ಕೋಲ್ಕತ್ತಾ: ಗಣರಾಜ್ಯೋತ್ಸವ ದಿನ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ನಡೆದಿದ್ದು, ವ್ಯಾಪಕ ಟೀಕೆಗೊಳಗಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ವಿವಿಧ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಸಹ ಮಾಡುತ್ತಿವೆ.
ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾವು ರೈತರೊಂದಿಗಿದ್ದೇವೆ. ಕೇಂದ್ರ ಸರ್ಕಾರ ತಕ್ಷಣವೇ ಈ ಕಾನೂನು ಹಿಂತೆಗೆದುಕೊಳ್ಳುವಂತೆ ನಾನು ಒತ್ತಾಯಿಸುತ್ತೇವೆ ಎಂದಿರುವ ಅವರು, ಬಲವಂತವಾಗಿ ಈ ಕಾಯ್ದೆ ಅಂಗೀಕರಿಸಲಾಗಿದೆ ಎಂದಿದ್ದಾರೆ. ಮೋದಿ ಸರ್ಕಾರ ದೆಹಲಿ ಪರಿಸ್ಥಿತಿಯನ್ನ ಅತಿ ಕೆಟ್ಟದಾಗಿ ನಿಭಾಯಿಸಿದ್ದು, ಅಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿ ಮುಖ್ಯ ಕಾರಣವಾಗಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಳೆಯಿಂದ ಕೇಂದ್ರ ಬಜೆಟ್ ಅಧಿವೇಶನ: ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು 16 ಪಕ್ಷಗಳಿಂದ ನಿರ್ಧಾರ
ಮೊದಲು ನೀವು ದೆಹಲಿ ನಿಭಾಯಿಸಿ, ತದನಂತರ ಬಂಗಾಳದ ಬಗ್ಗೆ ಯೋಚನೆ ಮಾಡಿ ಎಂದು ಚಾಟಿ ಬೀಸಿದ್ದಾರೆ. ದೆಹಲಿಯಲ್ಲಿ ನಡೆದ ಹಿಂಸಾಚಾರ ನಿಭಾಯಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಒಂದು ವೇಳೆ ಬಂಗಾಳದಲ್ಲಿ ಅದು ನಡೆದಿದ್ದರೆ ಅಮಿತ್ ಭಯ್ಯಾ "ಕ್ಯಾ ಹುವಾ?" ಎಂದು ಪ್ರಶ್ನೆ ಮಾಡ್ತಿದ್ದರು ಎಂದಿದ್ದಾರೆ. ಈ ಹಿಂಸಾಚಾರವನ್ನ ನಾವು ಬಲವಾಗಿ ಖಂಡಿಸುತ್ತೇವೆ. ಒಂದು ನೀವು ಈ ಕಾನೂನು ಹಿಂಪಡೆದುಕೊಳ್ಳಿ, ಇಲ್ಲವೇ ಕುರ್ಚಿ ಬಿಡಿ ಎಂದು ಹೇಳಿದ್ದಾರೆ.