ETV Bharat / bharat

ರಸ್ತೆ ಮಧ್ಯೆ ನಮಾಜ್ ವಿಡಿಯೋ ವೈರಲ್: ಎಫ್​ಐಆರ್ ದಾಖಲು - ಪದೇ ಪದೆ ರಸ್ತೆಯಲ್ಲಿ ನಮಾಜ್

ಆರಂಭದಲ್ಲಿ ಮದರಸಾ ಆರಂಭಿಸುತ್ತೇವೆ ಎಂದು ಮಸೀದಿ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಮಸೀದಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ, ಆದರೂ ಬಹುಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ರಸ್ತೆ ಮಧ್ಯೆ ನಮಾಜ್ ವಿಡಿಯೋ ವೈರಲ್: ಎಫ್​ಐಆರ್ ದಾಖಲು
viral-video-of-offering-namaz-on-road-in-ghaziabad-case-registered-against-unknown-people
author img

By

Published : Nov 7, 2022, 4:20 PM IST

ನವದೆಹಲಿ/ ಗಾಜಿಯಾಬಾದ್: ಗಾಜಿಯಾಬಾದ್​ನಲ್ಲಿ ರಸ್ತೆ ಮಧ್ಯೆ ನಮಾಜ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 25 ರಿಂದ 30 ಜನರ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ. ಕಲಂ 114 ಉಲ್ಲಂಘನೆಯಾಗಿದೆ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದ್ದು, ಕಲಂ 188ರಡಿ ದೂರು ದಾಖಲಿಸಲಾಗಿದೆ.

ಗಾಜಿಯಾಬಾದ್​ನ ಖೋಡಾ ಪ್ರದೇಶದ ದೀಪಕ ವಿಹಾರ್​ನಲ್ಲಿ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ರಸ್ತೆ ಮೇಲೆ ನಮಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ದೀಪಕ್​ ವಿಹಾರದಲ್ಲಿರುವ ಮಸೀದಿ ಬಳಿಯ 30 ಅಡಿ ರಸ್ತೆಯಲ್ಲಿ ನಮಾಜ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಬಹುಸಂಖ್ಯಾತರ ಬಾಹುಳ್ಯ ಪ್ರದೇಶವಾಗಿರುವ ಇಲ್ಲಿ ಪದೇ ಪದೆ ರಸ್ತೆಯಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ನಂತರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ನೆಹರೂ ಗಾರ್ಡನ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವಾರಿ ಪ್ರೇಮ್ ಸಿಂಗ್ ತನಿಖೆ ನಡೆಸಿದ್ದರು. ತನಿಖೆ ನಂತರ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಸೆಕ್ಷನ್ 144 ರ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ. 25ರಿಂದ 30 ಜನ ಕಾಯ್ದೆ ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಕಲಂ 188ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಇಲ್ಲಿ ಆರಂಭದಲ್ಲಿ ಮದರಸಾ ಆರಂಭಿಸುತ್ತೇವೆ ಎಂದು ಮಸೀದಿ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಮಸೀದಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ, ಆದರೂ ಬಹುಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ದೂರಲಾಗಿದೆ.

ಇದನ್ನೂ ಓದಿ: ಜೋಧಪುರಕ್ಕೆ ಬಂದ 50 ಪಾಕಿಸ್ತಾನಿ ಹಿಂದೂಗಳು ವಶಕ್ಕೆ.. ತೀವ್ರ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.