ETV Bharat / bharat

ಸುಪ್ರೀಂ ತಪರಾಕಿ ಬಳಿಕ ಎಚ್ಚೆತ್ತ ಪೊಲೀಸರು: ನೂಪುರ್​​​ ಶರ್ಮಾಗೆ ನೋಟಿಸ್​ ನೀಡಿ, ಪ್ರಶ್ನಿಸಿದ್ದೇವೆ ಎಂದು ಸ್ಪಷ್ಟನೆ - ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆ ವಿಚಾರ

ನಾವು ನೂಪುರ್ ಶರ್ಮಾ ಅವರಿಗೆ ನೋಟಿಸ್ ನೀಡಿದ್ದೇವೆ. ಪ್ರಕರಣದ ಬಗ್ಗೆ ಅವರನ್ನು ಪ್ರಶ್ನೆ ಮಾಡಿದ್ದೇವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ನಿನ್ನೆ ಸುಪ್ರೀಂಕೋರ್ಟ್​ ದೆಹಲಿ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಸುಪ್ರೀಂ ತಪರಾಕಿ ಬಳಿಕ ಎಚ್ಚೆತ್ತ ಪೊಲೀಸರು:ನೂಪುರ್​​​ ಶರ್ಮಾಗೆ ನೋಟಿಸ್​ ನೀಡಿ, ಪ್ರಶ್ನಿಸಿದ್ದೇವೆ ಎಂದು ಸ್ಪಷ್ಟನೆ
We issued notice to Nupur Sharma, she was questioned: Delhi Police after SC's rebuke
author img

By

Published : Jul 2, 2022, 9:37 AM IST

ನವದೆಹಲಿ: ವಿವಾದತ್ಮಕ ಹೇಳಿಕೆ ಬಳಿಕ ನೂಪುರ್​ ಶರ್ಮಾ ಅವರನ್ನು ಜೂನ್ 18 ರಂದು ಅಮಾನತುಗೊಳಿಸಲಾಗಿದೆ. ಅಷ್ಟೇ ಅಲ್ಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಅದೇ ದಿನ ಅವರನ್ನು ಪ್ರಶ್ನಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರವಾದಿ ವಿರುದ್ಧದ ವಿವಾದಾತ್ಮಕ ಹೇಳಿಕೆಗಳಿಗಾಗಿ ಸುಪ್ರೀಂಕೋರ್ಟ್ ದೆಹಲಿ ಪೊಲೀಸರುನ್ನು ತರಾಟೆಗೆ ತೆಗೆದುಕೊಂಡ ಬಳಿಕ ಈ ಸ್ಪಷ್ಟನೆ ಹೊರ ಬಂದಿದೆ.

ಟಿವಿ ಚರ್ಚೆಯೊಂದರ ಸಂದರ್ಭದಲ್ಲಿ ಪ್ರವಾದಿ ಬಗ್ಗೆ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಬಳಿಕ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರ ವಿವಾದಾತ್ಮಕ ಹೇಳಿಕೆ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಇದರಿಂದ ತಕ್ಷಣ ಎಚ್ಚೆತ್ತುಕೊಂಡ ಬಿಜೆಪಿ, ನೂಪುರ್​ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.

ಈ ಬಗ್ಗೆ ಮಾತನಾಡಿದ ಗುಪ್ತಚರ ವಿಭಾಗದ ಉಪ ಪೊಲೀಸ್ ಆಯುಕ್ತ ಕೆಪಿಎಸ್ ಮಲ್ಹೋತ್ರಾ ಶುಕ್ರವಾರ ಸೆಕ್ಷನ್ 41 ಎ ಸಿಆರ್‌ಪಿಸಿ ಅಡಿ ಜೂನ್ 18 ರಂದು ಶರ್ಮಾಗೆ ನೋಟಿಸ್​ ನೀಡಲಾಗಿದೆ ಎಂದು ಹೇಳಿದರು. ಮತ್ತು ಈ ಬಗ್ಗೆ ಅವರಿಂದ ಅದೇ ದಿನ ಹೇಳಿಕೆ ದಾಖಲಿಕೊಳ್ಳಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶರ್ಮಾ ಅವರ ವಿವಾದಾತ್ಮಕ ಹೇಳಿಕೆಗೆ ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ನಿಮ್ಮ ಸಡಿಲವಾದ ನಾಲಿಗೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ. ಅಷ್ಟೇ ಅಲ್ಲ ದೇಶದಲ್ಲಿ ಈಗ ಆಗುತ್ತಿರುವ ಘಟನೆಗಳಿಗೆ ನೂಪುರ್ ಶರ್ಮಾ ಅವರೇ ಹೊಣೆಗಾರರು ಎಂದು ನ್ಯಾಯಮೂರ್ತಿಗಳು ಹೇಳಿದ್ದರು. ಅಷ್ಟೇ ಅಲ್ಲ ಈ ಹೇಳಿಕೆಗಳ ತಮ್ಮ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾವಣೆ ಮಾಡುವಂತೆ ಶರ್ಮಾ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್​​ ವಜಾ ಮಾಡಿತ್ತು.

ಇದನ್ನು ಓದಿ:ಭಾಗ್ಯನಗರಿಯಲ್ಲಿ ಇಂದಿನಿಂದ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.