ಮುಂಬೈ(ಮಹಾರಾಷ್ಟ್ರ): ಮೂರು ದಿನಗಳ ಮಹಾರಾಷ್ಟ್ರ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ವಿವಿಧ ಪಕ್ಷದ ನಾಯಕರ ಭೇಟಿ ಮಾಡಿ ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮಜೀದ್ ಮೆಮನ್, ಖ್ಯಾತ ಸಾಹಿತಿ ಜಾವೇದ್ ಅಖ್ತರ್,ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ನಿರ್ದೇಶಕ ಮಹೇಶ್ ಭಟ್, ಮಟಿ ರಿಚಾ ಚಡ್ಡಾ, ಸ್ವರಾ ಭಾಸ್ಕರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
-
Watch: “We are ready for a female prime minister…the time is right for some Goddess energy” @RichaChadha tells #MamataBanerjee during the interactive session in #Mumbai. She explains why she wants “BJP Mukt Bharat” pic.twitter.com/aAhUdiTfMY
— Tamal Saha (@Tamal0401) December 1, 2021 " class="align-text-top noRightClick twitterSection" data="
">Watch: “We are ready for a female prime minister…the time is right for some Goddess energy” @RichaChadha tells #MamataBanerjee during the interactive session in #Mumbai. She explains why she wants “BJP Mukt Bharat” pic.twitter.com/aAhUdiTfMY
— Tamal Saha (@Tamal0401) December 1, 2021Watch: “We are ready for a female prime minister…the time is right for some Goddess energy” @RichaChadha tells #MamataBanerjee during the interactive session in #Mumbai. She explains why she wants “BJP Mukt Bharat” pic.twitter.com/aAhUdiTfMY
— Tamal Saha (@Tamal0401) December 1, 2021
ಮಮತಾ ಬ್ಯಾನರ್ಜಿ ಜೊತೆಗಿನ ಸಂವಾದ ಸಂದರ್ಭದ ವೇಳೆ ಮಾತನಾಡಿರುವ ಬಾಲಿವುಡ್ ನಟಿ ರಿಚಾ ಚಡ್ಡಾ, ಮಹಿಳಾ ಪ್ರಧಾನ ಮಂತ್ರಿ ಸ್ವೀಕರಿಸಲು ದೇಶ ಸಿದ್ಧವಾಗಿದೆ ಎಂದರು. ದೇವಿಯ ಶಕ್ತಿ ಇದೀಗ ಸರಿಯಾಗಿದ್ದು, ಅದಕ್ಕಾಗಿ ನಾನು ನಿಮ್ಮ ಬಳಿ ಕೇಳಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಟಿವಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಿಚಾ, ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಎಂದು ಹೇಳಿಕೊಂಡಿದ್ದರು.
ಕೇಂದ್ರದ ವಿರುದ್ಧ ವಾಗ್ದಾಳಿ
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಟಿ ರಿಚಾ ಚಡ್ಡಾ, ದೇಶದ ಓರ್ವ ಪ್ರಜೆಯಾಗಿ ಈ ಸಂದರ್ಭದಲ್ಲಿ ತುಂಬಾ ದುರದೃಷ್ಟಕರ ಎಂದು ಭಾವಿಸುತ್ತೇನೆ. ನನ್ನ ಅರ್ಧದಷ್ಟು ಸಮಯ ನಾಜಿ ಪಕ್ಷದಿಂದ ಸ್ಪೂರ್ತಿ ಪಡೆದ ಆಡಳಿತದಲ್ಲಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದೇ ವಿಚಾರವಾಗಿ ಮಮತಾ ಬ್ಯಾನರ್ಜಿ ಮುಂಬೈಗೆ ಭೇಟಿ ನೀಡಿದ್ದು, ಶಿವಸೇನೆ ಹಾಗೂ ಎನ್ಸಿಪಿ ಜೊತೆ ಮಾತುಕತೆ ನಡೆಸಿದರು.
ಇದನ್ನೂ ಓದಿರಿ: 'ರಾಹುಲ್ ದ್ರಾವಿಡ್ ನನ್ನ ಮೊದಲ ಲವ್': ಬಾಲಿವುಡ್ ನಟಿ ರಿಚಾ ಚಡ್ಡಾ
ಸದಸ್ಯರೊಂದಿಗೆ ಸಂವಾದ ನಡೆಸಿದ ಬ್ಯಾನರ್ಜಿ, ನೀವು ಹೆಚ್ಚಿನ ಸಮಯ ವಿದೇಶದಲ್ಲಿದ್ದರೆ, ರಾಜಕೀಯವನ್ನ ಹೇಗ ಮಾಡಲಾಗುತ್ತದೆ? ಫೆಡರಲ್ ರಚನೆ ಬಲವಾಗಿರಬೇಕೆಂದು ನಾನು ಬಯಸುತ್ತೇನೆ. ಎಲ್ಲ ಪ್ರಾದೇಶಿಕ ಪಕ್ಷಗಳು ಇದರಲ್ಲಿ ಒಟ್ಟಾಗಿ ಇರಬೇಕು ಎಂದು ಹೇಳಿದ್ದಾರೆ.