ಲೇಹ್(ಲಡಾಖ್): 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಗೂ ಗಾಂಧಿ ಜಯಂತಿ ಆಚರಣೆ ಅಂಗವಾಗಿ ಲಡಾಖ್ನ ಲೇಹ್ನಲ್ಲಿ ವಿಶ್ವದ ಅತಿದೊಡ್ಡ ಭಾರತದ ತ್ರಿವರ್ಣ ಧ್ವಜವನ್ನು ಇಂದು ಅನಾವರಣಗೊಳಿಸಲಾಗಿದೆ.
ಬರೋಬ್ಬರಿ 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಇದಾಗಿದ್ದು, ಮುಂಬೈನಲ್ಲಿ ತಯಾರಿಸಲಾಗಿದೆ. 225 ಅಡಿ ಉದ್ದ ಹಾಗೂ 150 ಅಡಿ ಅಗಲ ಇರುವ ಈ ತ್ರಿವರ್ಣ ಧ್ವಜ ಲೇಹ್ನಲ್ಲಿ 2 ಸಾವಿರ ಅಡಿ ಎತ್ತರದ ಜಾಗದಲ್ಲಿ ಸ್ಥಾಪನೆಗೊಂಡಿದೆ. ಇದಕ್ಕಾಗಿ ಭಾರತೀಯ ಸೇನೆಯ 57 ಎಂಜಿನಿಯರ್ಗಳು ಹಾಗೂ ರೆಜಿಮೆಂಟ್ನ 150 ಸೈನಿಕರು ಸುಮಾರು 2 ಗಂಟೆಗಳ ಕಾಲ ಹೊತ್ತು ಬೆಟ್ಟದ ತುದಿಗೆ ತೆಗೆದುಕೊಂಡು ಹೋಗಿದ್ದಾರೆ.
-
#WATCH LG Ladakh RK Mathur today unveiled the National flag created by Khadi & Village Industries Commission at an event organized by the Indian Army's Fire and Fury Corps, Ladakh pic.twitter.com/7wMmS4ua8y
— ANI (@ANI) October 2, 2021 " class="align-text-top noRightClick twitterSection" data="
">#WATCH LG Ladakh RK Mathur today unveiled the National flag created by Khadi & Village Industries Commission at an event organized by the Indian Army's Fire and Fury Corps, Ladakh pic.twitter.com/7wMmS4ua8y
— ANI (@ANI) October 2, 2021#WATCH LG Ladakh RK Mathur today unveiled the National flag created by Khadi & Village Industries Commission at an event organized by the Indian Army's Fire and Fury Corps, Ladakh pic.twitter.com/7wMmS4ua8y
— ANI (@ANI) October 2, 2021
ಇದನ್ನೂ ಓದಿರಿ: ಪಿಎಂ ನರೇಂದ್ರ ಮೋದಿ ಟೀಕೆಗಳನ್ನ ಗೌರವಿಸುತ್ತಾರಂತೆ.. ಆದರೆ..
ಲೆಫ್ಟಿನೆಂಟ್ ಗವರ್ನರ್ ಆರ್.ಕೆ. ಮಾಥುರ್ ಈ ರಾಷ್ಟ್ರಧ್ವಜ ಅನಾವರಣ ಮಾಡಿದ್ದು, ಈ ವೇಳೆ ಸೇನಾ ಮುಖ್ಯಸ್ಥ ಎಂ.ಎಂ ನರವಾನೆ ಉಪಸ್ಥಿತರಿದ್ದರು.