ETV Bharat / bharat

ಕಳ್ಳತನ ಮಾಡಲು ಪಿಸ್ತೂಲ್​ ಹಿಡಿದು ಬಂದ ಯುವಕನ ಬಂಧನ.. ಪೊಲೀಸರಿಗೊಪ್ಪಿಸಿದ ವ್ಯಾಪಾರಿಗಳು.. - ಪಿಸ್ತೂಲ್ ಹಿಡಿದು ಮಾರುಕಟ್ಟೆ ಪ್ರವೇಶ

ವ್ಯಾಪಾರಿಗಳ ಬುದ್ಧಿವಂತಿಕೆಯಿಂದ ದೊಡ್ಡ ದರೋಡೆ ತಪ್ಪಿದಂತಾಗಿದೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆತನ ಪಕ್ಕದಲ್ಲೇ ಪಿಸ್ತೂಲ್​ ಕೂಡ ಬಿದ್ದಿತ್ತು. ಪೊಲೀಸರು ಅದನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ..

Mar arrest
Mar arrest
author img

By

Published : Oct 12, 2021, 8:54 PM IST

ನವದೆಹಲಿ(ಗಾಜಿಯಾಬಾದ್​) : ಕಳ್ಳತನ ಮಾಡುವ ಉದ್ದೇಶದಿಂದ ಕೈಯಲ್ಲಿ ಪಿಸ್ತೂಲ್​ ಹಿಡಿದು ಮಾರುಕಟ್ಟೆ ಪ್ರವೇಶ ಮಾಡಿದ್ದ ವ್ಯಕ್ತಿಯೋರ್ವನನ್ನ ಬಂಧಿಸುವಲ್ಲಿ ವ್ಯಾಪಾರಿಗಳು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಆತನನ್ನ ಪೊಲೀಸರಿಗೊಪ್ಪಿಸಿದ್ದಾರೆ.

ಕಳ್ಳತನ ಮಾಡಲು ಪಿಸ್ತೂಲ್​ ಹಿಡಿದು ಬಂದ ಯುವಕನ ಬಂಧನ..

ಗಾಜಿಯಾಬಾದ್​​ನ ಸಾಹಿಬಾಬಾದ್​ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್​ ಮಾರ್ಕೆಟ್​​ನಲ್ಲಿರುವ ಅಂಗಡಿ ಬಳಿ ಬಂದಿರುವ ಆತನನ್ನ ವ್ಯಾಪಾರಿಗಳು ಬಂಧಿಸಿದ್ದಾರೆ.

ಹಗ್ಗದ ಸಹಾಯದಿಂದ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಇದರ ವಿಡಿಯೋ ಸದ್ಯ ವೈರಲ್​​ ಆಗಿದೆ. ಕಳ್ಳತನ ಮಾಡುವ ಉದ್ದೇಶದಿಂದ ಯುವಕರ ಗುಂಪು ಈ ಮಾರುಕಟ್ಟೆಗೆ ಲಗ್ಗೆ ಹಾಕಿತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿರಿ: ಮನೆಯಲ್ಲಿ ಐವರಿದ್ದರೂ, ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ BJP ಅಭ್ಯರ್ಥಿಗೆ ಒಂದೇ ವೋಟ್!

ವ್ಯಾಪಾರಿಗಳ ಬುದ್ಧಿವಂತಿಕೆಯಿಂದ ದೊಡ್ಡ ದರೋಡೆ ತಪ್ಪಿದಂತಾಗಿದೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆತನ ಪಕ್ಕದಲ್ಲೇ ಪಿಸ್ತೂಲ್​ ಕೂಡ ಬಿದ್ದಿತ್ತು. ಪೊಲೀಸರು ಅದನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಲೂಟಿ ಮಾಡುವ ಉದ್ದೇಶದಿಂದ ಆರೋಪಿಗಳು ಈ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಆರೋಪಿಯನ್ನ ಬಂಧಿಸಿರುವ ಪೊಲೀಸರು ಇದೀಗ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.