ಜಮ್ಮು: ಇಂದು ಭಾರತೀಯ ಸೇನೆಗೆ ವಿಶೇಷ ದಿನ. 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆ ಐತಿಹಾಸಿಕ ವಿಜಯ ಸಾಧಿಸಿತ್ತು. ಡಿಸೆಂಬರ್ 3ರಿಂದ 13 ದಿನಗಳ ಕಾಲ ನಡೆದ ಸಮರ ಅಧಿಕೃತವಾಗಿ ಡಿ. 16ಕ್ಕೆ ಅಂತ್ಯಗೊಂಡು ಬಾಂಗ್ಲಾದೇಶ ಸ್ವಾತಂತ್ರ್ಯ ರಾಷ್ಟ್ರವಾಯಿತು. ಈ ವಿಜಯದ ಸಂಕೇತವಾಗಿ ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಜಯ್ ದಿವಸ್ ಆಚರಿಸಲಾಗುತ್ತದೆ. ಅಂದರಂತೆ ಇಂದು ಭಾರತೀಯ ಸೇನೆ, ವೆಸ್ಟರ್ನ್ ಕಮಾಂಡ್ ಬಲಿದಾನ್ ಸ್ತಂಭ್‌ನಲ್ಲಿ ವಿಜಯ್ ದಿವಸ್ ಆಚರಣೆ ನಡೆಯಿತು. ಜಮ್ಮುವಿನ ಸುಂಜುವಾನ್‌ನ ಜೋರಾವರ್ ಕ್ರೀಡಾಂಗಣದಲ್ಲಿ ಮೆಗಾ ಎಕ್ಸ್-ಸರ್ವಿಸ್‌ಮೆನ್ ರ್ಯಾಲಿ ನಡೆಯಿತು.
ಇದನ್ನೂ ಓದಿ: 1971ರ ಭಾರತ-ಪಾಕ್ ಯುದ್ಧಕ್ಕೆ 51 ವರ್ಷ ಪೂರ್ಣ: ಹುತಾತ್ಮ ಯೋಧರಿಗೆ ಗೌರವ