ನವದೆಹಲಿ: ಟೆಲಿಕಾಂ ಕಂಪನಿಗಳು ಪಾವತಿಸಬೇಕಾದ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿಗಳಲ್ಲಿನ ದೋಷಗಳನ್ನು ಸರಿಪಡಿಸುವಂತೆ ಕೋರಿ ಸಲ್ಲಿಸಿದ ಮನವಿಗಳನ್ನು ತಿರಸ್ಕರಿಸಿದ ತೀರ್ಪಿಗೆ ಸಂಬಂಧಿಸಿದಂತೆ ವೊಡಾಫೋನ್ ಐಡಿಯಾ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದೆ.
ಕ್ಯುರೇಟಿವ್ ಅರ್ಜಿ ಸಲ್ಲಿಸಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರಸ್ತಾಪಿಸಿದರು.
ಸೆಪ್ಟೆಂಬರ್ 2020 ರಲ್ಲಿ ದೂರ ಸಂಪರ್ಕ ಇಲಾಖೆಗೆ (ಡಿಒಟಿ) ಕೆಲವು ಷರತ್ತು ವಿಧಿಸಿ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಸಂಬಂಧಿತ ಬಾಕಿ ಪಾವತಿಗೆ ವೊಡಾಫೋನ್- ಐಡಿಯಾ, ಭಾರ್ತಿ ಏರ್‌ಟೆಲ್ ಮತ್ತು ಟಾಟಾ ಟೆಲಿ ಸರ್ವೀಸಸ್ ಸೇರಿದಂತೆ ಇತರ ಟೆಲಿಕಾಂ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್ 10 ವರ್ಷಗಳ ಕಾಲಾವಕಾಶ ನೀಡಿತ್ತು.
ಸರ್ಕಾರವು 20 ವರ್ಷಗಳ ಸಮಯ ಸೂಚಿಸಿತ್ತು. ಆದರೆ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ತುಂಬಾ ದೀರ್ಘವಾಗಲಿದೆ. ಹೀಗಾಗಿ 10 ವರ್ಷಗಳ ಕಾಲಾವಕಾಶ ಮಾತ್ರ ನೀಡಲಾಗುವುದು ಎಂದು ಸುಪ್ರೀಂ ತೀರ್ಪು ನೀಡಿತ್ತು. 2021ರ ಮಾರ್ಚ್ 31ರ ಒಳಗೆ ಟೆಲಿಕಾಂ ಕಂಪನಿಗಳು ಎಜಿಆರ್ ಸಂಬಂಧಿತ ಬಾಕಿ ಹಣವನ್ನು ಶೇ. 10ರಷ್ಟು ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿತ್ತು. ಟೆಲಿಕಾಂ ಕಂಪನಿಗಳು ನ್ಯಾಯಾಲಯದ ಆದೇಶದ ಪ್ರಕಾರ ಎಜಿಆರ್ ಬಾಕಿ ಪಾವತಿಸುವ ಹೊಣೆಗಾರಿಕೆ ಸಲ್ಲಿಸಬೇಕಾಗಿತ್ತು.
2021 ರಲ್ಲಿ, ಸುಪ್ರೀಂ ಕೋರ್ಟ್ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಟೆಲಿಕಾಂ ಮೇಜರ್‌ಗಳ ಮನವಿಯನ್ನು ವಜಾಗೊಳಿಸಿತ್ತು. ಉನ್ನತ ನ್ಯಾಯಾಲಯದ 2019 ರ ತೀರ್ಪಿನ ಪ್ರಕಾರ ಅವರು ಪಾವತಿಸಬೇಕಾದ ಎಜಿಆರ್ ಬಾಕಿಗಳ ಲೆಕ್ಕಾಚಾರದಲ್ಲಿ ದೋಷಗಳನ್ನು ಸರಿಪಡಿಸಲು ಕೋರಿದರು.
ಎಜಿಆರ್ ಬಾಕಿಗಳ ಲೆಕ್ಕಾಚಾರದಲ್ಲಿ ಟೆಲಿಕಾಂ ಇಲಾಖೆ (ಡಿಒಟಿ) ಲೆಕ್ಕದಲ್ಲಿ ದೋಷಗಳು ಕಂಡು ಬಂದಿವೆ. ದೋಷಗಳನ್ನು ಸರಿಪಡಿಸಲು ನ್ಯಾಯಾಲಯವು ಅವಕಾಶ ನೀಡಬೇಕು ಎಂದು ಕಂಪನಿಗಳು ನಂತರ ಅರ್ಜಿ ಸಲ್ಲಿಸಿದ್ದವು.
ತನ್ನ ಕ್ಯುರೇಟಿವ್ ಮನವಿಯಲ್ಲಿ ವೊಡಾಫೋನ್ ಇಂಡಿಯಾವು ಉನ್ನತ ನ್ಯಾಯಾಲಯದ ಎರಡು ನಿರ್ದೇಶನಗಳನ್ನು ಮಾತ್ರ ಪ್ರಶ್ನಿಸಲು ಪ್ರಯತ್ನಿಸುತ್ತಿದೆ. ನ್ಯಾಯಾಲಯವು ವ್ಯಾಖ್ಯಾನಿಸಿದಂತೆ ಪರವಾನಗಿ ಶುಲ್ಕವನ್ನು ವಿಧಿಸುವುದನ್ನು ಪ್ರಶ್ನಿಸುವುದಿಲ್ಲ ಎಂದು ಹೇಳಿದೆ.
ಕ್ಯುರೇಟಿವ್ ಮನವಿಯಲ್ಲಿ ಅರ್ಜಿದಾರರು ಈಗಾಗಲೇ ದಂಡಕ್ಕೆ ಸಮಾನವಾದ ವಿಳಂಬ ಪಾವತಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ಹೊಂದುತ್ತಿರುವುದರಿಂದ ದಂಡ ಮತ್ತು ದಂಡದ ಮೇಲಿನ ಬಡ್ಡಿಯೊಂದಿಗೆ ಮತ್ತಷ್ಟು ಹೊರೆಯಾಗಬಾರದು ಎಂದು ಉಲ್ಲೇಖಿಸಲಾಗಿದೆ.
ನಾವು ಈಗಾಗಲೇ ಆರ್ಥಿಕ ಬಿಕ್ಕಟ್ಟಿನ ಅಂಚಿನಲ್ಲಿದ್ದೇವೆ. ನ್ಯಾಯಾಲಯವು ನೀಡಿದ ತೀರ್ಪು ಬೇಡಿಕೆಗಳಲ್ಲಿನ ಕ್ಲೆರಿಕಲ್ ಮತ್ತು ದೋಷಗಳ ತಿದ್ದುಪಡಿಯನ್ನು ಸಹ ನಿಷೇಧಿಸುತ್ತದೆ. ಕೋಟ್ಯಂತರ ರೂಪಾಯಿ ದಂಡ ಮತ್ತು ದಂಡದ ಮೇಲಿನ ಬಡ್ಡಿಯನ್ನು ವಿಧಿಸುವುದು ಅತ್ಯಂತ ಅನ್ಯಾಯವಾಗಿದೆ ಎಂದು ಅರ್ಜಿದಾರರು ಕ್ಯುರೇಟಿವ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ಮಾರ್ಚ್ ಅಂತ್ಯದೊಳಗೆ ಎಜಿಆರ್ ಪಾವತಿಸಲು ವಿಫಲವಾದ ಕಂಪನಿಗಳು : ದೂರ ಸಂಪರ್ಕ ಇಲಾಖೆಯಿಂದ ಅಫಿಡವಿಟ್