ಮುಂಬೈ: ಮಹಾರಾಷ್ಟ್ರದಲ್ಲಿ ಇಂದಿನಿಂದ ಧಾರ್ಮಿಕ ಸ್ಥಳಗಳನ್ನು ಓಪನ್ ಮಾಡಿದ್ದಾರೆ. ಶಿರಡಿ ಸಾಯಿಬಾಬಾ, ಸಿದ್ಧಿ ವಿನಾಯಕ ಮತ್ತು ಪಂಡರಾಪುರದ ಪಾಂಡುರಂಗ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳು ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆದಿವೆ.
ಇಂದಿನಿಂದ ಕೋವಿಡ್ ನಿಯಮದ ಪ್ರಕಾರ ಭಕ್ತರು ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಅದರಂತೆ ಶಿರಡಿ ಸಾಯಿಬಾಬಾ, ಸಿದ್ಧಿ ವಿನಾಯಕ ಮತ್ತು ಪಾಂಡುರಂಗ ದೇವಾಲಯಗಳು ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಾಗಿಲು ತೆರೆದಿದ್ದು, ಭಕ್ತಾದಿಗಳು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.