ETV Bharat / bharat

ಯೋಗ ಜನಪ್ರಿಯಗೊಳಿಸಿದ ನಮ್ಮ ಕೇಂದ್ರ ಸರ್ಕಾರ ಸೇರಿ ಎಲ್ಲರ ಕೊಡುಗೆಯನ್ನೂ ನಾವು ಗುರುತಿಸಬೇಕು: ಶಶಿ ತರೂರ್ - etv bharath kannada news

ನಮ್ಮ ಕೇಂದ್ರ ಸರ್ಕಾರ ಸೇರಿದಂತೆ ಯೋಗವನ್ನು ಜನಪ್ರಿಯಗೊಳಿಸಿದ ಎಲ್ಲರನ್ನೂ ನಾವು ಗುರುತಿಸಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.

ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಶಶಿ ತರೂರ್
ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಶಶಿ ತರೂರ್
author img

By

Published : Jun 21, 2023, 10:02 PM IST

ನವದೆಹಲಿ : ಭಾರತ ಸರ್ಕಾರ ಸೇರಿದಂತೆ ಯೋಗವನ್ನು ಪುನರುಜ್ಜೀವನಗೊಳಿಸಿ, ಜನಪ್ರಿಯಗೊಳಿಸಿದ ಎಲ್ಲರನ್ನೂ ಸಹ ನಾವು ಗುರುತಿಸಬೇಕಿದೆ ಎಂದು ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಬುಧವಾರ ಹೇಳಿದ್ದಾರೆ. ವಿಶ್ವಸಂಸ್ಥೆಯ ಮೂಲಕ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೇರಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ, 'ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಅದನ್ನು ರಾಷ್ಟ್ರೀಯ ನೀತಿಯ ಭಾಗವನ್ನಾಗಿ ಮಾಡಿದ ಪಂಡಿತ್​ ಜವಾಹರಲಾಲ್​ ನೆಹರು ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ' ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು. 'ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದಲ್ಲಿ ಪ್ರಾಚೀನ ಕಲೆ ಮತ್ತು ತತ್ವಶಾಸ್ತ್ರದ ಮಹತ್ವವನ್ನು ನಾವು ಪ್ರಶಂಸಿಸೋಣ ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳೋಣ' ಎಂದು ಪಕ್ಷ ಹೇಳಿದೆ. ಇದರೊಂದಿಗೆ, ನೆಹರೂ ಅವರು ಯೋಗ ಮಾಡುವ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿತ್ತು.

ಕಾಂಗ್ರೆಸ್ ಟ್ವೀಟ್ ಟ್ಯಾಗ್ ಮಾಡಿದ ತರೂರ್, 'ನಮ್ಮ ಕೇಂದ್ರ ಸರ್ಕಾರ, @PMOIndia & @MEAIindia ಸೇರಿದಂತೆ ಯೋಗವನ್ನು ಪುನರುಜ್ಜೀವನಗೊಳಿಸಿದ ಮತ್ತು ಜನಪ್ರಿಯಗೊಳಿಸಿದ ಎಲ್ಲರನ್ನೂ ನಾವು ಒಪ್ಪಿಕೊಳ್ಳಬೇಕು' ಎಂದು ಬರೆದಿದ್ದಾರೆ.

'ನಾನು ದಶಕಗಳಿಂದ ವಾದಿಸಿದಂತೆ ಯೋಗವು ಪ್ರಪಂಚಾದ್ಯಂತ ನಮ್ಮ ಸಾಫ್ಟ್‌ ಪವರ್‌ನ ಪ್ರಮುಖ ಭಾಗವಾಗಿದೆ. ಅದನ್ನು ವಿಶ್ವ ಗುರುತಿಸುವುದನ್ನು ನೋಡುವುದೇ ಅದ್ಭುತ' ಎಂದು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನವು ಯೋಗಾಭ್ಯಾಸದ ಅನೇಕ ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವ ಗುರಿ ಹೊಂದಿದೆ. ಡಿಸೆಂಬರ್ 2014ರಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತರಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದೆ.

ಇದನ್ನೂ ಓದಿ: Video: ಉಪರಾಷ್ಟ್ರಪತಿ ಧನಕರ್ ಸೇರಿ ಗಣ್ಯರಿಂದ ಯೋಗ ದಿನ ಆಚರಣೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.