ಬ್ರಿಟಿಷ್ ವಸಾಹತುಶಾಹಿ ಅಂದ್ರೆನೇ ದೌರ್ಜನ್ಯ, ದಬ್ಬಾಳಿಕೆ ಮತ್ತು ಹಿಂಸಾಚಾರ. ಅಂತೆಯೇ ಇಂಗ್ಲೀಷರ್ ವಿರುದ್ಧ ದೇಶದಲ್ಲಿ ಆಗಗ ದಂಗೆಗಳು, ಹೋರಾಟಗಳು ಸಾಮಾನ್ಯವಾಗಿದ್ದವು. ಆದ್ರೆ ಅವೆಲ್ಲವನ್ನೂ ಬ್ರಿಟಿಷರ್ ಗನ್ಗಳು ಸೋಲಿಸುತ್ತಿದ್ದವು. ಮೊದಲನೇ ಸ್ವಾತಂತ್ರ್ಯ ಸಂಗ್ರಾಮ ಸೇರಿ ಹಲವು ದಂಗೆಗಳನ್ನು ಹತ್ತಿಕ್ಕಿದ್ದ ಬ್ರಿಟಿಷರಿಗೆ ಜಾರ್ಖಂಡ್ ಬುಡಕಟ್ಟು ಜನರ ಬಂಡಾಯ ಸೋಲಿಸಲು ಆಗಲಿಲ್ಲ. ಇಂಗ್ಲಿಷರ ಬಳಿ ಗನ್, ಕ್ಯಾನಾನ್ ಇದ್ದರೂ ಕೂಡ ಬುಡಕಟ್ಟು ಜನ ತಮ್ಮ ಬಳಿ ಇದ್ದ ಬಿಲ್ಲು, ಬಾಣದಂತಹ ಅಸ್ತ್ರಗಳನ್ನು ಉಪಯೋಗಿಸುವುದರಲ್ಲಿ ಪರಿಣತರು. ಜೊತೆಗೆ ಇವರ ಗೆರಿಲ್ಲಾ ಯುದ್ಧದ ಕಲೆ ನೋಡಿ ಆಂಗ್ಲರು ತಮ್ಮ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟಿದ್ದರು. ಆ ಕಾಲದಲ್ಲೂ ವಿಭಿನ್ನವಾಗಿ ಹೋರಾಡಿದ ಜಾರ್ಖಂಡ್ ಬುಡಕಟ್ಟು ಜನರು, ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು ಎಂಬುದು ಸತ್ಯ.
ಬುಡಕಟ್ಟು ಜನಾಂಗದವರಿಗೆ, ಬಿಲ್ಲು-ಬಾಣದಂತಹ ಆಯುಧಗಳು ನಂಬಿಕೆಯ ವಿಷಯ. ಏಕೆಂದರೆ ಈ ಆಯುಧಗಳು ಅವರಿಗೆ ವಿಶೇಷ ಶಕ್ತಿ ನೀಡುತ್ತವಂತೆ. ಜೊತೆಗೆ ತಮ್ಮ ರಕ್ಷಿಸಿಕೊಳ್ಳಲು ಚಿಕ್ಕ ವಯಸ್ಸಿನಿಂದಲೇ ಬಿಲ್ಲು, ಬಾಣ, ಈಟಿ, ಕೋಲು, ತುಪ್ಪಳ ಮತ್ತು ಅನೇಕ ಸಾಂಪ್ರದಾಯಿಕ ಆಯುಧಗಳ ಬಳಕೆಯಲ್ಲಿ ಮತ್ತು ಯುದ್ಧ ಕಲೆಗಳಲ್ಲಿ ಪರಿಣತರಾಗಿದ್ದರು.
ಬುಡಕಟ್ಟು ಜನರು ತಮ್ಮ ಆಯುಧಗಳನ್ನು ಇನ್ನಷ್ಟು ಡೆಡ್ಲಿ ಮಾಡಿಕೊಳ್ಳಲು, ವಿಶೇಷ ಗಿಡಮೂಲಿಕೆಗಳೊಂದಿಗೆ ತಯಾರಿಸಿದ ಲೇಪನ ಮಾಡುತ್ತಿದ್ದರು. ಈ ಲೇಪನ ಶತ್ರುಗಳಿಗೆ ಮಾರಕವಂತೆ.
ಗೆರಿಲ್ಲಾ ಪರಿಣತಿ: ಬುಡಕಟ್ಟು ಜನರ ಪರಣತಿಗಳಲ್ಲಿ ಇದು ಒಂದು. ಅರಣ್ಯದಲ್ಲಿ ಅಡಗಿಸಿಟ್ಟುಕೊಂಡು ಶತ್ರುಗಳ ಬಂದ್ಮೇಲೆ ಒಟ್ಟಿಗೆ ಅಟ್ಯಾಕ್ ಮಾಡುವುದು ಇವರ ಸ್ಟ್ರೆಟರ್ಜಿ. ಇನ್ನು ಈ ವೇಳೆ ಯಾರಾದ್ರೂ ಗಾಯಗೊಂಡರೂ ತಾವೇ ಗಿಡಮೂಲಿಕೆಗಳ ಔಷಧಿ ಮಾಡಿ ಕೊಡುತ್ತಿದ್ದರು. ಇದು ಬ್ರಿಟಿಷರಿಗೆ ಭಯ ಮೂಡಿಸಿತ್ತು.
ಈ ಸಮುದಾಯದವರು ವಾಸಿಸುವ ಸ್ಥಳದಲ್ಲಿ ಬಿದಿರು, ಕಬ್ಬಿಣದಂತಹ ವಸ್ತುಗಳು ಹೇರಳವಾಗಿ ಸಿಗುವುದರಿಂದ ಅದರಿಂದಲೇ ಆಯುಧ ಮಾಡಿ, ಬಳಸುವ ಕಲೆ ಕರಗತವಾಗಿರುತ್ತದೆ.
ಸ್ವಾತಂತ್ರ್ಯ ಹೋರಾಟದ ಮೊದಲ ಹುತಾತ್ಮರಾದ ಜಬ್ರಾ ಪಹಾರಿಯಾದಿಂದ ಸಿಡೋ ಕನ್ಹೋ ಮತ್ತು ನೀಲಾಬಂರ್, ಪೀತಾಂಬರ್ದಿಂದ ಬಿರ್ಸಾ ಮುಂಡಾ ಇಂತಹ ಆಯುಧಗಳನ್ನು ಬಳಸುವುದರಲ್ಲಿ ಎತ್ತಿದ ಕೈ. ಈ ಸಮುದಾಯ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲ, ದೇವರಂತೆ ತಿಳಿದುಕೊಂಡಿರುವ ಜಲ-ನೆಲ-ಕಾಡನ್ನು ಉಳಿಸಿಕೊಳ್ಳಲು ಹೋರಾಡಿದ್ದಾರೆ.