ETV Bharat / bharat

ಸ್ನೇಹಿತರಿಗೆ ಇಲ್ಲದ ಚಿಕನ್​ ಊಟ, ಮದುವೆಯನ್ನೇ ನಿಲ್ಲಿಸಿದ ವರ! - ಎರಡು ಕುಟುಂಬಗಳಲ್ಲಿ ಮದುವೆ ಸಂಭ್ರಮ

ಔತಣಕೂಟದಲ್ಲಿ ಚಿಕನ್​ ಬಡಿಸಲಿಲ್ಲ ಎಂದು ಕೋಪಗೊಂಡು ಮದುವೆಯನ್ನೇ ನಿಲ್ಲಿಸಿದ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

wedding was stopped  groom friends were not served chicken  Marriage cancel in Hyderabad  ಮದುವೆಯನ್ನೇ ನಿಲ್ಲಿಸಿದ ವರ  ಸ್ನೇಹಿತರಿಗೆ ಇಲ್ಲದ ಚಿಕನ್​ ಊಟ  ಚಿಕನ್​ ಬಡಸಲಿಲ್ಲವೆಂದು ಮದುವೆಯನ್ನೇ ನಿಲ್ಲಿಸಿದ ಘಟನೆ  ವರನ ಸ್ನೇಹಿತರಿಗೆ ಕೋಳಿ ಮಾಂಸ ನೀಡದ ಕಾರಣ  ವರದಕ್ಷಿಣೆ ಅಥವಾ ಪ್ರೇಮ ಪ್ರಕರಣ  ಎರಡು ಕುಟುಂಬಗಳಲ್ಲಿ ಮದುವೆ ಸಂಭ್ರಮ  ನಾಳೆ ವಿವಾಹ ಮಾಡಲು ನಿರ್ಧರ
ಸ್ನೇಹಿತರಿಗೆ ಇಲ್ಲದ ಚಿಕನ್​ ಊಟ
author img

By

Published : Nov 29, 2022, 9:55 AM IST

ಹೈದರಾಬಾದ್(ತೆಲಂಗಾಣ): ವರದಕ್ಷಿಣೆ ಅಥವಾ ಪ್ರೇಮ ಪ್ರಕರಣಗಳಿಂದ ಮದುವೆಗಳು ನಿಂತು ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವರನ ಸ್ನೇಹಿತರಿಗೆ ಕೋಳಿ ಮಾಂಸ ನೀಡದ ಕಾರಣಕ್ಕೆ ಮದುವೆ ನಿಂತು ಹೋಗಿದೆ.

ಇಲ್ಲಿನ ಶಹಪುರ ನಗರದಲ್ಲಿ ಸೋಮವಾರ ಮುಂಜಾನೆ ಘಟನೆ ನಡೆಯಿತು. ಕುತ್ಬುಳ್ಳಾಪುರದ ವಧುವಿನ ಜೊತೆ ಜಗದ್ಗಿರಿಗುಟ್ಟದ ರಿಂಗ್‌ಬಸ್ತಿಯ ವರ ಹಸಮಣೆ ಏರುವ ಸಿದ್ಧತೆಯಲ್ಲಿದ್ದರು. ಎರಡು ಕುಟುಂಬಗಳಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಭಾನುವಾರ ರಾತ್ರಿ ಶಹಪುರನಗರದ ಫಂಕ್ಷನ್ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಮದುಮಗಳು ಬಿಹಾರದ ಮಾರ್ವಾಡಿ ಕುಟುಂಬದವರಾಗಿದ್ದು ಅವರು ಸಸ್ಯಾಹಾರಿ ಭಕ್ಷ್ಯಗಳನ್ನು ತಯಾರಿಸಿದ್ದರು.

ಔತಣಕೂಟದ ಕೊನೆಯ ಸಂದರ್ಭದಲ್ಲಿ ಮದುಮಗನ ಸ್ನೇಹಿತರು ಊಟಕ್ಕೆ ಬಂದಿದ್ದಾರೆ. ಚಿಕನ್ ಯಾಕೆ ಹಾಕಲಿಲ್ಲ ಎಂದು ಜಗಳ ಮಾಡಿ ಊಟ ಮಾಡದೇ ಹೊರಟು ಹೋಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಮದುವೆ ನಿಲ್ಲಿಸಲಾಗಿದೆ. ಕೂಡಲೇ ವಧುವಿನ ಮನೆಯವರು ಗಿಡಮೆಟ್ಲ ಸಿಐ ಪವನ್ ಅವರನ್ನು ಭೇಟಿ ಮಾಡಿ ವಿಷಯ ವಿವರಿಸಿದರು. ಅವರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ಮಾಡಿದ್ದಾರೆ. ಬಳಿಕ ವಧು-ವರರ ಕುಟುಂಬಗಳು ಇದೇ ತಿಂಗಳ 30ರಂದು ಅಂದ್ರೆ ನಾಳೆ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ವಿಕಲಚೇತನ ಮಗಳ ಮೇಲೆ ರೇಪ್​.. ಕ್ರೂರಿ ತಂದೆಗೆ 107 ವರ್ಷ ಕಠಿಣ ಜೈಲು ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.