ETV Bharat / bharat

ಹಳ್ಳಿಗಳಲ್ಲಿ ವೈದ್ಯಕೀಯ ಮೂಲಸೌಕರ್ಯ ಕೊರತೆ; ಕೋವಿಡ್​ ತಡೆಗೆ ಜಾಗೃತಿಯೊಂದೇ ದಾರಿ - covid in Village area

ಕೋವಿಡ್​​​ ಗ್ರಾಮೀಣ ಪ್ರದೇಶಗಳಲ್ಲೂ ವಿಪರೀತವಾಗಿ ಉಲ್ಬಣಗೊಂಡಿದ್ದು, ಸೋಂಕು ತಡೆಯುವಲ್ಲಿ ಸರ್ಕಾರ ವಿಫಲವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲ ಗ್ರಾಮಗಳು ಸಾಂಕ್ರಾಮಿಕ ರೋಗ ತಮ್ಮ ಗಡಿ ಪ್ರವೇಶಿಸದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿವೆ.

Villages under the serpent hood of covid
ಕೋವಿಡ್‌ ಬಿಕ್ಕಟ್ಟಿನ ಸುಳಿಯಲ್ಲಿ ಹಳ್ಳಿಗಳು!
author img

By

Published : May 21, 2021, 1:41 PM IST

ಭಾರತದ ಜನಸಂಖ್ಯೆಯ ಶೇ 65 ರಷ್ಟು ಜನರು ವಾಸಿಸುವ ಹಳ್ಳಿಗಳು ಇದೀಗ ಕೋವಿಡ್-19 ಉಲ್ಬಣ ಹಿನ್ನೆಲೆ ಗಂಭೀರ ಸಮಸ್ಯೆ ಎದುರಿಸುತ್ತಿವೆ.

ಮಾರ್ಚ್ ತಿಂಗಳಿನ ಅಂಕಿ-ಅಂಶಗಳ ಪ್ರಕಾರ, ದೇಶದ ಸುಮಾರು 490 ಜಿಲ್ಲೆಗಳಲ್ಲಿ ಶೇಕಡ 10ಕ್ಕಿಂತ ಹೆಚ್ಚು ಕೋವಿಡ್ ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಶೇ 36.08ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶದ್ದಾಗಿವೆ. ಏಪ್ರಿಲ್‌ನಲ್ಲಿ ರೋಗಿಗಳ ಸಂಖ್ಯೆ ಶೇ 45.5ಕ್ಕೆ ಏರಿದ್ದು, ಈ ತಿಂಗಳಲ್ಲಿ ಕೋವಿಡ್ ಉಲ್ಬಣಗೊಂಡ ಗ್ರಾಮಗಳ ಸಂಖ್ಯೆ ಶೇ 48.5ರಷ್ಟು ಹೆಚ್ಚಳ ಕಂಡಿದೆ.

ಕಳೆದ ತಿಂಗಳು ಶೇ 44ರಷ್ಟು ಕೋವಿಡ್ ಪ್ರಕರಣಗಳು ವರದಿ ಆಗುವುದರೊಂದಿಗೆ, ದೇಶದಲ್ಲಿ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲೇ ಹೆಚ್ಚು ಪ್ರಕರಣಗಳಿವೆ ಎಂದು ವರದಿಗಳು ತಿಳಿಸಿವೆ. ಮನೆಗೆ ಬೆಂಕಿ ಬಿದ್ದ ನಂತರ ಬಾವಿ ತೋಡಲು ಹೊರಟಂತೆ, ಇದೀಗ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೆಲ ಸಲಹೆ ನೀಡಿದೆ.

ಇತ್ತೀಚೆಗೆ ಕೇಂದ್ರದಿಂದ ಬಂದ ಮಾರ್ಗಸೂಚಿ ಪ್ರಕಾರ, ರಾಜ್ಯ ಸರ್ಕಾರಗಳು ಹಳ್ಳಿ, ಬುಡಕಟ್ಟು ಪ್ರದೇಶ, ನಗರದ ಹೊರವಲಯಗಳಲ್ಲಿ ಕೋವಿಡ್‌ ಗುಣಲಕ್ಷಣ ಇರುವವರಿಗೆ ಆರೋಗ್ಯ ಸೌಕರ್ಯ ಒದಗಿಸಲು ಮುಂದಾಗುವಂತೆ ಸೂಚಿಸಲಾಗಿದೆ. ಸುಮಾರು ಮೂರನೇ ಎರಡರಷ್ಟು ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯುತ್ತಿರುವ ನಗರ ಪ್ರದೇಶಗಳಲ್ಲಿ ಕೂಡ ವೈದ್ಯಕೀಯ ವ್ಯವಸ್ಥೆ ಕುಸಿಯುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ತಮ್ಮ ಕರ್ತವ್ಯ ಎಂದು ಸರ್ಕಾರಗಳು ಭಾವಿಸಬೇಕಿತ್ತು. ಈ ಜವಾಬ್ದಾರಿ ಮರೆತ ಸರ್ಕಾರ ಈಗ ರೋಗದ ಲಕ್ಷಣ ಕಂಡುಬಂದವರಿಗೆ ರ‍್ಯಾಪಿಡ್​ ಆಂಟಿಜೆನ್‌ ಟೆಸ್ಟ್‌ ನಡೆಸಲು ವೈದ್ಯಕೀಯ ಅಧಿಕಾರಿ ಮತ್ತು ಎಎನ್​​ಎಂಗೆ ತರಬೇತಿ ನೀಡಬೇಕು ಎಂದು ಹೇಳುತ್ತಿದೆ. ಉತ್ತರಾಖಂಡದ ಲಿಬ್ಬೆಹೇರಿ ಎಂಬ ಹಳ್ಳಿಯಲ್ಲಿ, ಒಂದೇ ತಿಂಗಳಲ್ಲಿ ಸುಮಾರು 30 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. ಇಂತಹ ದುರಂತಗಳ ಹಿಂದಿನ ಕಾರಣ ಏನು ಎಂಬುದನ್ನು ಅಲ್ಲಿನ ಆಡಳಿತವು ತಿಳಿದುಕೊಳ್ಳದಿರುವುದು ಅಚ್ಚರಿಯ ಸಂಗತಿ.

ನಮ್ಮ ಗ್ರಾಮಗಳು ಪ್ರಾಥಮಿಕ ಆರೋಗ್ಯ ಸೌಲಭ್ಯಗಳಿಂದ ವಂಚಿತವಾಗಿದ್ದರೂ, ತನ್ನ ಹೊಸ ಮಾರ್ಗಸೂಚಿಗಳಿಂದ ಹಳ್ಳಿಗಳನ್ನು ಸಾಂಕ್ರಾಮಿಕ ರೋಗದಿಂದ ರಕ್ಷಿಸಬಹುದು ಎಂಬ ಕೇಂದ್ರ ಸರ್ಕಾರದ ನಂಬಿಕೆಯು ಎಂಥವರಿಗೂ ಕೂಡ ಆಶ್ಚರ್ಯ ತರಿಸದಿರದು. ಪಂಚಾಯತ್​​ ರಾಜ್ ದಿವಸ್‌ ಅಂಗವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವೈರಾಣು ವಿರುದ್ಧದ ಈ ಹೋರಾಟದಲ್ಲಿ ಯಾರಾದರೂ ಮೊದಲು ಜಯಶಾಲಿಯಾಗುತ್ತಾರೆಂದರೆ ಅದು ಭಾರತದ ಹಳ್ಳಿಗಳು ಮಾತ್ರ ಎಂಬ ವಿಶ್ವಾಸ ನಮ್ಮಲ್ಲಿದೆ. ಹಳ್ಳಿಗಳ ಜನ ದೇಶ ಮತ್ತು ಜಗತ್ತಿಗೆ ದಾರಿ ತೋರಿಸುತ್ತಾರೆ ಎಂದು ಹೇಳಿದ್ದರು. ನಮ್ಮ ನಾಯಕರು ರೋಗ ತಡೆಯಲು ದೃಢವಾದ ಮುಂದಾಲೋಚನಾ ಕ್ರಮಗಳನ್ನು ಕೈಗೊಂಡು ಹಳ್ಳಿಗಳನ್ನು ಕಾಪಾಡುವ ಬದಲು, ಭಾಷಣಗಳೊಂದಿಗೆ ಕಾಲ ಕಳೆದಿದ್ದರಿಂದ ಗ್ರಾಮೀಣ ಪ್ರದೇಶಗಳು ಸಾವಿನ ರುದ್ರ ತಾಂಡವಕ್ಕೆ ಸಾಕ್ಷಿ ಆಗುತ್ತಿವೆ.

ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಂತಹ ರಾಜ್ಯಗಳ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ. ದೇಶದ ಎಲ್ಲಾ ಆರೋಗ್ಯ ಉಪಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ವೈದ್ಯಕೀಯ ಸೌಕರ್ಯಗಳ ಕೊರತೆಯ ಸುಳಿಗೆ ಸಿಲುಕಿವೆ ಎಂದು ಕೇಂದ್ರ ಸರ್ಕಾರ ಒಂದು ತಿಂಗಳ ಹಿಂದೆ ಪ್ರಕಟಿಸಿದೆ. ಇದರ ನಡುವೆಯೂ ಆರೋಗ್ಯ ಕೇಂದ್ರಗಳ ನೆರವಿನಿಂದ ಕೋವಿಡ್‌ ಬಗ್ಗು ಬಡಿಯುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ.

ಪ್ರತಿ ಆರೋಗ್ಯ ಉಪ ಕೇಂದ್ರದ ವ್ಯಾಪ್ತಿಯಲ್ಲಿ ನಾಲ್ಕು ಗ್ರಾಮಗಳು ಬರುತ್ತವೆ. ಅದೇ ರೀತಿ 27 ಗ್ರಾಮಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಸಮುದಾಯ ಆರೋಗ್ಯ ಕೇಂದ್ರದಡಿ 127 ಗ್ರಾಮಗಳು ವೈದ್ಯಕೀಯ ಸೌಲಭ್ಯ ಪಡೆಯಬೇಕು. ಈ ಕೇಂದ್ರಗಳಲ್ಲಿ 80,600 ಹುದ್ದೆಗಳು ಖಾಲಿ ಇದ್ದು, ಅವು ಬಲಹೀನವಾಗಿವೆ. ಶೇ 76ರಷ್ಟು ವಿಶೇಷ ವೈದ್ಯಕೀಯ ಹುದ್ದೆಗಳು ಭರ್ತಿಯಾಗದೇ ಉಳಿದಿರುವ ಆರೋಗ್ಯ ಕೇಂದ್ರಗಳು ನಮ್ಮ ಗ್ರಾಮಗಳನ್ನು ಕೋವಿಡ್‌ ಸಾಂಕ್ರಾಮಿಕದಿಂದ ರಕ್ಷಿಸಬಲ್ಲವೇ? ನಗರಗಳಲ್ಲಿನ ವೈದ್ಯಕೀಯ ಸಿಬ್ಬಂದಿಯೇ ಕೊರೊನಾ ರೋಗಿಗಳಿಗೆ ನಿರಂತರ ವೈದ್ಯಕೀಯ ಸೇವೆ ಒದಗಿಸಲು ಹೆಣಗುತ್ತಿರುವಾಗ ಗ್ರಾಮೀಣ ಆರೋಗ್ಯ ಕೇಂದ್ರಗಳು ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವೇ ಎಂಬುದು ಎಲ್ಲರಲ್ಲಿ ಮೂಡುವ ಪ್ರಶ್ನೆಯಾಗಿದೆ.

ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲ ಗ್ರಾಮಗಳು ಸಾಂಕ್ರಾಮಿಕ ರೋಗ ತಮ್ಮ ಗಡಿ ಪ್ರವೇಶಿಸದಂತೆ, ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಿವೆ. ಇಂತಹ ಜಾಗೃತಿ ಮಾತ್ರ ಹಳ್ಳಿಗಳನ್ನು ಕೋವಿಡ್‌ ದಾಳಿಯಿಂದ ರಕ್ಷಿಸಲು ಸಾಧ್ಯ ಎನ್ನಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.