(ಮಧ್ಯಪ್ರದೇಶ): ಅದೆಷ್ಟೋ ನಿರ್ಗತಿಕರು ತಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೊನೆಯ ಮಾರ್ಗವಾಗಿ ಭಿಕ್ಷಾಟನೆಗೆ ಮುಂದಾಗುತ್ತಾರೆ. ಆದರೆ ಎಲ್ಲಾ ಭಿಕ್ಷಾಟನೆ ಪ್ರಕರಣಗಳಲ್ಲಿ ಹಾಗೆ ಇರಬೇಕೆಂದಿಲ್ಲ. ಇಂದೋರ್ನಲ್ಲಿ ನಿರ್ಗತಿಕರಿಗೆ ಮೀಸಲಾಗಿರುವ ಆಶ್ರಯ ಮನೆಯಲ್ಲಿ (ಪುನರ್ವಸತಿ ಶಿಬಿರ) ಆರೈಕೆ ಮಾಡಲಾಗುತ್ತಿರುವ ಭಿಕ್ಷುಕ ರಮೇಶ್ ಯಾದವ್ ಕೋಟ್ಯಧಿಪತಿಯಂತೆ.
ಹೌದು, ರಮೇಶ್ ಯಾದವ್ ಕೋಟಿ-ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ ಕೂಡ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಎನ್‌ಜಿಒ ಕಾರ್ಯಕರ್ತರು ಅವರನ್ನು ಕಂಡು ಆಶ್ರಯ ಮನೆಗೆ ಕರೆತಂದಿದ್ದಾರೆ. ನಂತರ ಎನ್‌ಜಿಒ ಕಾರ್ಯಕರ್ತರು ಅವರ ಕುಟುಂಬವನ್ನು ಸಂಪರ್ಕಿಸಿದಾಗ, ರಮೇಶ್ ಅವರು ದೊಡ್ಡ ಬಂಗಲೆ ಮತ್ತು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆಂಬುದನ್ನು ತಿಳಿದು ಒಂದೊಮ್ಮೆ ಬೆರಗಾಗಿದ್ದಾರೆ.
ಕುಡಿತದ ಚಟವಿದ್ದು, ಅದನ್ನು ತ್ಯಜಿಸಲು ಒಪ್ಪದ ಕಾರಣ ಮನೆಯಿಂದ ಹೊರದಬ್ಬಲ್ಪಟ್ಟಿದ್ದರು. ನಂತರ ಎನ್ಜಿಓ ಕಾರ್ಯಕರ್ತರು ರಮೇಶ್ ಕುಟುಂಬಕ್ಕೆ ಅವರು ಆಶ್ರಯ ಮನೆಯಲ್ಲಿರುವುದಾಗಿ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ರಮೇಶ್ ಕುಟುಂಬಸ್ಥರು ಅವರನ್ನು ಮನೆಗೆ ಕರೆದೊಯ್ಯುವುದಾಗಿ ತಿಳಿಸಿದ್ದು, ಕುಡಿತ ಬಿಡಲು ರಮೇಶ್ ನಿರ್ಧರಿಸಿದ್ದಾರೆ.
ಓದಿ: ಊರು ನದಿಯ ಈ ಕಡೆ, ಶವ ಸಂಸ್ಕಾರಕ್ಕೆ ಜಾಗ ಆ ಕಡೆ: ಕೇಳೋರಿಲ್ಲ ಗ್ರಾಮಸ್ಥರ ಈ ತೊಂದರೆ!!
ಆಶ್ರಯ ಮನೆ ಅಥವಾ ಪುನರ್ವಸತಿ ಶಿಬಿರವು ನಗರದಲ್ಲಿ ಮನೆಯಿಲ್ಲದವರಿಗೆ ಆಶ್ರಯ ಒದಗಿಸುತ್ತಿದೆ. ಶೀತ ವಾತಾವರಣದಲ್ಲಿ ಇರಲು ವಸತಿ ಇರುವವರಿಗೆ ಇದು ಈ ಪುನರ್ವಸತಿ ಶಿಬಿರವು ಆಶ್ರಯ ನೀಡುತ್ತಿದ್ದು, ಉತ್ತಮ ಆಹಾರದೊಂದಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತಿದೆ.