ಸಿರೋಹಿ (ರಾಜಸ್ಥಾನ): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬ್ರಹ್ಮಕುಮಾರೀಸ್ನ ಮಾಜಿ ಮುಖ್ಯಸ್ಥರಾಗಿದ್ದ ರಾಜ್ಯಯೋಗಿನಿ ದಾದಿ ಜಾನಕಿ ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು. ಇನ್ನು ಸಚಿವ ರವಿಶಂಕರ್ ಪ್ರಸಾದ್ ಸಾಥ್ ನೀಡಿದರು.
"ನಾವು ಮಾನವೀಯತೆಯ ನಿಸ್ವಾರ್ಥ ಸೇವೆಗೆ ಮೀಸಲಾದ ದಾದಿಯ ಜೀವನದಿಂದ ಸ್ಫೂರ್ತಿ ಪಡೆಯಬೇಕು. ಜಗತ್ತಿಗೆ ದಾದಿ ಜಾನಕಿ ಜಿ ಅವರಂತಹ ಧ್ವನಿಗಳು ಬೇಕಾಗುತ್ತವೆ. ದಾದಿ ಜಾನಕಿ ತನ್ನ ಜೀವನ ಮಾನವೀಯತೆಗಾಗಿ ಅರ್ಪಿಸಿದ್ದಾರೆ. ಅವರು ತಮ್ಮ ಇಡೀ ಜೀವನ ಮಹಿಳಾ ಸಬಲೀಕರಣ, ಏಕತೆ, ಸಹೋದರತ್ವ ಮತ್ತು ಸಮಾಜದಲ್ಲಿ ಮಾನವೀಯ ಮೌಲ್ಯಗಳಿಗೆ ಮೀಸಲಿಟ್ಟರು" ಎಂದು ವೆಂಕಯ್ಯ ನಾಯ್ಡು ಹೇಳಿದರು.
ಈ ಸಂದರ್ಭದಲ್ಲಿ ಬ್ರಹ್ಮ ಕುಮಾರಿಸ್ ಸಂಸ್ಥೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಬ್ರಿಜ್ಮೋಹನ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಕೆ.ಮೃತ್ಯುಂಜಯ್, ಲೈಫ್ ಮ್ಯಾನೇಜ್‌ಮೆಂಟ್ ಬಿ.ಕೆ.ಶಿವಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬ್ರಹ್ಮಕುಮಾರಿ ಸಂಸ್ಥೆಯ ಮಾಜಿ ಮುಖ್ಯ ಆಡಳಿತಾಧಿಕಾರಿ ರಾಜ್ಯೋಗಿನಿ ದಾದಿ ಜಾನಕಿ ಅವರು 2020 ರ ಮಾರ್ಚ್ 27 ರಂದು ತಮ್ಮ 104 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮೊದಲ ಪುಣ್ಯಸ್ಮರಣೆಯ ನೆನಪಿಗಾಗಿ, ಭಾರತ ಸರ್ಕಾರದ ಅಂಚೆ ಇಲಾಖೆ ಈ ಅಂಚೆ ಚೀಟಿ ಬಿಡುಗಡೆ ಮಾಡಿದೆ.