ಶಿವಪುರಿ (ಮಧ್ಯಪ್ರದೇಶ) : ಶಿವಪುರಿಯ ಪೊಹ್ರಿ ತಹಸಿಲ್‌ನಲ್ಲಿ ಇಂದು ಬೆಳಿಗ್ಗೆ ಬ್ಲಾಕ್ ಕಾಲೋನಿ ರಸ್ತೆಯಲ್ಲಿರುವ ರೋಸ್‌ವುಡ್ ಮರದಿಂದ ನೀರಿನ ತೊರೆಯೇ ಹರಿದು ಬರುತ್ತಿದೆ. ಜನರು ಇದನ್ನು ಪವಾಡವೆಂದು ನಂಬಿದ್ದು, ದೈವಿಕ ಸ್ಥಾನ ನೀಡಿದ್ದಾರೆ.
ಈ ಪವಾಡವನ್ನು ನೋಡಲು ನೂರಾರು ಜನರು ಮರದ ಬಳಿ ಜಮಾಯಿಸಿದ್ದಾರೆ. ಜೊತೆಗೆ ಪೊಹ್ರಿ ಸೇರಿದಂತೆ ಸುತ್ತಮುತ್ತಲಿನ ಜನರು ಈ ಮರವನ್ನು ಪೂಜಿಸಲು ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ರೋಸ್‌ವುಡ್ ಮರದಿಂದ ಹರಿಯುವ ನೀರಿನ ತೊರೆ ಯಾವುದು ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲವಾದರೂ ಈ ಬಗ್ಗೆ ತನಿಖೆ ನಡೆಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ ಪೊಹ್ರಿಯ ಬ್ಲಾಕ್ ಕಾಲೋನಿ ರಸ್ತೆಯಲ್ಲಿ ವಾಕಿಂಗ್‌ಗೆಂದು ತೆರಳಿದ್ದ ಜನರು ರಸ್ತೆ ಬದಿಯಲ್ಲಿ ಇದ್ದ ರೋಸ್‌ವುಡ್ ಮರದಿಂದ ನೀರು ಹರಿದು ಬರುತ್ತಿರುವುದನ್ನು ನೋಡಿ ಅಚ್ಚರಿಗೊಂಡರು. ಇದಾದ ಬಳಿಕ ಇಡೀ ಗ್ರಾಮಕ್ಕೆ ಗ್ರಾಮವೇ ಇಲ್ಲಿ ಬಂದು ನೆರೆದಿದೆ. ಇಲ್ಲಿನ ಆಡಳಿತ ಮಂಡಳಿ ತನಿಖೆ ನಡೆಸುವ ಭರವಸೆ ನೀಡಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಜಿಎಸ್ಟಿ ಪ್ರಧಾನ ಕಚೇರಿ ಕಟ್ಟಡದಿಂದ ಬಿದ್ದು ಆಫೀಸ್ ಬಾಯ್ ಆತ್ಮಹತ್ಯೆ