ETV Bharat / bharat

'ಉಕ್ರೇನ್​ ಪರಿಸ್ಥಿತಿ ಕಳವಳಕಾರಿ': ಅಮೆರಿಕ ಅಧ್ಯಕ್ಷರೊಂದಿಗೆ ಮೋದಿ ವರ್ಚುವಲ್​ ಸಂವಾದ

author img

By

Published : Apr 11, 2022, 9:41 PM IST

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಡುವೆ ಇಂದು ಮಹತ್ವದ ವರ್ಚುವಲ್​ ಸಂವಾದ ನಡೆಯಿತು. ಈ ವೇಳೆ ಉಕ್ರೇನ್​​-ರಷ್ಯಾ ಬಿಕ್ಕಟ್ಟು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

Modi in virtual interaction with US President

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಇಂದು ಮಹತ್ವದ ವರ್ಚುವಲ್​ ಸಭೆ ನಡೆಸಿದರು. ಈ ವೇಳೆ ಮಾತನಾಡಿರುವ ಪ್ರಧಾನಿ, ಉಕ್ರೇನ್​​ನಲ್ಲಿನ ಪರಿಸ್ಥಿತಿ ತೀರಾ ಕಳವಳಕಾರಿಯಾಗಿದ್ದು,ರಷ್ಯಾ-ಉಕ್ರೇನ್​ ಅಧ್ಯಕ್ಷರೊಂದಿಗೆ ನಾವು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಮಾತುಕತೆ ಮೂಲಕ ಉಭಯ ದೇಶಗಳ ನಡುವೆ ಉಂಟಾಗಿರುವ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಲು ನಾವು ಮನವಿ ಮಾಡಿದ್ದು, ಉಕ್ರೇನ್​ ಅಧ್ಯಕ್ಷರೊಂದಿಗೆ ನೇರವಾಗಿ ಮಾತುಕತೆ ನಡೆಸುವಂತೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್​ಗೆ ತಿಳಿಸಿದ್ದೇವೆ ಎಂದರು.

  • #WATCH | PM says, "I spoke with Presidents of Ukraine & Russia over phone several times; appealed to them for peace & suggested Pres Putin for direct talks with Ukrainian Pres. Killing of innocent citizens in Bucha very concerning, we condemned & also demanded an impartial probe" pic.twitter.com/tPsvQg4DCc

    — ANI (@ANI) April 11, 2022 " class="align-text-top noRightClick twitterSection" data=" ">

ಈ ವೇಳೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​, ಭಾರತ ಮತ್ತು ನಮ್ಮ ನಡುವಿನ ನಿಕಟ ಸಮಾಲೋಚನೆ ಮುಂದುವರೆಯಲಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವಾಗಿ ಬೆಳೆಯಲಿದೆ ಎಂದರು. ರಕ್ಷಣಾ ವಲಯದಲ್ಲಿ ನಮ್ಮ ಪಾಲುದಾರಿಗೆ ಮತ್ತಷ್ಟು ಗಟ್ಟಿಯಾಗಲಿದ್ದು, ನಮ್ಮ ಸ್ನೇಹ ಮತ್ತು ಮಾನವೀಯ ಮೌಲ್ಯ ಆಳವಾಗಿ ಬೇರು ಉರಲಿವೆ. ಉಕ್ರೇನ್​ ಜನರಿಗೆ ಮಾನವೀಯ ರೀತಿಯಲ್ಲಿ ಸಹಾಯ ಮಾಡಿರುವ ಭಾರತದ ನಿರ್ಧಾವನ್ನ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: 'ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಕಾಶ್ಮೀರ ವಿವಾದ ಇತ್ಯರ್ಥವಾಗ್ಬೇಕು': ಪಾಕ್​ ನಿಯೋಜಿತ ಪ್ರಧಾನಿ

ಕೋವಿಡ್​ ಸಂದರ್ಭದಲ್ಲಿ ನಾವು ಅನೇಕ ರೀತಿಯ ಜಾಗತಿಕ ಸವಾಲು, ಆರೋಗ್ಯ, ಆರ್ಥಿಕ ಬಿಕ್ಕಟ್ಟು ಎದುರಿಸಿದ್ದು, ಇದೀಗ ಅದರಿಂದ ಹೊರಬಂದಿದ್ದೇವೆ. ಈ ಸಂದರ್ಭದಲ್ಲಿ ಭಾರತದೊಂದಿಗೆ ಮಾತನಾಡುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತಸ ಮೂಡಿಸಿದೆ ಎಂದರು.ಉಭಯ ನಾಯಕರ ಮಧ್ಯೆ ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಮಹತ್ವದ ಚರ್ಚೆ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.