ETV Bharat / bharat

ಶ್ರೀನಗರದಲ್ಲಿ ಉಗ್ರರ ದಾಳಿ.. ಪೊಲೀಸ್​ ಅಧಿಕಾರಿಗೆ ಗುಂಡು ಹಾರಿಸಿದ ವಿಡಿಯೋ ಹರಿಬಿಟ್ಟ ಉಗ್ರರು ​

author img

By

Published : Jul 13, 2022, 12:38 PM IST

ಶ್ರೀನಗರದ ಲಾಲ್​ ಬಜಾರ್​ನಲ್ಲಿ ಗುಂಡಿನ ದಾಳಿ ನಡೆಸಿದ್ದ ಉಗ್ರರು-ಓರ್ವ ಪೊಲೀಸ್ ಅಧಿಕಾರಿ ಹುತಾತ್ಮ- ಭಯೋತ್ಪಾದಕರಿಂದಲೇ ಕೃತ್ಯದ ವಿಡಿಯೋ ವೈರಲ್​

ಶ್ರೀನಗರದ ಲಾಲ್​ ಬಜಾರ್​ ಗುಂಡಿನ ದಾಳಿ ದೃಶ್ಯ

ಶ್ರೀನಗರ(ಜಮ್ಮು ಕಾಶ್ಮೀರ್​): ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಲಾಲ್‌ಬಜಾರ್‌ನಲ್ಲಿ ಪೊಲೀಸರ ಮೇಲೆ ನಿನ್ನೆ ಸಂಜೆ ಉಗ್ರರು ನಡೆಸಿದ ದಾಳಿಯ ವಿಡಿಯೋ ಬಹಿರಂಗವಾಗಿದೆ. ದಾಳಿಯಲ್ಲಿ ಸಹಾಯಕ ಸಬ್ ಇನ್ಸ್​ಪೆಕ್ಟರ್ ಮುಷ್ತಾಕ್ ಅಹ್ಮದ್ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಈಗ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ದಾಳಿಯ ಬಗ್ಗೆ ಐಸಿಸ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಇದರಲ್ಲಿ ಉಗ್ರನೊಬ್ಬ ಪೊಲೀಸ್ ವಾಹನದ ಮೇಲೆ ಗುಂಡು ಹಾರಿಸಿದ್ದಾನೆ. ಅಷ್ಟೇ ಅಲ್ಲದೇ ವಾಹನದ ಹೊರಗೆ ನಿಂತಿದ್ದ ಪೊಲೀಸರ ಮೇಲೆಯೂ ಸಹ ಗುಂಡುಗಳು ಹಾರಿಸಿದ್ದಾನೆ. ಆದ್ರೆ ಪೊಲೀಸರಿಗೆ ಗುಂಡೇಟು ಬಿದ್ದಿದ್ದು, ತಮ್ಮನ್ನು ರಕ್ಷಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಲಾಲ್ ಬಜಾರ್ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಶಂಕಿತ ಉಗ್ರರು ಪೊಲೀಸ್ ಚೆಕ್ ಪೋಸ್ಟ್ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಮೂವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಆದ್ರೆ ಇನ್ಸ್‌ಪೆಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಮೃತರು ಕೋಲ್ಗಾಕಟ್ ಜಿಲ್ಲೆಯ ನಿವಾಸಿಯಾಗಿದ್ದಾರೆ.

ಶ್ರೀನಗರದ ಲಾಲ್​ ಬಜಾರ್​ ಗುಂಡಿನ ದಾಳಿ ದೃಶ್ಯ

ಓದಿ: ಉಗ್ರರ ಅಟ್ಟಹಾಸ: ಪೊಲೀಸ್ ಅಧಿಕಾರಿ ಹುತಾತ್ಮ, ಇಬ್ಬರು ಪೇದೆಗಳಿಗೆ ಗಾಯ

ಮಂಗಳವಾರ ಮಧ್ಯಾಹ್ನ ಶ್ರೀನಗರದ ಲಾಲ್ ಬಜಾರ್ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಬ್ಯಾರಿಕೇಡ್ ಪಾರ್ಟಿಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರನ್ನು ಚಿಕಿತ್ಸೆಗಾಗಿ ಹತ್ತಿರದ ಸೂರಾ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಹೆಚ್ಚುವರಿ ಮಹಾನಿರ್ದೇಶಕ (ಕಾಶ್ಮೀರ ವಲಯ) ವಿಜಯ್ ಕುಮಾರ್ ಮಾತನಾಡಿ, ದಾಳಿಯಲ್ಲಿ ಓರ್ವ ಪೊಲೀಸ್ ಎಎಸ್‌ಐ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈದ್-ಉಲ್-ಅಧಾ ಮೂರನೇ ದಿನವಾದ್ದರಿಂದ ಭಾರಿ ಜನಸಂದಣಿ ಇತ್ತು. ಜನಸಂದಣಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರ ಸಣ್ಣ ತಂಡವನ್ನು ನಿಯೋಜಿಸಲಾಗಿತ್ತು. ಇಲ್ಲಿ ಒಬ್ಬ ಎಎಸ್ಐ ಮತ್ತು ಇಬ್ಬರು ಪೊಲೀಸರು ತಂಡದಲ್ಲಿದ್ದರು ಎಂದು ಹೇಳಿದರು.

ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ದಾಳಿ ಮಾಡಲು ಉಗ್ರರು ಸಣ್ಣ ಚೆಕ್‌ಪೋಸ್ಟ್‌ಗಳು ಮತ್ತು ಜನಸಂದಣಿಯ ಲಾಭವನ್ನು ಪಡೆದರು. ದಾಳಿಯಲ್ಲಿ ಎಎಸ್‌ಐ ಮುಷ್ತಾಕ್ ಅಹ್ಮದ್ ಹುತಾತ್ಮರಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.