ETV Bharat / bharat

ಪಲ್ಟಿಯಾದ ವಾಹನ: ನಾಲ್ಕು ಕ್ವಿಂಟಾಲ್​ ಮೀನು ಲೂಟಿ ಮಾಡಿದ ಸ್ಥಳೀಯರು - ಪಲ್ಟಿಯಾದ ಮೀನು ತುಂಬಿದ್ದ ವಾಹನ

ಮೀನು ತುಂಬಿದ್ದ ವಾಹನ ಪಲ್ಟಿ- ನಾಲ್ಕು ಕ್ವಿಂಟಾಲ್​ ಮೀನು ಕದ್ದೊಯ್ದ ಜನ- ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಕೃತ್ಯ

ನಾಲ್ಕು ಕ್ವಿಂಟಾಲ್​ ಲೂಟಿ ಮಾಡಿದ ಸ್ಥಳೀಯರು
ನಾಲ್ಕು ಕ್ವಿಂಟಾಲ್​ ಲೂಟಿ ಮಾಡಿದ ಸ್ಥಳೀಯರು
author img

By

Published : Jul 12, 2022, 5:58 PM IST

ಅರಾರಿಯಾ (ಬಿಹಾರ ): ಪೂರ್ನಿಯಾದ ಕಸ್ಬಾ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ವಾಲಿ ಬಳಿ ಮೀನಿನ ವಾಹನ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ದೌಡಾಯಿಸಿ ಬುಟ್ಟಿಗಳಲ್ಲಿ ಎಲ್ಲಾ ಮೀನುಗಳನ್ನು ತುಂಬಿಕೊಂಡು ಹೋಗಿದ್ದಾರೆ.

ಪುರ್ನಿಯಾ ಮಂಡಿಗೆ ಮೀನುಗಳನ್ನು ವಾಹನದ ಮೂಲಕ ತರಲಾಗುತ್ತಿತ್ತು. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗೆ ಮೀನುಗಳೆಲ್ಲಾ ಸ್ಥಳೀಯರ ಮನೆ ಸೇರಿದ್ದವು. ಜನರು ಸುಮಾರು 4 ಕ್ವಿಂಟಾಲ್ ಮೀನನ್ನು ಲೂಟಿ ಮಾಡಿದ್ದಾರೆ ಎನ್ನಲಾಗ್ತಿದೆ.

ನಾಲ್ಕು ಕ್ವಿಂಟಾಲ್​ ಲೂಟಿ ಮಾಡಿದ ಸ್ಥಳೀಯರು

ಅರಾರಿಯಾದಿಂದ ಮೀನುಗಳನ್ನು ತುಂಬಿಕೊಂಡು ಪೂರ್ನಿಯಾಗೆ ಬರುತ್ತಿರುವುದಾಗಿ ಚಾಲಕ ತಿಳಿಸಿದ್ದಾನೆ. ನಂತರ ನಿದ್ರೆ ಸಮಸ್ಯೆಯಿಂದ ಪಿಕಪ್ ವಾಹನವು ಡಿವೈಡರ್‌ಗೆ ಡಿಕ್ಕಿ ಹೊಡೆದು ಎನ್‌ಎಚ್ 57 ರಲ್ಲೇ ಪಲ್ಟಿಯಾಗಿದೆ. ಅವರ ವಾಹನದಲ್ಲಿ ಸುಮಾರು 6 ಕ್ವಿಂಟಾಲ್ ಮೀನುಗಳಿದ್ದವು ಎನ್ನಲಾಗ್ತಿದೆ. ಇದರಲ್ಲಿ ಕೇವಲ 2 ಕ್ವಿಂಟಾಲ್ ಮೀನು ಮಾತ್ರ ಉಳಿದುಕೊಂಡಿದೆ. ಜನರು 4 ಕ್ವಿಂಟಾಲ್ ಮೀನು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ: ಬಿಜೆಪಿಗೆ ಮಮತಾ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.