀಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.