ETV Bharat / bharat

ಕಚ್ಚಾ ತೈಲ ಆಮದಿನ ವೆಚ್ಚ ಕಡಿತಕ್ಕೆ ದೇಶದಲ್ಲಿ LNG ಬಳಕೆ: ಇದರ ಅನುಕೂಲವೇನು? ಇಲ್ಲಿದೆ ವಿವರ.. - Liquefied Natural Gas (LNG) | Department of Energy

ಪೆಟ್ರೋಲ್ ಆಮದು ಮಾಡಿಕೊಳ್ಳುವ ಬದಲು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಅಗ್ಗದ ದರದಲ್ಲಿ ಜೈವಿಕ ಅನಿಲ ಬಳಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಗಡ್ಕರಿ
ಗಡ್ಕರಿ
author img

By

Published : Jul 12, 2021, 3:22 PM IST

ನಾಗ್ಪುರ: ಎಲ್‌ಎನ್‌ಜಿ(ಲಿಕ್ವಿಫೈಡ್‌ ನ್ಯಾಚುರಲ್ ಗ್ಯಾಸ್)ಯನ್ನು ಪೆಟ್ರೋಲ್ ಮತ್ತು ಡೀಸೆಲ್‌ಗೆ ಆಯ್ಕೆಯಾಗಿ ಬಳಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದ ಮೊದಲ ಎಲ್‌ಎನ್‌ಜಿ ಸ್ಥಾವರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೈವಿಕ ಅನಿಲ ಘಟಕ
ಜೈವಿಕ ಅನಿಲ ಘಟಕ

ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಸುಮಾರು 8 ಕೋಟಿ ಕೊರತೆಯ ವೆಚ್ಚವನ್ನು ನಾವು ಮಾಡಬೇಕಿದೆ. ಇದು ಆರ್ಥಿಕತೆಯ ಮೇಲೆ ದೊಡ್ಡ ಹೊರೆಯಾಗಿದೆ. ಜೊತೆಗೆ ಮಾಲಿನ್ಯವನ್ನೂ ಹೆಚ್ಚಿಸುತ್ತದೆ. ಆದರೆ, ಎಲ್ಎನ್‌ಜಿ ಬಳಕೆ ಮಾಡುವ ಮೂಲಕ ನಾವು ವೆಚ್ಚವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಒಂದು ಯೋಜನೆಯನ್ನು ತರಲು ನಾವು ಯೋಜಿಸುತ್ತಿದ್ದೇವೆ ಎಂದು ವಿವರಿಸಿದರು.

ಪೆಟ್ರೋಲ್ ಆಮದು ಮಾಡಿಕೊಳ್ಳುವ ಬದಲು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಅಗ್ಗದ ದರದಲ್ಲಿ ಜೈವಿಕ ಅನಿಲವನ್ನು ಬಳಸುವ ಮೂಲಕ ಮಾಲಿನ್ಯ ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇದೇ ವೇಳೆ ಗಡ್ಕರಿ ಹೇಳಿದರು.

ಜೈವಿಕ ಅನಿಲ ಘಟಕ
ಜೈವಿಕ ಅನಿಲ ಘಟಕ (ಸಂಗ್ರಹ ಚಿತ್ರ)

ಬೈದ್ಯನಾಥ್ ಕಂಪನಿಯು ದೇಶದ ಮೊದಲ ಎಲ್‌ಎನ್‌ಜಿ ನಿಲ್ದಾಣವನ್ನು ಉಮ್ರೆಡ್ ರಸ್ತೆಯ ವಿಹಿರ್‌ಗಾಂವ್ ಪ್ರದೇಶದಲ್ಲಿ ಪ್ರಾರಂಭಿಸಿದೆ. ಇದು ಭವಿಷ್ಯದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದೆ.

ಜೈವಿಕ ಅನಿಲ ಘಟಕ
ಜೈವಿಕ ಅನಿಲ ಘಟಕ(ಸಂಗ್ರಹ ಚಿತ್ರ)

ಎಲ್‌ಎನ್‌ಜಿ ಎಂದರೇನು? ಇದರ ಅನುಕೂಲಗಳೇನು?

ಎಲ್‌ಎನ್‌ಜಿ ಶುದ್ಧ ಇಂಧನವಾಗಿದ್ದು ಇದನ್ನು ಮೈನಸ್ 260 ಡಿಗ್ರಿಗಳಲ್ಲಿ ವಾಹನಗಳ ಇಂಧನ ಟ್ಯಾಂಕ್‌ನಲ್ಲಿ ಇರಿಸುವ ಮೂಲಕ ಬಳಸಲಾಗುತ್ತದೆ. ಎಲ್‌ಎನ್‌ಜಿಯನ್ನು ಅನಿಲ ಸ್ಥಿತಿಯಾಗಿ ಬಳಸಿಕೊಂಡು ಅದನ್ನು ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಬಿಸಿ, ಅಡುಗೆ, ವಿದ್ಯುತ್ ಉತ್ಪಾದನೆ ಮತ್ತು ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವ ವೈವಿಧ್ಯಮಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಈಗ ಹೆವಿ ಡ್ಯೂಟಿ ಮತ್ತು ಇತರ ವಾಹನಗಳಿಗೆ ಇಂಧನವಾಗಿಯೂ ಬಳಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.