ಕೃಷ್ಣಗಿರಿ: ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆ ನಡೆಯುವ ಸಂದರ್ಭ ಕಟ್ಟಡದ ಗೋಡೆ ಕುಸಿದು ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಿಗಿರಿ ವ್ಯಾಪ್ತಿಯ ನೆರ್ಲಗಿರಿಯಲ್ಲಿ ನಡೆದಿದೆ.
ಓದಿ: ಮೋಟಾರ್ ಸೈಕಲ್‌ನಲ್ಲಿ ಸ್ಫೋಟಕ ಅಳವಡಿಕೆ; ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
ತಮಿಳುನಾಡಿನಲ್ಲಿ ಗೂಳಿ ಓಟ (ಜಲ್ಲಿಕಟ್ಟು) ಸ್ಪರ್ಧೆ ನಿಷೇಧಗೊಂಡಿದೆ. ಆದರೂ ಈ ವರ್ಷ ಸರ್ಕಾರ ಹಾಗೂ ಪೊಲೀಸರಿಗೆ ಮಾಹಿತಿ ನೀಡದೆ ಅಕ್ರಮವಾಗಿ ಜಲ್ಲಿಕಟ್ಟು ಸ್ಪರ್ಧೆ ಏರ್ಪಡಿಸಿದ್ದಾರೆ. ಸ್ಪರ್ಧೆ ನೋಡಲು ಸಾವಿರಾರು ಜನ ಸೇರಿದ್ದು, ಮನೆ ಮಹಡಿಯ ಮೇಲೆ ನಿಂತು ನೋಡುವಾಗ ಈ ಅವಘಡ ಸಂಭವಿಸಿದೆ.
ಮನೆಯ ಕೆಳಗೆ ಇದ್ದವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ತಮಿಳುನಾಡಿನ ಬಹು ಸಂಭ್ರಮಿತ ಸಂಕ್ರಾಂತಿ ಹಬ್ಬ (ಪೊಂಗಲ್) ಸಮೀಪಿಸುತ್ತಿದ್ದಂತೆ ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧದ ನಡುವೆಯೂ ಆಯೋಜಿಸಲಾಗುತ್ತಿದೆ.