ETV Bharat / bharat

ಕಣ್ಣಿಗೆ ಸುಂದರ, ಪ್ರಕೃತಿಯ ಅದ್ಭುತ ಈ ‘ಮೇಘ ಜಲಪಾತ’ - ಮಿಜೋರಾಂನಲ್ಲಿ ಮೋಡಗಳ ಜಲಪಾತ

ಕ್ಲಿಯರ್​ ಆಗಿರುವ ವಾತಾವರಣದ ಮಧ್ಯೆ ಇದ್ದಕ್ಕಿದ್ದಂತೆ ಭಾರಿ ಮಳೆ ಅಥವಾ ಹಿಮ ಮಳೆ ಉಂಟಾದಾಗ ಮೋಡದ ಜಲಪಾತಗಳು ಕಂಡು ಬರುತ್ತವೆ. ಭೂಪ್ರದೇಶದ ಆಕಾರವೂ ಮುಖ್ಯವಾಗಿದೆ. ಎತ್ತರದ ಪ್ರಸ್ಥಭೂಮಿಯ ಸುತ್ತಲಿನ ಪರ್ವತ ಇಳಿಜಾರುಗಳಲ್ಲಿ ಮೋಡದ ಜಲಪಾತಗಳು ಹೆಚ್ಚಾಗಿ ಸಂಭವಿಸುತ್ತವೆ..

cloud waterfall in Mizoram
ಮೇಘ ಜಲಪಾತ
author img

By

Published : Jul 6, 2021, 6:57 PM IST

ಮಿಜೋರಾಂ : ಬೆಟ್ಟದ ಮಧ್ಯೆ ನೀರು ಹರಿಯುವುದನ್ನು ನೋಡಿರುತ್ತೀರಿ. ಆದರೆ, ಮೋಡಗಳೇ ಜಲಪಾತವಾದರೆ ಹೇಗಿರಬಹುದು ಎಂದು ಊಹಿಸಿಕೊಂಡರೆ ಅರೆ, ವ್ಹಾ.! ಎಂಥಾ ಅದ್ಭುತ ಕಲ್ಪನೆ ಎನಿಸದೇ ಇರದು. ಅಂತಹ ಸುಂದರ ಕಲ್ಪನಾಲೋಕ ಇಲ್ಲಿ ನೈಜವಾಗಿದೆ. ಈ ರಮಣೀಯ ದೃಶ್ಯ ಮಿಜೋರಾಂನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದೆ.

ಈ ಮೋಡದ ಜಲಪಾತದ ಅದ್ಭುತ ವಿಡಿಯೋವನ್ನು ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಶೇರ್​ ಮಾಡಿದ್ದಾರೆ. ಈ ದೃಶ್ಯವನ್ನು ಈಶಾನ್ಯ ಭಾರತದ ಮಿಜೋರಾಂನ ಐಜ್ವಾಲ್‌ನಲ್ಲಿ ಸೆರೆ ಹಿಡಿಯಲಾಗಿದೆ. ನಿಸರ್ಗದ ಅಚ್ಚರಿಯ ಎದುರು ಮನುಷ್ಯ ಮೂಕವಿಸ್ಮಿತನಾಗುತ್ತಾನೆ ಎನ್ನುವುದಕ್ಕೆ ಈ ಅದ್ಭುತ ದೃಶ್ಯವೇ ಸಾಕ್ಷಿ.

ಮೋಡದ ಜಲಪಾತಗಳ ರಚನೆಗೆ ಆಕಾರ ನೀಡಲು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳು ಬೇಕಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಪರ್ವತ ವಿಜ್ಞಾನದಲ್ಲಿ ಇದನ್ನು ‘ಒರೊಗ್ರಾಫಿಕ್ ಕ್ಲೌಡ್ಸ್‌’(orographic clouds) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು ಜಲಪಾತದ ಮೋಡಗಳು ಎಂದೂ ಗುರುತಿಸಲಾಗುತ್ತದೆ. ಪರ್ವತ ಪ್ರದೇಶದ ತೇವಾಂಶಯುಕ್ತ ಗಾಳಿಯಿಂದ ಮೋಡಗಳು ಇಲ್ಲಿ ಜಲಪಾತದಂತೆ ಕಾಣುತ್ತವೆಯಂತೆ.

ಕ್ಲಿಯರ್​ ಆಗಿರುವ ವಾತಾವರಣದ ಮಧ್ಯೆ ಇದ್ದಕ್ಕಿದ್ದಂತೆ ಭಾರಿ ಮಳೆ ಅಥವಾ ಹಿಮ ಮಳೆ ಉಂಟಾದಾಗ ಮೋಡದ ಜಲಪಾತಗಳು ಕಂಡು ಬರುತ್ತವೆ. ಭೂಪ್ರದೇಶದ ಆಕಾರವೂ ಮುಖ್ಯವಾಗಿದೆ. ಎತ್ತರದ ಪ್ರಸ್ಥಭೂಮಿಯ ಸುತ್ತಲಿನ ಪರ್ವತ ಇಳಿಜಾರುಗಳಲ್ಲಿ ಮೋಡದ ಜಲಪಾತಗಳು ಹೆಚ್ಚಾಗಿ ಸಂಭವಿಸುತ್ತವೆ.

ಈ ಪರಿಸರದಲ್ಲಿ ಸ್ಪಷ್ಟವಾದ ಆಕಾಶವು ತೇವಾಂಶವುಳ್ಳ ಗಾಳಿ ಸ್ಯಾಚುರೇಟೆಡ್ ಆಗುವವರೆಗೆ ಗಾಳಿಯನ್ನು ತಣ್ಣಗಾಗಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಮೇಘಗಳ ಜಲಪಾತ ಸೃಷ್ಟಿಯಾಗುತ್ತದೆ. ಪರ್ವತದ ಕೆಳಗೆ ಹೋಗುವಾಗ ಆವಿಯಾಗುವ ಮೊದಲು, ಮೋಡವು ಪರ್ವತದ ಶಿಖರದ ಬಳಿ ಇಂತಹ ಸುಂದರ ನೋಟದಲ್ಲಿ ಗೋಚರಿಸುತ್ತದೆ.

2017ರಲ್ಲಿ ಚೀನಾದ ಮೌಂಟ್ ಲುನಲ್ಲೂ ಇದೇ ರೀತಿ ಮೋಡಗಳ ಜಲಪಾತ ಕಂಡು ಬಂದಿತ್ತು. ಮಿಜೋರಾಂನಲ್ಲಿ ಸೃಷ್ಟಿಯಾದ ಈ ಅದ್ಭುತ ವಿಡಿಯೋವನ್ನು ಹಲವು ಜನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.