ಅಮರಾವತಿ(ಮಹಾರಾಷ್ಟ್ರ): ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವಾರ್ಧಾ ನದಿಯಲ್ಲಿ ನಿನ್ನೆ ಬೋಟ್ ಮುಳುಗಡೆಯಾಗಿ 11 ಮಂದಿ ನೀರು ಪಾಲಾಗಿದ್ದರು. 13 ಮಂದಿಯಿದ್ದ ಬೋಟ್ ವಾರ್ಧಾ ನದಿಯಲ್ಲಿ ಮುಗುಚಿದ್ದರಿಂದ ಈ ಘಟನೆ ನಡೆದಿತ್ತು. ಆ ಪೈಕಿ 3 ಶವಗಳು ಪತ್ತೆಯಾಗಿವೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಉಳಿದ 8 ಮಂದಿಗಾಗಿ ಶೋಧ ಮುಂದುವರೆದಿದೆ.
ಸಂಜೆ ನಿಲುಗಡೆಯಾಗಿದ್ದ ಶೋಧ ಕಾರ್ಯವನ್ನು ಇಂದು ಬೆಳಗ್ಗೆಯಿಂದ ಮತ್ತೆ ಮುಂದುವರೆಸಲಾಗಿದೆ ಎಂದು ಘಟನಾ ಸ್ಥಳದಲ್ಲಿರುವ ಡಿಸಿ ಪುನೀತ್ ಕೌರ್ ಮಾಹಿತಿ ನೀಡಿದ್ದಾರೆ.
ಬೆನೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಹತ್ರಾಣ ಗ್ರಾಮದಲ್ಲಿ ನಿನ್ನೆ ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿತ್ತು. ವಾರ್ಧಾ ನದಿಯಲ್ಲಿ ಮುಳುಗಿ ಮೃತಪಟ್ಟವರಲ್ಲಿ ಒಬ್ಬ ಅಪ್ರಾಪ್ತೆಯೂ ಸೇರಿದ್ದಾಳೆ. ಮೂರು ಕುಟುಂಬಗಳ 20ಕ್ಕೂ ಹೆಚ್ಚು ಜನರನ್ನು ಹೊತ್ತ ದೋಣಿ ಮಗುಚಿ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್: 11 ಮಂದಿ ನೀರುಪಾಲು, 3 ಮೃತದೇಹ ಹೊರಕ್ಕೆ
ನಿನ್ನೆ ನದಿ ದಡದಲ್ಲಿ ಗಣೇಶ ನಿಮ್ಮಜನದ ವೇಳೆ ಪೂಜೆ ಸಲ್ಲಿಸಿ ಹಿಂತಿರುಗುವ ವೇಳೆ ಈ ಘಟನೆ ನಡೆದಿತ್ತು. ಬೋಟ್ನಲ್ಲಿ ಲೆಕ್ಕಕ್ಕಿಂತ ಹೆಚ್ಚು ಜನ ಇದ್ದುದರಿಂದ ಭಾರ ತಡೆಯಲಾರದೇ ಬೋಟ್ ಮಗುಚಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.