ETV Bharat / bharat

ಶಕ್ತಿಮಾನ್​ ರೀತಿ ಗಾಳಿಯಲ್ಲಿ ಹಾರಲು ಹೋಗಿ ಜೈಲಿನಲ್ಲಿ ಲ್ಯಾಂಡ್​ ಆದ ಯುವಕ.. ವಿಡಿಯೋ - ನೊಯ್ಡಾದ ಶಕ್ತಿಮಾನ್​ ಜೈಲಿಗೆ

ಯುವಕ ಬೈಕ್​ ಮೇಲೆ ಸ್ಟಂಟ್​ ಮಾಡುವುದನ್ನು ಅವನ ಸ್ನೇಹಿತರು ಚಿತ್ರೀಕರಣ ಮಾಡಿದ್ದರು. ರಸ್ತೆಯ ಮೇಲೆ ಅಪಾಯಕಾರಿ ಸ್ಟಂಟ್​ ಮಾಡಿದ ಯುವಕ ಮತ್ತು ಆತನ ಸ್ನೇಹಿತರ ಮೇಲೆ ಕೇಸ್​ ಜಡಿದ ಪೊಲೀಸರು ಜೈಲಿಗಟ್ಟಿದ್ದಾರೆ..

-shaktimaan-inspired
ಶಕ್ತಿಮಾನ್​ ರೀತಿ ಗಾಳಿಯಲ್ಲಿ ಹಾರಲು ಹೋಗಿ
author img

By

Published : May 28, 2022, 6:09 PM IST

ನೋಯ್ಡಾ(ಉತ್ತರಪ್ರದೇಶ) : ಸಿನಿಮಾಗಳ ಹೀರೋಗಳು ಸ್ಟಂಟ್​ ಮಾಡಿದಂತೆ ತಾವೂ ಮಾಡಲು ಹೋಗಿ ಯುವಕರು ಏನೆಲ್ಲಾ ಸಂಕಷ್ಟಗಳಿಗೆ ಸಿಲುಕುತ್ತಾರೆ. ಹೈದರಾಬಾದ್​ನ ಯುವಕನೊಬ್ಬ ರಾಕಿ ಬಾಯ್​ನಂತೆ ಸಿಗರೇಟ್​ನ ಇಡೀ ಪ್ಯಾಕ್​ ಸೇದಿ ಆಸ್ಪತ್ರೆ ಪಾಲಾದರೆ, ಶಕ್ತಿಮಾನ್​ ರೀತಿ ಸ್ಟಂಟ್​​ ಮಾಡಲು ಹೋಗಿ ಉತ್ತರಪ್ರದೇಶ ಯುವಕ ಜೈಲು ಪಾಲಾಗಿದ್ದಾನೆ.

90ರ ದಶಕದಲ್ಲಿ ಬಂದ ಸೂಪರ್‌ ಹೀರೋ ಮಾದರಿಯ 'ಶಕ್ತಿಮಾನ್​' ಗಾಳಿಯಲ್ಲಿ ಹಾರುವುದು ಭಾರೀ ಖ್ಯಾತಿ ಪಡೆದಿತ್ತು. ಅದೇ ರೀತಿಯಾಗಿಯೇ ಉತ್ತರಪ್ರದೇಶದ ನೋಯ್ಡಾದ ಯುವಕನೊಬ್ಬ ಬೈಕ್​ ಮೇಲೆ ಮಲಗಿ ಗಾಳಿಯಲ್ಲಿ ತೇಲುವಂತೆ ಸ್ಟಂಟ್​ ಮಾಡಿದ ವಿಡಿಯೋ ವೈರಲ್​ ಆಗಿದೆ.

  • बाइक पर खतरनाक स्टंट करने वाले युवक विकास तथा वीडियो बनाने वाले उसके 02 साथियों (गौरव, सूरज) को थाना सेक्टर-63 नोएडा पुलिस द्वारा गिरफ्तार कर स्टंट में प्रयुक्त बाइक को सीज किया गया।#UPPolice pic.twitter.com/d94nvcfK01

    — POLICE COMMISSIONERATE GAUTAM BUDDH NAGAR (@noidapolice) May 28, 2022 " class="align-text-top noRightClick twitterSection" data=" ">

ಯುವಕ ಬೈಕ್​ ಮೇಲೆ ಸ್ಟಂಟ್​ ಮಾಡುವುದನ್ನು ಅವನ ಸ್ನೇಹಿತರು ಚಿತ್ರೀಕರಣ ಮಾಡಿದ್ದರು. ರಸ್ತೆಯ ಮೇಲೆ ಅಪಾಯಕಾರಿ ಸ್ಟಂಟ್​ ಮಾಡಿದ ಯುವಕ ಮತ್ತು ಆತನ ಸ್ನೇಹಿತರ ಮೇಲೆ ಕೇಸ್​ ಜಡಿದ ಪೊಲೀಸರು ಜೈಲಿಗಟ್ಟಿದ್ದಾರೆ.

ಬೈಕ್‌ನಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದ ವಿಕಾಸ್ ಎಂಬ ಯುವಕ ಮತ್ತು ವಿಡಿಯೋ ಮಾಡಿದ ಅವನ ಇಬ್ಬರು ಸ್ನೇಹಿತರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಸ್ಟಂಟ್‌ಗೆ ಬಳಸಿದ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರೇಟ್ ಗೌತಮ್ ಬುದ್ಧ್ ಹೇಳಿದ್ದಾರೆ.

ಮೂವರನ್ನು ಬಂಧಿಸಿದ ನಂತರ ನೋಯ್ಡಾ ಪೊಲೀಸರು ಯುವಕರು ಮಾಡಿದ ಸಾಹಸದ ಕಿರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ನೋಯ್ಡಾದಲ್ಲಿಯೇ 21 ವರ್ಷದ ಯುವಕನೊಬ್ಬ ಗೋಲ್​ಮಾಲ್​ ಸಿನಿಮಾದಲ್ಲಿ ​ಅಜಯ್​ ದೇವಗನ್​ ಕಾರಿನಲ್ಲಿ ಸ್ಟಂಟ್​ ಮಾಡಿದಂತೆಯೇ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದ.

ಓದಿ: KGF- 2 ಚಿತ್ರದ ರಾಕಿ ಭಾಯ್​​ ಪ್ರಭಾವ.. ಪ್ಯಾಕ್​ ಸಿಗರೇಟ್​ ಸೇದಿ ಆಸ್ಪತ್ರೆ ಸೇರಿದ ಬಾಲಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.