ಚಿರತೆಗಳು ಅತ್ಯುತ್ತಮ ಪರ್ವತಾರೋಹಿಗಳು. ಅವುಗಳು ಎಷ್ಟು ಚುರುಕುಬುದ್ಧಿ ಮತ್ತು ಬಲಶಾಲಿಗಳೆಂದರೆ ಕೆಲವೇ ಸೆಕೆಂಡುಗಳಲ್ಲಿ ಮರಗಳನ್ನು ಹತ್ತಿ ಬೇಟೆಯಾಡಬಲ್ಲವು. ಈ ಚಿರತೆಗಳು ಕೋತಿಗಳು ಮತ್ತು ಗೂಬೆಗಳಂತೆ ಬೇಟೆಗಾಗಿ ಮರ ಹತ್ತುತ್ತವೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವರು ಲೇಟೆಸ್ಟ್ ವಿಡಿಯೋ ಹಂಚಿಕೊಂಡಿದ್ದು ಇಂಟರೆಸ್ಟಿಂಗ್ ಆಗಿದೆ. ಇಲ್ಲಿ ಸುಮಾರು 70-80 ಅಡಿಗಳ ಎತ್ತರದಲ್ಲಿರುವ ಮರದ ತುದಿಯಲ್ಲಿ ಚಿರತೆ ಬೀಡು ಬಿಟ್ಟಿದೆ.
-
Wildlife management is a field of daily adventure. Now imagine how this leopard reached there & surrounded by sea of people. We had to rescue him. pic.twitter.com/qvqSdKTzWD
— Parveen Kaswan, IFS (@ParveenKaswan) September 19, 2022 " class="align-text-top noRightClick twitterSection" data="
">Wildlife management is a field of daily adventure. Now imagine how this leopard reached there & surrounded by sea of people. We had to rescue him. pic.twitter.com/qvqSdKTzWD
— Parveen Kaswan, IFS (@ParveenKaswan) September 19, 2022Wildlife management is a field of daily adventure. Now imagine how this leopard reached there & surrounded by sea of people. We had to rescue him. pic.twitter.com/qvqSdKTzWD
— Parveen Kaswan, IFS (@ParveenKaswan) September 19, 2022
ವನ್ಯಜೀವಿ ನಿರ್ವಹಣೆ ದೈನಂದಿನ ಸಾಹಸದ ಕ್ಷೇತ್ರ. ಈ ಚಿರತೆ ಅಲ್ಲಿಗೆ ಹೇಗೆ ತಲುಪಿತು ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಚಿರತೆ ಇರುವ ಮರದ ಕೆಳಗೆ ಜನರು ದೊಡ್ಡ ಪ್ರಮಾಣದಲ್ಲಿ ಸುತ್ತುವರಿದಿದ್ದಾರೆ. ಸುಮಾರು 7-8 ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ರಕ್ಷಿಸಲಾಗಿದೆ. ಇದು 2-3 ತಿಂಗಳ ಹಳೆಯ ಪ್ರಕರಣವಾಗಿದೆ ಎಂದು ಅಧಿಕಾರಿ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರಿಗೆ ದರ್ಶನ ನೀಡಿದ ಜೋಡಿ ಚಿರತೆ: ಕೆ.ಗುಡಿಯಲ್ಲಿ ಮಿಂಚಿ ಮರೆಯಾದ ಹುಲಿರಾಯ