ನವದೆಹಲಿ: ಎರಡನೇ ಹಂತದ ಕೋವಿಡ್ ಅಲೆ ವಿಚಾರವಾಗಿ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದ್ದು, ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂಬ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಲವ್ ಅಗರವಾಲ್, ದೇಶದಲ್ಲಿ ಕಂಡು ಬರುತ್ತಿರುವ ಶೇ. 80ರಷ್ಟು ಕೊರೊನಾ ಕೇಸ್ 90 ಜಿಲ್ಲೆಗಳಿಂದ ಎಂದಿದ್ದಾರೆ. ಜತೆಗೆ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ದೇಶದ ಒಟ್ಟು ಕೋವಿಡ್ ಸಂಖ್ಯೆಯ ಶೇ. 50ರಷ್ಟು ಪ್ರಕರಣಗಳಿವೆ. ಕೇರಳದ 14 ಜಿಲ್ಲೆ, ಮಹಾರಾಷ್ಟ್ರದ 15 ಹಾಗೂ ಕರ್ನಾಟಕದ 10 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿವೆ ಎಂದಿದ್ದಾರೆ.
-
We are still dealing with the second wave of COVID19. We need to continue the display of COVID19 appropriate behaviour: Ministry of Health pic.twitter.com/eZdOZeHcJZ
— ANI (@ANI) July 9, 2021 " class="align-text-top noRightClick twitterSection" data="
">We are still dealing with the second wave of COVID19. We need to continue the display of COVID19 appropriate behaviour: Ministry of Health pic.twitter.com/eZdOZeHcJZ
— ANI (@ANI) July 9, 2021We are still dealing with the second wave of COVID19. We need to continue the display of COVID19 appropriate behaviour: Ministry of Health pic.twitter.com/eZdOZeHcJZ
— ANI (@ANI) July 9, 2021
ಇದನ್ನೂ ಓದಿರಿ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತಾರೆ, ಇಲ್ಲೊಬ್ಬ ಸ್ನೇಹಿತನನ್ನೇ ಕೊಂದುಬಿಟ್ಟ!
ಕೋವಿಡ್ ರಿಕವರಿ ರೇಟ್ ಇದೀಗ ದೇಶದಲ್ಲಿ ಶೇ. 97.2ರಷ್ಟಿದೆ. ಜನರು ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಕಡಿಮೆಯಾಗುತ್ತಿದ್ದಂತೆ ಪ್ರವಾಸಿ ಸ್ಥಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಒಟ್ಟಿಗೆ ಸೇರಲು ಶುರು ಮಾಡಿರುವುದಕ್ಕೆ ಡಾ.ವಿ.ಕೆ. ಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸೋಂ ಹಾಗೂ ಕರ್ನಾಟಕದಲ್ಲೂ ಕೊರೊನಾ ವೈರಸ್ ಹಾವಳಿ ಇದ್ದು, ಜನರು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ತಿಳಿಸಿದೆ.