ETV Bharat / bharat

ಸೋತು ಗೆದ್ದ ಅಭ್ಯರ್ಥಿ..ಚುನಾವಣೆಯಲ್ಲಿ 1 ವೋಟಿಂದ ಸೋತಿದ್ದಕ್ಕೆ ದುಬಾರಿ ಗಿಫ್ಟ್​ ನೀಡಿದ ಜನರು

ಸರಪಂಚ್​ ಚುನಾವಣೆಯಲ್ಲಿ ಒಂದೇ ಒಂದು ಮತದಿಂದ ಸೋತ ಎಂಬ ಕಾರಣಕ್ಕಾಗಿ ಊರ ಜನರು ಪರಾಜಿತ ಅಭ್ಯರ್ಥಿಗೆ ಭರ್ಜರಿ ಗಿಫ್ಟ್​ ನೀಡಿದ್ದಾರೆ. ಇದನ್ನು ಕಂಡು ಅಭ್ಯರ್ಥಿಯೇ ದಂಗಾಗಿದ್ದಾನೆ. ಇದು ಎಲ್ಲೆಡೆ ಚರ್ಚಾ ವಿಷಯವಾಗಿದೆ.

losing-sarpanch-election-in-haryana
ದುಬಾರಿ ಕಾರು, ಭೂಮಿ ಗಿಫ್ಟ್​ ನೀಡಿದ ಜನರು
author img

By

Published : Nov 26, 2022, 10:42 PM IST

Updated : Nov 26, 2022, 11:05 PM IST

ಫತೇಹಾಬಾದ್:(ಹರಿಯಾಣ): ಚುನಾವಣೆಯಲ್ಲಿ ಸೋಲಿಸುವ, ಗೆಲ್ಲುವ ರಣತಂತ್ರಗಳು ಇದ್ದೇ ಇರುತ್ತವೆ. ಗೆದ್ದ ಅಭ್ಯರ್ಥಿ ನಗೆ ಬೀರಿದರೆ, ಸೋತವರಿಗೆ ಪೇಚು ಮೋರೆ ಕಟ್ಟಿಟ್ಟಬುತ್ತಿ. ಹರಿಯಾಣದಲ್ಲಿ ನಡೆದ ಸರಪಂಚ್​ ಚುನಾವಣೆಯಲ್ಲಿ ಅಭ್ಯರ್ಥಿ ಕೇವಲ 1 ವೋಟಿನಿಂದ ಸೋತಿದ್ದಕ್ಕಾಗಿ ಊರವರೆಲ್ಲ ಸೇರಿಕೊಂಡು ಸೋತ ಹುರಿಯಾಳಿಗೆ 11.11 ಲಕ್ಷ ರೂಪಾಯಿ ನಗದು, ಸ್ವಿಫ್ಟ್​ ಡಿಸೈರ್​ ಕಾರು, ಒಂದೂವರೆ ಎಕರೆ ಭೂಮಿ ನೀಡಿದ್ದಾರೆ.

ಇದನ್ನು ಓದಿದರೆ ಆಶ್ಚರ್ಯವಾಗದೇ ಇರದು. ಹರಿಯಾಣದ ಫತೇಹಾಬಾದ್​ ನಧೋಡಿ ಗ್ರಾಮದ ಜನರೇ ಭ್ರಾತೃತ್ವ ಮೆರೆದು ಸುದ್ದಿಯಾದವರು. ಗ್ರಾಮದ ಸರಪಂಚ್​ ಹುದ್ದಗೆ ಇತ್ತೀಚೆಗೆ ಚುನಾವಣೆ ನಡೆದಿದೆ. ನರೇಂದ್ರ ಮತ್ತು ಸುರೇಂದ್ರ ಎಂಬಿಬ್ಬರು ಕಣದಲ್ಲಿ ಸ್ಪರ್ಧಿಸಿದ್ದರು.

ಗ್ರಾಮದ ಒಟ್ಟು 5085 ಮತಗಳಲ್ಲಿ 4416 ಮತದಾನವಾಗಿದೆ. ಇದರಲ್ಲಿ ಸುಂದರ್ ಎಂಬಾತನಿಗೆ 2200 ಮತಗಳು ಬಿದ್ದಿದ್ದರೆ, ನರೇಂದ್ರನಿಗೆ 2201 ಮತಗಳು ಬಂದಿವೆ. ಕೇವಲ ಒಂದೇ ಒಂದು ಮತದಿಂದ ಸುರೇಂದ್ರ ಪರಾಜಯ ಹೊಂದಿದ್ದಾನೆ. ಇದರಿಂದ ಭಾರೀ ಬೇಸರಕ್ಕೀಡಾಗಿದ್ದ ಅವರಿಗೆ ಗ್ರಾಮಸ್ಥರು ಸಂತೈಸಿ, ದೊಡ್ಡ ಮೊತ್ತದ ಉಡುಗೊರೆಯನ್ನೇ ನೀಡಿದ್ದಾರೆ.

11 ಲಕ್ಷ ನಗದು, ಕಾರಿಗಾಗಿ ಊರ ಜನರು ದೇಣಿಗೆ ನೀಡಿದರೆ, ಗ್ರಾಮದ ಒಬ್ಬಾತ ತಮ್ಮ ಒಂದೂವರೆ ಎಕರೆ ಜಮೀನನ್ನೇ ಪರಾಜಿತ ಅಭ್ಯರ್ಥಿಗೆ ನೀಡಿ ಔದಾರ್ಯ ಮೆರೆದಿದ್ದಾನೆ. ಗ್ರಾಮದ ಜನರ ಪ್ರೀತಿ ಕಂಡು ಸೋತ ಅಭ್ಯರ್ಥಿ ಸುರೇಂದ್ರ ಇದೇ ನನ್ನ ದೊಡ್ಡ ಗೆಲುವಾಗಿದೆ. ಗ್ರಾಮದ ಅಭಿವೃದ್ಧಿಗೆ ಎಲ್ಲ ರೀತಿಯಿಂದ ಶ್ರಮಿಸುವುದಾಗಿ ಹೇಳಿದ್ದಾರೆ. ಇದು ಜಿಲ್ಲೆಯಾದ್ಯಂತ ಮನೆ ಮಾತಾಗಿದೆ.

ಓದಿ: ಮತದಾರರ ಪರಿಷ್ಕರಣೆ ಅಕ್ರಮ: ಬೂತ್ ಮಟ್ಟದ ಅಧಿಕಾರಿಗಳು ಸೇರಿ ಮತ್ತೆ ಐವರ ಬಂಧನ

Last Updated : Nov 26, 2022, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.