ವಾಸೀಂ (ಅಮರಾವತಿ): ಹೊಲ ಉಳುಮೆ ಮಾಡಲು ಸಾಮಾನ್ಯವಾಗಿ ಎತ್ತು, ಎಮ್ಮೆ, ಕೋಣಗಳ ಬಳಕೆ ಮಾಡಲಾಗುತ್ತದೆ. ಅದೂ ಸಾಧ್ಯವಾಗದೇ ಹೋದಾಗ ಕೆಲವೊಮ್ಮೆ ಬಡ ರೈತರೇ ನೇಗಿಲಿಗೆ ಹೆಗಲು ಕೊಟ್ಟು ಉಳುಮೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ರೈತರೊಬ್ಬರು ಎರಡು ಕುದುರೆಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ.
ಹೌದು, ಟ್ರ್ಯಾಕ್ಟರ್ ತುಂಬಾ ವೆಚ್ಚದಾಯಕ ಎಂಬ ಕಾರಣಕ್ಕೆ ರೈತ ತನ್ನ ಸಾಕು ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ನೀಡಿದ್ದಾನೆ. ಅಮರಾವತಿ ಜಿಲ್ಲೆಯ ವಾಸೀಂ ತಾಲೂಕಿನ ಶೆಲ್ಗಾಂವ್ ಘುಗೆ ಗ್ರಾಮದ ಕೃಷಿಕ ಬಾಬುರಾವ್ ಸೂರ್ಯಭಾನ್ ಧಂಗರ್ ಎಂಬುವವರು ಕೃಷಿ ಕಾರ್ಯಕ್ಕೆ ಈ ಅಶ್ವಮೇಧಗಳನ್ನು ಬಳಕೆ ಮಾಡುತ್ತಿದ್ದಾರೆ.
![ಕೃಷಿ ಕಾರ್ಯಕ್ಕೆ ಅಶ್ವಮೇಧಗಳನ್ನು ಕಟ್ಟಿದ ರೈತ..](https://etvbharatimages.akamaized.net/etvbharat/prod-images/14936022_t333humbnail_2x1_ran.jpg)
ಪ್ರಸ್ತುತ ದಿನಗಳಲ್ಲಿ ಟ್ರ್ಯಾಕ್ಟರ್ ಮೂಲಕ ಕೃಷಿ ಮಾಡುವುದು ತುಂಬಾ ದುಬಾರಿಯಾಗಿದೆ. ಅಲ್ಲದೇ, ಉಳುಮೆ ಅಗತ್ಯವಿರುವಾಗ ಟ್ರ್ಯಾಕ್ಟರ್ ಮಾಲೀಕರು ಸಮಯಕ್ಕೆ ಬರುವುದಿಲ್ಲ. ಆದ್ದರಿಂದ ರಾಜ ಮತ್ತು ತುಳಸಾ ಎಂಬ ಕುದುರೆಗಳಿಗೆ ಉಳುಮೆ ಮಾಡುವ ತರಬೇತಿ ಕೊಟ್ಟು ಅವುಗಳನ್ನು ಬಳಕೆ ಮಾಡುತ್ತಿದ್ದೇನೆ ಎಂದು ರೈತ ಬಾಬುರಾವ್ ಹೇಳಿದ್ದಾರೆ. ಅಲ್ಲದೇ, ಕೆಲ ವರ್ಷಗಳ ಹಿಂದೆ ಈ ಕುದುರೆಗಳನ್ನು ಖರೀದಿಸಿ ಸಾಕುತ್ತಿದ್ದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಇಡೀ ಗ್ರಾಮವನ್ನೇ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಿದ ಸರ್ಕಾರಿ ಶಿಕ್ಷಕ