ETV Bharat / bharat

ಗೋಡೆ ಕುಸಿದು ಮೂವರು ಮಕ್ಕಳ ದುರ್ಮರಣ: ಅವಶೇಷಗಳಡಿ ಹಲವರು ಶಂಕೆ - ಉತ್ತರ ಪ್ರದೇಶ ಸುದ್ದಿ

ಗೋಡೆ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಅವಶೇಷಗಳಡಿ ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆಯಿದೆ.

Wall collapse incident in Agra's Kagarol claims lives of 3 children
ಗೋಡೆ ಕುಸಿದು ಮೂವರು ಮಕ್ಕಳ ದುರ್ಮರಣ: 9 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ
author img

By

Published : Jun 16, 2021, 8:16 AM IST

ಆಗ್ರಾ(ಉತ್ತರ ಪ್ರದೇಶ): ಗೋಡೆಯೊಂದು ಕುಸಿದು ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಆಗ್ರಾದ ಕಾಗರೋಲ್ ಬಳಿ ನಡೆದಿದೆ. ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ಥಳದಲ್ಲಿ ಜಮಾಯಿಸಿರುವ ಸಾರ್ವಜನಿಕರು

ಘಟನೆ ನಡೆದ ತಕ್ಷಣ ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತಪಟ್ಟವರು 3ರಿಂದ 8 ವರ್ಷದೊಳಗಿನವರಾಗಿದ್ದಾರೆ.

ಇದನ್ನೂ ಓದಿ: ರಾಜಕೀಯ ಕುಟುಂಬದ ಯುವಕನಿಗೆ ISI ಹನಿಟ್ರ್ಯಾಪ್: ಓರ್ವನ ಬಂಧನ

ಈ ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಲೂ ಸುಮಾರು 9 ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದ್ದು, ಎಲ್ಲರನ್ನೂ ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್​​ ಪ್ರಭು ಎನ್​. ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.