ETV Bharat / bharat

ಕಾನೂನು ಕೈಗೆತ್ತಿಕೊಂಡ  ಗ್ರಾಮಸ್ಥರು.. 'ತಲೆಗೆ ತಲೆ' ತೀರ್ಪು ಕೊಟ್ಟ ಪಂಚಾಯ್ತಿ.. ಕೊಲೆ ಮಾಡಿದ ಜನರು! - murder in Andhra Pradesh

ಓರ್ವರ ಕೊಲೆ ಕಾರಣ ಗ್ರಾಮಸ್ಥರೇ ಕಾನೂನನ್ನು ಕೈಗೆತ್ತಿಕೊಂಡು ಮತ್ತೊಬ್ಬ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಕಳೆದ ವಾರ ನಡೆದಿದೆ. ಈ ಕುರಿತು ಘಟನೆಯಲ್ಲಿ ಭಾಗಿಯಾದ 16 ಸದಸ್ಯರ ಮೇಲೆ ಪ್ರಕರಣ ದಾಖಲಾಗಿದೆ.

Andhra Pradesh murder case
ಆಂಧ್ರಪ್ರದೇಶ ಕೊಲೆ ಪ್ರಕರಣ
author img

By

Published : Jun 2, 2022, 6:39 PM IST

ಆಂಧ್ರಪ್ರದೇಶ: ಆಂಧ್ರಪ್ರದೇಶದ ಪಾರ್ವತಿಪುರಂ ಮನ್ಯಂ ಜಿಲ್ಲೆಯ ಸೀತಂಪೇಟಾ ಮಂಡಲದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಒಬ್ಬರ ಕೊಲೆ ಕಾರಣ ಗ್ರಾಮಸ್ಥರೇ ಕಾನೂನು ಕೈಗೆತ್ತಿಕೊಂಡು ಮತ್ತೋರ್ವ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಕಳೆದ ವಾರ ನಡೆದಿದೆ. ಪಾಲಕೊಂಡ ಡಿಎಸ್ಪಿ ಎಂ. ಶ್ರಾವಣಿ ಪ್ರಕರಣದ ವಿವರಗಳನ್ನು ಬುಧವಾರದಂದು ಬಹಿರಂಗಪಡಿಸಿದ್ದಾರೆ.

ಮೇ.27 ರಂದು ಸೀತಂಪೇಟ ಮಂಡಲದ ರೇಗುಲಗುಡದಲ್ಲಿ ನಡೆದ ಮದುವೆ ಸಮಾರಂಭದಲ್ಲಿ, ಸವರ್​ ಗಯಾ ಎಂಬುವವರ ಪುತ್ರಿ ಪದ್ಮಾಗೆ ಮಾನಸಿಕ ಅಸ್ವಸ್ತ ವ್ಯಕ್ತಿ ಸವರ್ ಸಿಂಗಣ್ಣ ಹೊಡೆದಿದ್ದಾನೆ. ಈ ವೇಳೆ, ಸವರ್​ ಗಯಾ ಸಿಂಗಣ್ಣನನ್ನು ಕೆಳಕ್ಕೆ ತಳ್ಳಿದ್ದಾನೆ. ಸಿಟ್ಟಿಗೆದ್ದ ಸಿಂಗಣ್ಣ ದೊಡ್ಡ ಕೋಲಿನಿಂದ ಹಲ್ಲೆ ನಡೆಸಿದ್ದು, ಸವರ್​ ಗಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸವರ್​ ಗಯಾ ಅವರ ಮಕ್ಕಳು ಹಾಗೂ ಸ್ಥಳೀಯರು ಸೇರಿ ಸಿಂಗಣ್ಣನ ಕೈ - ಕಾಲು ಕಟ್ಟಿ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಬಳಿಕ ಸಿಂಗಣ್ಣನ ಕುಟುಂಬಸ್ಥರು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಗ್ರಾಮಸ್ಥರು, ಕುಟುಂಬಸ್ಥರು ಪಂಚಾಯಿತಿ ಸೇರಿ ಚರ್ಚೆ ನಡೆಸಿದ್ದಾರೆ. ತಮ್ಮ ತಂದೆ ತೀರಿಕೊಂಡಂತೆ ಸಿಂಗಣ್ಣ ಕೂಡ ಸಾಯಬೇಕೆಂಬ ಒತ್ತಾಯ ಹಾಕಿದ್ದಾರೆ. ಇಲ್ಲದಿದ್ದರೆ ತಪ್ಪಿತಸ್ಥರ ಕುಟುಂಬದವರನ್ನೆಲ್ಲ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಗ್ರಾಮದ ಮುಖಂಡರೆಲ್ಲರೂ ಸೇರಿ 'ತಲೆಗೆ ತಲೆ' ಎಂದು ತೀರ್ಪು ನೀಡಿದ್ದಾರೆ. ಸಿಂಗಣ್ಣನನ್ನು ಕೊಲ್ಲಲು ತೀರ್ಪು ಕೊಟ್ಟರು.

ಇದನ್ನೂ ಓದಿ: ಜೋಡಿ ಕೊಲೆ ಪ್ರಕರಣದ ಆರೋಪಿ ಹತ್ಯೆ: ಇಬ್ಬರ ಬಂಧನ

ಸಿಂಗಣ್ಣನ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಬಂದಾಗ, ಸಿಂಗಣ್ಣನನ್ನು ಕೊಲ್ಲಲು ಆತನ ಕುಟುಂಬಸ್ಥರು ಸಹ ಒಪ್ಪಿದ್ದಾರೆ. ಮೇ. 28ರಂದು ಸಿಂಗಣ್ಣನಿಗೆ ವಿಷ ನೀಡಲಾಗಿತ್ತು. ಆದರೆ, ಸಿಂಗಣ್ಣ ಬದುಕುಳಿದ ಕಾರಣ ನೇಣು ಬಿಗಿದು ಸಾಯಿಸಲಾಯಿತು. ಯಾರಿಗೂ ತಿಳಿಸದೇ ಶವ ಸುಟ್ಟು ಹಾಕಲಾಯಿತು. ಆರಂಭದಲ್ಲಿ ಇದೊಂದು ಸಾಮಾನ್ಯ ಸಾವು ಎಂದು ಭಾವಿಸಲಾಗಿತ್ತು.

ಗ್ರಾಮದಲ್ಲಿರುವ ಕಂದಾಯ ಸಿಬ್ಬಂದಿ ಗ್ರಾಮಸ್ಥರಿಂದ ಈ ಬಗ್ಗೆ ಮಾಹಿತಿ ಪಡೆದರು. ಬಳಿಕ ಈ ರಹಸ್ಯವನ್ನು ಭೇದಿಸಲಾಯಿತು. ಪಾಲಕೊಂಡ ಪ್ರಮುಖ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದು, ಸವರ್ ಸಿಂಗಣ್ಣ ಮತ್ತು ಗಯಾ ಸಿಂಗಣ್ಣನ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಘಟನೆಯಲ್ಲಿ ಭಾಗಿಯಾದ 16 ಸದಸ್ಯರ ಮೇಲೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.