ನವದೆಹಲಿ : ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ಮುಖಂಡ ಕನ್ಹಯ್ಯಕುಮಾರ್ ಹಾಗೂ ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷ ಸೇರ್ಪಡೆಗೊಳ್ಳುತ್ತಿದ್ದಂತೆ ಮಾತನಾಡಿರುವ ಕೆ ಸಿ ವೇಣುಗೋಪಾಲ್, ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದನ್ನ ಸ್ವಾಗತಿಸುವುದು ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ಕನ್ಹಯ್ಯ ಕುಮಾರ್ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕೇತ ಎಂದಿದ್ದಾರೆ.
ವಿದ್ಯಾರ್ಥಿ ನಾಯಕನಾಗಿ ಮೂಲಭೂತವಾದದ ವಿರುದ್ಧ ಅವರು ಹೋರಾಡಿದ ರೀತಿ ದೇಶಕ್ಕೆ ಸಾಕ್ಷಿಯಾಗಿದೆ ಎಂದರು. ಈ ರೀತಿಯ ಯುವ ವ್ಯಕ್ತಿತ್ವ ಕಾಂಗ್ರೆಸ್ ಪಕ್ಷ ಸೇರುತ್ತಿರುವುದು ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದು, ನಾವು ಅವರಿಗೆ ಕೃತಜ್ಞರಾಗಿದ್ದೇವೆ ಎಂದರು.
-
Kanhaiya Kumar is a symbol of the fight for freedom of expression in this country. He fought against fundamentalism as a student leader. The joining of kind of dynamic personality will fill the entire cadre of Congress with enthusiasm: Congress leader KC Venugopal in Delhi pic.twitter.com/RQWyTrOwZk
— ANI (@ANI) September 28, 2021 " class="align-text-top noRightClick twitterSection" data="
">Kanhaiya Kumar is a symbol of the fight for freedom of expression in this country. He fought against fundamentalism as a student leader. The joining of kind of dynamic personality will fill the entire cadre of Congress with enthusiasm: Congress leader KC Venugopal in Delhi pic.twitter.com/RQWyTrOwZk
— ANI (@ANI) September 28, 2021Kanhaiya Kumar is a symbol of the fight for freedom of expression in this country. He fought against fundamentalism as a student leader. The joining of kind of dynamic personality will fill the entire cadre of Congress with enthusiasm: Congress leader KC Venugopal in Delhi pic.twitter.com/RQWyTrOwZk
— ANI (@ANI) September 28, 2021
ಇಂದು ನಮ್ಮೆಲ್ಲರಿಗೂ ಬಹಳ ವಿಶೇಷ ದಿನ. ಈ ದಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ ಎಂದರು. ಈ ದೇಶ ಆಳುತ್ತಿರುವ ಫ್ಯಾಶಿಸ್ಟ್ ಶಕ್ತಿಗಳನ್ನ ಸೋಲಿಸಲು ಯುವ ನಾಯಕರಾದ ಕನ್ಹಯ್ಯ ಕುಮಾರ್ ಹಾಗೂ ಮೇವಾನಿ ಜತೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿರಿ: ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡುತ್ತಿದ್ದಂತೆ ಈ ರೀತಿ ಕಾಲೆಳೆದ ಕ್ಯಾ. ಅಮರೀಂದರ್ ಸಿಂಗ್!
ಕನ್ಹಯ್ಯ ಕುಮಾರ್ ಸೇರ್ಪಡೆಗೆ ಅಪಸ್ವರ?
-
As Speculation abounds about certain Communist leaders joining @INCIndia it perhaps may be instructive to revisit a 1973 book ‘ Communists in Congress’ Kumarmanglam Thesis. The more things change the more they perhaps remain the same.
— Manish Tewari (@ManishTewari) September 28, 2021 " class="align-text-top noRightClick twitterSection" data="
I re-read it todayhttps://t.co/iMSK8RqEiA
">As Speculation abounds about certain Communist leaders joining @INCIndia it perhaps may be instructive to revisit a 1973 book ‘ Communists in Congress’ Kumarmanglam Thesis. The more things change the more they perhaps remain the same.
— Manish Tewari (@ManishTewari) September 28, 2021
I re-read it todayhttps://t.co/iMSK8RqEiAAs Speculation abounds about certain Communist leaders joining @INCIndia it perhaps may be instructive to revisit a 1973 book ‘ Communists in Congress’ Kumarmanglam Thesis. The more things change the more they perhaps remain the same.
— Manish Tewari (@ManishTewari) September 28, 2021
I re-read it todayhttps://t.co/iMSK8RqEiA
ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಂತೆ ಪಕ್ಷದಲ್ಲಿ ಅಪಸ್ವರ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮನೀಷ್ ತಿವಾರಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಟ್ವೀಟ್ ಮಾಡಿರುವ ಅವರು, 1973ರಲ್ಲಿ ಮುದ್ರಣಗೊಂಡ 'ಕಮ್ಯುನಿಸ್ಟ್ ಇನ್ ಕಾಂಗ್ರೆಸ್' ಪುಸ್ತಕವನ್ನು ಮತ್ತೊಮ್ಮೆ ಓದುವ ಸಮಯ ಬಂದಿದೆ ಎಂದಿದ್ದಾರೆ.