ಬೆಂಗಳೂರು: ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮುಂಗಾರುಮಳೆ ಹೆಚ್ಚಾದ ಕಾರಣ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಅಲ್ಲಲ್ಲಿ ಸೇತುವೆಗಳು ಜಲಾವೃತಗೊಂಡಿವೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಭಾರಿ ಮಳೆ ಹಿನ್ನೆಲೆ ಕುಸಿತ ಕಂಡಿದ್ದು, ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಮಲೆನಾಡು, ಕರಾವಳಿ ಭಾಗದಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ರಾಜ್ಯದ ಪ್ರಮುಖ ಅಣೆಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಯಾವ ಯಾವ ಅಣೆಕಟ್ಟುಗಳಲ್ಲಿ ಎಷ್ಟು ಪ್ರಮಾಣದ ನೀರಿದೆ ಎಂಬುದರ ಕುರಿತ ವಿಸ್ತೃತ ಮಾಹಿತಿ ಇಂತಿದೆ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ:
ಜಲಾಶಯಗಳು | ಗರಿಷ್ಠ ಮಟ್ಟ ಮೀ. | ಇಂದಿನ ಮಟ್ಟ ಮೀ. | ಒಳ ಹರಿವು ಕ್ಯೂಸೆಕ್ | ಹೊರ ಹರಿವು ಕ್ಯೂಸೆಕ್ | ಹಿಂದಿನ ವರ್ಷ ಮೀ. |
ಲಿಂಗನಮಕ್ಕಿ | 554.44 | 547.58 | 45458 | 2176 | 539.77 |
ಸೂಪಾ | 564.00 | 543.40 | 26001 | 489 | 534.45 |
ಹಾರಂಗಿ | 871.38 | 870.33 | 10378 | 10621 | 870.23 |
ಹೇಮಾವತಿ | 890.58 | 886.41 | 10786 | 300 | 882.36 |
ಕೆಆರ್ಎಸ್ | 38.04 | 30.99 | 11018 | 2292 | 32.83 |
ಕಬಿನಿ | 696.13 | 695.14 | 9316 | 3800 | 693.83 |
ಭದ್ರ | 657.73 | 652.21 | 15668 | 796 | 647.72 |
ತುಂಗಭದ್ರ | 497.71 | 494.19 | 40862 | 3726 | 490.56 |
ಘಟಪ್ರಭ | 662.91 | 655.70 | 17467 | 134 | 651.08 |
ಮಲಪ್ರಭಾ | 633.80 | 629.72 | 1317 | 194 | 627.86 |
ಆಲಮಟ್ಟಿ | 519.60 | 517.78 | 66936 | 65328 | 517.27 |
ನಾರಾಯಣಪುರ | 492.25 | 491.38 | 69782 | 64917 | 491.71 |