ಜಮ್ಮು: ನಾವು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ಪ್ರಯತ್ನಿಸಿದೆವು. ಬಳಿಕ ಆ ವಿಚಾರವನ್ನು ಕೈ ಬಿಟ್ಟೆವು ಅಂತಾ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ನಾವು ಮೊದಲಿಗೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೆವು. ಆದರೆ, ಅದನ್ನು ಮುಂದುವರಿಸಲಿಲ್ಲ. ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಜನರು ಕ್ಷಮಿಸಬೇಕು. ಜಮ್ಮು-ಕಾಶ್ಮೀರದ ಸಮಸ್ಯೆ ಬಗೆಹರಿಸುವ ಸಲುವಾಗಿ ನಾವು ಈ ಹಿಂದೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೆವು ಅಷ್ಟೇ ಎಂದು ಮುಫ್ತಿ ಸ್ಪಷ್ಟನೆ ನೀಡಿದ್ದಾರೆ.
ಪಿಡಿಪಿ ಆಡಳಿತದ ಅವಧಿಯಲ್ಲಿ ಗಡಿಯಲ್ಲಿ ಶಾಂತಿ ನೆಲೆಸಿತ್ತು. ರಜೌರಿ, ಪೂಂಚ್ ಜಿಲ್ಲೆಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಿದೆವು. ಇದೀಗ 370 ನೇ ವಿಧಿಯನ್ನು ರಾಜ್ಯದಲ್ಲಿ ಪುನರ್ ಸ್ಥಾಪಿಸಲು ಕೈ ಜೋಡಿಸಿ ಎಂದು ಕಾರ್ಯಕರ್ತರಿಗೆ ಮೆಹಬೂಬಾ ಮುಫ್ತಿ ಕರೆ ನೀಡಿದರು.
ಇದನ್ನೂ ಓದಿ:ಎರಡನೇ 'ರಾಷ್ಟ್ರೀಯ ಲೋಕ ಅದಾಲತ್'ನಲ್ಲಿ 11.42 ಲಕ್ಷ ಪ್ರಕರಣ ವಿಲೇವಾರಿ : ನಲ್ಸಾ
ಮೂರು ದಿನಗಳ ಕಾಲ ಜಮ್ಮು ಪ್ರವಾಸದಲ್ಲಿರುವ ಮುಫ್ತಿ ಹಲವಾರು ಪಿಡಿಪಿ ನಿಯೋಗಗಳನ್ನು ಭೇಟಿ ಮಾಡಿದರು.